Bank of Bhagyalakshmi movie poster released by director simple Suni. ನಿರ್ದೇಶಕ ಸಿಂಪಲ್ ಸುನಿ ಅವರಿಂದ ಬಿಡುಗಡೆಯಾಯಿತು “”ಬ್ಯಾಂಕ್ of ಭಾಗ್ಯಲಕ್ಷ್ಮಿ ಚಿತ್ರದ ಪೋಸ್ಟರ್ .

ನಿರ್ದೇಶಕ ಸಿಂಪಲ್ ಸುನಿ ಅವರಿಂದ ಬಿಡುಗಡೆಯಾಯಿತು “”ಬ್ಯಾಂಕ್ of ಭಾಗ್ಯಲಕ್ಷ್ಮಿ ಚಿತ್ರದ ಪೋಸ್ಟರ್ .

ಇದು ದೀಕ್ಷಿತ್ ಶೆಟ್ಟಿ ಅಭಿನಯದ ಚಿತ್ರ‌ .

‘ರಂಗಿ ತರಂಗ’, ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಖ್ಯಾತಿಯ ನಿರ್ಮಾಪಕ ಹೆಚ್.ಕೆ ಪ್ರಕಾಶ್ ತಮ್ಮ ನಿರ್ಮಾಣದ 5 ನೇ ಚಿತ್ರದ ಪೋಸ್ಟರ್ ಇತ್ತೀಚಿಗೆ ಬಿಡುಗಡೆಯಾಗಿದೆ.
ದಿಯಾ , ದಸರಾ, KTM ಹಾಗೂ ಬ್ಲಿಂಕ್ ಅಭಿನಯಕ್ಕೆ ಹೆಸರು ಮಾಡಿದ ಮೇಲೆ ತೆಲುಗು, ಮಲಯಾಳಂಗಳಲ್ಲಿ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿರುವ ದೀಕ್ಷಿತ್ ಶೆಟ್ಟಿ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಬೃಂದಾ ಆಚಾರ್ಯ ಈ ಚಿತ್ರದ ನಾಯಕಿ. ಪ್ರೇಮಂ ಪೂಜ್ಯಂ ಹಾಗೂ ಕೌಸಲ್ಯ ಸುಪ್ರಜಾ ಯಶಸ್ಸಿನ ಬಳಿಕ ಬೃಂದಾ ಆಚಾರ್ಯ “ಸನ್ ಆಫ್ ಸತ್ಯಮೂರ್ತಿ” ಚಿತ್ರದಲ್ಲಿ “ಬ್ಯುಸಿ ಆಗಿದ್ದಾರೆ.

ಚಿತ್ರಕ್ಕೆ ನವ ನಿರ್ದೇಶಕ ಅಭಿಷೇಕ M ಅವರ ನಿರ್ದೇಶನವಿದೆ. ನಿರ್ದೇಶಕ ಸಿಂಪಲ್ ಸುನಿ ಜೊತೆ ‘ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ’, ‘ಬಹುಪರಾಕ್’ ಮತ್ತು ‘ಆಪರೇಷನ್ ಅಲಮೇಲಮ್ಮ’ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಹಾಗು ಕೆಲ ಸಿನೆಮಾಗಳಿಗೆ ಸಂಕಲನ ಮಾಡಿದ ಅನುಭವ ಇವರಿಗಿದೆ. ‘ಪಿನಾಕ’ ಎಂಬ VFX ಸ್ಟುಡಿಯೋ ಕೂಡ ಹೊಂದಿರುವ ಅಭಿಷೇಕ್ ಎಂ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ‘ಮೂಲಕ ಚೊಚ್ಚಲ ಬಾರಿ ನಿರ್ದೇಶನಕ್ಕೆ ಇಳಿದಿದ್ದಾರೆ

ಬ್ಯಾಂಕ್ ವೊಂದನ್ನು ದರೋಡೆ ಮಾಡಲು ಹೊರಟವರ ಸುತ್ತ ಹೆಣೆಯಲಾದ ಹಾಸ್ಯ ಪ್ರಧಾನ ಕಥಾಹಂದರ ಈ ಚಿತ್ರ ಒಳಗೊಂಡಿದೆ. ಸಹಕಲಾವಿದರಾಗಿ ಸಾಧುಕೋಕಿಲ, ಗೋಪಾಲ ಕೃಷ್ಣ ದೇಶಪಾಂಡೆ,ಉಷಾ ಭಂಡಾರಿ, ಭರತ್,ವಿಶ್ವನಾಥ್, ಹರೀಶ್ ಸಮಷ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಶ್ರೇಯಸ್ ಶರ್ಮಾ, ಶ್ರೀ ವತ್ಸ, ವಿನುತ್ ಮುಂತಾದ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ

ಬೆಂಗಳೂರು, ತುಮಕೂರು ಹಾಗು ಚಿತ್ರದುರ್ಗ ಸುತ್ತ 80 ಪ್ರತಿಶತ ಚಿತ್ರೀಕರಣ ಮುಗಿದಿದೆ‌‌. ಮುಂದಿನ ತಿಂಗಳಿನೊಳಗೆ ಚಿತ್ರೀಕರಣ ಮುಕ್ತಾಯವಾಗಲಿದೆ. ಆದಷ್ಟು ಬೇಗ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ.
ಹಾಗೆ ನಿರ್ಮಾಪಕರು ಚಿತ್ರವನ್ನು ಕನ್ನಡದ ಜೊತೆಗೆ ತೆಲುಗಿನಲ್ಲಿ ತೆರೆ ಮೇಲೆ ತರಲು ಸಜ್ಜಾಗಿದ್ದಾರೆ
ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಅಭಿಷೇಕ್ ಜಿ ಕಾಸರಗೋಡು ಕ್ಯಾಮೆರಾ ನಿರ್ದೇಶನ, ರಘು ಮೈಸೂರ್ ಕಲಾ ನಿರ್ದೇಶನ, ಭೂಷಣ್ ಮಾಸ್ಟರ್ ನೃತ್ಯ ಈ ಚಿತ್ರಕ್ಕಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor