barmuda Chaddi argument “ಚಡ್ಡಿ” ನಿರ್ದೇಶಕನ ಖಯಾಲು “ಪತ್ರಕರ್ತರ ಎದುರು ಸವಾಲು”
“ಚಡ್ಡಿ” ನಿರ್ದೇಶಕನ ಖಯಾಲು ಪತ್ರಕರ್ತರ ಎದುರು ಸವಾಲು
ಕನ್ನಡ ಚಿತ್ರರಂಗಕ್ಕೆ 90 ವರ್ಷಗಳ ಇತಿಹಾಸವಿದೆ.
ಕೇವಲ 10ವರ್ಷಗಳ ಕೂಗಳತೆಯಲ್ಲಿ 100 ಸಂಬ್ರಮ ಗರಿ ಬಿಚ್ಚಿ ಸಂಭ್ರಮಿಸುವ ಕಾತುರದಲ್ಲಿದೆ.
ಇಲ್ಲಿ ಬಿ. ಆರ್. ಪಂತಲು ರವರಿಂದ ಹಿಡಿದು ಪುಟ್ಟಣ್ಣ ಕಣಗಾಲ್ ರಿಂದ ಇತ್ತೀಚಿನ ನಿರ್ದೇಶಕರ ವರೆಗೆ ಕನ್ನಡ ಚಿತ್ರರಂಗಕ್ಕೆ ಅವರದೇ ಆದ ಕೊಡುಗೆ ಇದೆ.
ಚಿತ್ರರಂಗವನ್ನು ಕಟ್ಟಲು ಪಣ ತೊಟ್ಟವರ ಸಂಖ್ಯೆ ಅಸಂಖ್ಯಾತ ವಾದದ್ದು.
ಇನ್ನು ಮಹಾನ್ ಕಲಾವಿದರಾದ ಡಾ,, ರಾಜಕುಮಾರ್ ರವರು ಕನ್ನಡ ಚಿತ್ರರಂಗವನ್ನು ಬಹುದೊಡ್ಡ ಮಟ್ಟಿಗೆ ಕಟ್ಟಿ ಬೆಳೆಸಿದವರ ಸಾಲಿಗೆ ಅಗ್ರಗಣ್ಯರು. ಅವರೇ ಯಾರ ಮುಂದೆಯು ಒಂದು ದಿನವಾದರು ಅಸಭ್ಯವಾಗಿ ನಡೆದುಕೊಂಡವರಲ್ಲ.
ಕನ್ನಡದ ಕಲಾ ಸೇವೆಯಲ್ಲಿ ಅಪಾರ ಕೊಡುಗೆ ಕೊಟ್ಟಿರುವ ಕಲಾವಿದರು, ತಂತ್ರಜ್ಞರು, ಸಾಹಿತಿಗಳು ಅನೇಕರ ಶ್ರಮದ ಬೆವರಿದೆ.
ಇಂತಹ ಇತಿಹಾಸ ಹೊಂದಿರುವ ಕನ್ನಡ ಚಿತ್ರರಂಗಕ್ಕೆ ಇತ್ತೀಚೆಗೆ ಬಂದ ಅರ್ದ ಬೆಂದ ಮಡಕೆಗಳು ಲೊಡ ಲೊಡನೆ ಸದ್ದು ಮಾಡಿ ನೆಲ ಸೇರುವ ಪ್ರಯತ್ನದಲ್ಲಿವೆ.
ಒಂದು ಸಿನಿಮಾ ಮಾಡಿದ ಕೂಡಲೆ ನೆಲ ಕಾಣದವರು ಇದ್ದಾರೆ ಎನ್ನಬಹುದು.
ಇತ್ತೀಚೆಗೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಚಡ್ಡಿಯಲ್ಲಿ ಬಂದ ನಿರ್ದೇಶಕ ಈಡೀ ಗೋಷ್ಠಿ ಯಲ್ಲಿ ಕಾಲು ಅಲ್ಲಾಡಿಸುತ್ತ ಕೂತಿದ್ದ ವರ್ತನೆ ಅಸಹ್ಯ ಮತ್ತು ಅಸಂಬದ್ಧ ವಾಗಿತ್ತು. ಪ್ರೆಸ್ ಮೀಟ್ ಗೆ ಬರುವಾಗ ಸರಿಯಾಗಿ ಬಟ್ಟೆಯನ್ನು ಧರಿಸುತ್ತಾರೆ ನೀವು ಹೀಗೆ ಬಂದಿರುದು ಎಷ್ಟು ಸರಿ ಎಂಬ ಪತ್ರಕರ್ತರ ಪ್ರಶ್ನೆಗೆ ನಾನು ಹೀಗೆ ಬರೋದು, ಬೇರೆಯವರ ತರ ಸೆಂಟ್ ಹೊಡ್ಕೊಂಡು, ಮೇಕಪ್ ಮಾಡ್ಕೊಂಡು ಬರಲ್ಲ ನಾನು ಲೈಫ್ ಲಾಂಗ್ ಹೀಗೆ ಬರೋದು ಎಂಬ ಉಡಾಫೆಯ ಹಾಗೂ ಬೇಜವಾಬ್ದಾರಿಯ ಉತ್ತರ ನೀಡಿದ್ದು ಸಭೆಯಲ್ಲಿದ್ದ ಹಿರಿಯ ಯಶಸ್ವಿ ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ನಟ ಪ್ರಶಾಂತ್ ರವರಿಗೂ ಹಾಗೂ ಪತ್ರಕರ್ತರಿಗೂ ಇರಿಸು ಮುರಿಸಾಗಿದ್ದು ಸುಳ್ಳಲ್ಲ

ಈ ನಿರ್ದೇಶಕನಿಗೆ ಸಾಥ್ ನೀಡುವ ತಿಪ್ಪೆ ಸಾರಿಸುವ ಕೆಲಸ ಮಾಡಿದ್ದು ಆ ಚಿತ್ರದ ಛಾಯಾಗ್ರಾಹಕ ಎಸ್. ಕೆ. ರಾವ್. ಬಾಲಿವುಡ್ ನಲ್ಲಿ ಚಡ್ಡಿ ಹಾಕ್ಕೊಂಡೆ ಶೂಟಿಂಗ್ ಮಾಡ್ತಾರಂತೆ ಆದರೆ ಈತ ಮಾತ್ರ ಪ್ರೆಸ್ ಮೀಟ್ ಗೆ ಪ್ಯಾಂಟ್ ಹಾಕ್ಕೊಂಡ್ ಬಂದಿದ್ದು ಆತನಿಗೆ ಮುಜುಗರ ಹಾಗಿರಬೇಕು. ನಿರ್ದೇಶಕರು ಚಡ್ಡಿಲೀ ಬಂದಿದ್ದಾರೆ ನಾನು ಪ್ಯಾಂಟ್ ಹಾಕ್ಕೊಂಡ್ ಬಂದಿದ್ದೀನಲ್ಲಾ ಅಂತ ಗಿಲ್ಟ್ ಕಾಡಿರ ಬೇಕು ಪಾಪ. ಅವಕಾಶಕ್ಕಾಗಿ ಬಕೇಟ್ ಹಿಡಿಯುವರ ಸಂಖ್ಯೆ ಗಾಂಧೀನಗರದಲ್ಲಿ ತುಂಬಾ ಇದೆ.ಇವೆಲ್ಲಾ ಕೆಲಸಕ್ಕೆ ಬರಲ್ಲ ಆದರೆ ಪ್ರತಿಭೆ, ಸಜ್ಜನಿಕೆ ಮತ್ತು ಸರಳತೆ ಮಾತ್ರ ಕೈ ಹಿಡಿಯುತ್ತದೆ ಎನ್ನುವುದಕ್ಕೆ ನಮ್ಮ ಹಿಂದಿನವರೇ ಸಾಕ್ಷಿ.
ಕೆಲಸದಲ್ಲಿ ಶೂನ್ಯ, ಮಾತಿನಲ್ಲಿ ಶೂರರು ತುಂಬಾ ಜನ ಬಂದು ಹೇಳ ಹೆಸರಿಲ್ಲದಂತೆ ಮರೆಯಾಗಿದ್ದಾರೆ.
ನಮ್ಮ ಕಾಳಜಿ ಎಲ್ಲಾ ಕನ್ನಡ ಸಿನಿಮಾಗಳು ಗೆಲ್ಲಬೇಕು, ಎಲ್ಲಾ ನಿರ್ಮಾಪಕರು ಹಾಕಿದ ಹಣಕ್ಕೆ ಮೋಸವಾಗದಿರಲಿ ಎಂಬುದು ನಮ್ಮ ಆಶಯ, ಒಬ್ಬ ನಿರ್ದೇಶಕನ ಕ್ರಿಯಾಶೀಲತೆ ಅವನ ಬಟ್ಟೆ ಯಿಂದ ಅಳೆಯಲು ಆಗುವುದಿಲ್ಲ ಆದರೆ ಎಲ್ಲದಕ್ಕೂ ಒಂದು ಮಿತಿ ಇರುತ್ತೆ, ಸಮಾಜದಲ್ಲಿ ಸಿನಿಮಾ ತುಂಬಾ ಪ್ರಭಾವ ಬೀರುವಂತ ಮಾಧ್ಯಮ ಜನ ಸೆಲೆಬ್ರಿಟಿ ಗಳನ್ನು ಅನುಸರಿಸುತ್ತಾರೆ. ಈತ ಸೆಲೆಬ್ರಿಟಿ ಅಲ್ಲ ನಿಜ ಆದರೆ ಸೆಲೆಬ್ರಿಟಿ ಗಳ ಮದ್ಯ ಕುಳಿತಾಗ ಒಂದಿಷ್ಟು ಗಂಭಿರತೆ, ಮಾತಿನ ಮೇಲೆ ಹಿಡಿತ ಇರಬೇಕಾಗುತ್ತದೆ. ಇವರು ಚಡ್ಡಿಯಲ್ಲಾದರು ಬರಲಿ ಡೈಪರ್ ಹಾಕ್ಕೊಂಡು ಓಡಾಡಲಿ ಯಾರು ಬೇಡ ಅಂದ್ರು ಆದರೆ…

ನಾವೆಲ್ಲ ಒಂದು ಸುಸಂಸ್ಕೃತಿಯ ನೆರಳಲ್ಲಿ ಬದುಕುತ್ತಿದ್ದೇವೆ
ವೈಯಕ್ತಿಕವಾಗಿ ಯಾರು ಹೇಗೆ ಬೇಕಾದರು ಇರಬಹುದು ಆದರೆ ಒಂದು ವೇದಿಕೆಯ ಮೇಲೆ ಜವಾಬ್ದಾರಿ ಸ್ಥಾನದಲ್ಲಿ ಕೂತಾಗೆ ಹೇಗಿರಬೇಕು ಎನ್ನುವ ಸಾಮಾನ್ಯ ಜ್ಞಾನ ಇರಬೇಕಾಗುತ್ತೆ. ಎನ್ನುವುದು ನಮ್ಮೆಲ್ಲರ ಕಾಳಜಿ.