Banadariyalli movie Review ಬಾನದಾರಿಯಲ್ಲಿ ಚಿತ್ರ ವಿಮರ್ಶೆ. ಬಾನದಾರಿಯ ಪಯಣದಲ್ಲಿ ನೆನಪುಗಳ ಬುತ್ತಿ
ಬಾನದಾರಿಯಲ್ಲಿ ನೆನಪುಗಳ ಬುತ್ತಿ
ಚಿತ್ರ ವಿಮರ್ಶೆ.
ನಿರ್ಮಾಣ ಸಂಸ್ಥೆ – ಶ್ರೀವಾರಿ ಟಾಕೀಸ್
ಚಿತ್ರ – ಬಾನದಾರಿಯಲ್ಲಿ
ನಿರ್ಮಾಣ : ಪ್ರೀತಾ ಜಯರಾಮ್
ನಿರ್ದೇಶನ : ಪ್ರೀತಮ್ ಗುಬ್ಬಿ
ಸಂಗೀತ – ವಿ. ಹರಿಕೃಷ್ಣ
ಛಾಯಾಗ್ರಣ – ಅಭಿಲಾಷ್ ಕಲತಿ
ಸಂಭಾಷಣೆ – ಮಾಸ್ತಿ ಉಪ್ಪಾರಳ್ಳಿ
Rating – 3.5/5
ಕಲಾವಿದರು – ಗಣೇಶ್, ರಂಗಾಯಣ ರಘು, ರೇಷ್ಮಾ ನಾಣಯ್ಯ, ರುಕ್ಮಿಣಿ ವಸಂತ್.
ಪುನೀತ್ ಬಾಲನಟನಾಗಿ ಅಭಿನಯಿಸಿದ ಭಾಗ್ಯವಂತ ಚಿತ್ರದ “ಬಾನದಾರಿಯಲ್ಲಿ ಸೂರ್ಯ ಜಾರಿಹೋದ ಚಂದ್ರ ಮೇಲೆ ಬಂದ” ಹಾಡಿನ ಮೂಲಕ ಸಿನಿಮಾ ತೆರೆದು ಕೊಳ್ಳುತ್ತದೆ.
ನಾಯಕಿ ಲೀಲಾ (ರುಕ್ಮಿಣಿ ವಸಂತ್)
ಸಣ್ಣ ಮಗುವಾಗಿದ್ದಾಗ ಕಾಡಿನಲ್ಲಿ ಸ್ವತಂತ್ರವಾಗಿರುವ ಪ್ರಾಣಿಗಳನ್ನು ನೋಡಬೇಕು ಎನ್ನುವ ಆಸೆ. ಆ ಆಸೆಗೆ ಆಫ್ರಿಕಾ ಕಾಡಿಗೆ ಕರೆದು ಕೊಂಡು ಹೋಗುವೆ ಎಂದು ಮಾತು
ನೀಡುವ ತಂದೆ (ರಂಗಾಯಣ ರಘು) ಅಲ್ಲಿಂದ ಶುರುವಾಗುತ್ತದೆ ಬಾನದಾರಿಯಲ್ಲಿಯ ಪಯಣ.
ಒಬ್ಬ ದೊಡ್ಡ ಕ್ರಿಕೇಟ್ ಆಟಗಾರನಾಗಿ ಬದುಕು ಕಟ್ಟಿಕೊಳ್ಳಬೇಕೆಂಬ ಆಸೆ ಕಥಾನಾಯಕ ಸಿದ್ದುಗೆ (ಗಣೇಶ್) ಆದರೆ ಅತ ಸೆಲೆಕ್ಟ್ ಆಗುವುದಿಲ್ಲ.
ಅದರಿಂದ ಬೇಸತ್ತವನಿಗೆ “ಮರ ಕಡಿಬೇಡಿ ಪರಿಸರ ಉಳಿಸಿ” ಎಂಬ ಅಭಿಯಾನದಲ್ಲಿ ನಾಯಕಿ ಲೀಲಾ ಸಿಗುತ್ತಾಳೆ.
ಸಿಕ್ಕದಿನವೇ ಪ್ರೇಮ ನಿವೇದನೆ , ಮಾರನೇ ದಿನ ಅವಳಿಗಾಗಿ ರೌಡಿಗಳೊಂದಿಗೆ ಕಾದಾಟ, ನಂತರ ನಾವಿಬ್ಬರು ಮದುವೆ ಆಗೋಣ್ವಾ ಎನ್ನುವ ನಾಯಕ, ನಮ್ಮಪ್ಪನ್ನ ಒಪ್ಪಿಸು ಎನ್ನುವ ನಾಯಕಿ.
ನಂತರ ಮೂರು ದಿನದಲ್ಲಿ ಮದುವೆ.
ನಂತರ ನಡೆಯುವ ಒಂದು ಅವಗಡ ಕಥೆಯ ದಾರಿಯೇ ಬದಲಾಗುತ್ತದೆ.
ಏನಾಗುತ್ತಿದೆ ಎನ್ನುವಷ್ಟರಲ್ಲಿ ಏನೇನೋ ಆಗೋಗುತ್ತದೆ. ಪ್ರೇಕ್ಷಕ ಸಾವಾರಿಸಿಕೊಳ್ಳುವಷ್ಟರಲ್ಲಿ ಇಂಟರ್ ವೆಲ್ ಆಗುತ್ತದೆ.
ಅಷ್ಟು ವೇಗವಾಗಿ ಕಥೆಯ ಓಟವಿದೆ.

ನಾಯಕಿ ಅಂತರರಾಷ್ಟ್ರೀಯ ಈಜು ಪಟು, ಮಕ್ಕಳಿಗೆ ಸ್ವಿಮ್ ಕೋಚ್. ಅವಳಿಗೆ ಅಪ್ಪನೇ ಎಲ್ಲಾ ನನ್ನಪ್ಪ ಸುಪ್ರೀಮ್ ಹೀರೋ . ಬಯಕೆ ತನ್ನದಾದರು ನಿರ್ಧಾರ ಅಪ್ಪನದು ಎನ್ನುವ ಹುಡುಗಿ.
ಆತ ಸಿಂಗಲ್ ಪೇರೆಂಟ್
ಅಪ್ಪ , ಆತನಿಗೆ ಮಗಳೇ ಸರ್ವಸ್ವ, ಮಗಳು ಎಂದರೆ ಪ್ರಾಣ ಅವರಿಬ್ಬರ ಬದುಕಿನ ಕೋಟೆಯಲ್ಲಿ ಬಾನದಾರಿಯ ಹಾಡಿನದೇ ಮಮತೆ, ವಾತ್ಸಲ್ಯದ ಕೊಂಡಿ.
ನಾಯಕನ ಅಜ್ಜಿಗೆ ಕಪಿಲ್ ದೇವ್ ಮೇಲೆ ಕ್ರಷ್ ಅವರ ಆಸೆ ನಾಯಕನ ಆಸೆ ಎರಡು ಒಂದೇ.. ಭಾರತವನ್ನು ಪ್ರತಿನಿಧಿಸುವ ಕ್ರಿಕೇಟ್ ಆಟಗಾರನಾಗಬೇಕೆನ್ನುವುದು , ಪ್ರಯತ್ನಗಳು ನಿರಂತರ, ಆದರೆ ವಿಫಲಗಳು ನಿರಂತರ. ಜೊತೆಗೆ ಅಜ್ಜಿಯ ಉಪ್ಪಿನಕಾಯಿ ಬಿಸಿನೆಸ್ ನಡೆಸುವ ಸಿದ್ದು (ಗಣೇಶ್)
ಇದು ಮೊದಲ ಭಾಗದ ಕಥೆ

ಸಿನಿಮಾದ ಎರಡನೇ ಭಾಗದಲ್ಲಿ ಧೀಡಿರನೇ ಬರುವ ಬ್ಲಾಗರ್ ರೇಷ್ಮಾನಾಣಯ್ಯ
ಈಕೆ ಒಂಟಿಯಾಗಿ ಊರೂರು ಸುತ್ತುವ, ಅಲ್ಲಿನ ಸಂಸ್ಕೃತಿಯ ಬಗ್ಗೆ ಜನ ಜೀವನದ ಬಗ್ಗೆ ಲೈವ್ ಹೋಗುವ ಹುಡುಗಾಟದ ಹುಡುಗಿ.
ರಂಗಾಯಣ ರಘು, ಗಣೇಶ್, ರೇಷ್ಮಾ ನಾಣಯ್ಯ ಆಫ್ರಿಕಾ ಕಾಡುಗಳಲ್ಲಿ ಬರ್ಜರಿಯಾಗಿ ಟ್ರಿಪ್ ಹೊಡೆದಿದ್ದಾರೆ.
ಹಾಗೆ ಪ್ರೇಕ್ಷಕರಿಗೂ ಒಳ್ಳೆಯ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ ಛಾಯಾಗ್ರಾಹಕ ಅಭಿಲಾಷ್ ಕಲತಿ.
ಸಿನಿಮಾದ ಓಟಕ್ಕೆ ಮೆರಗು ಕೊಟ್ಟಿರುವುದೇ ಆಫ್ರಿಕಾದ ಕಾಡಿನ ದೃಶ್ಯ. ಅಲ್ಲಿನ ಕಾಡಿನ ಜನರ ಹಾಡು ಪಾಡು.

ಇನ್ನೂ ವಿ. ಹರಿಕೃಷ್ಣರವರ ಮೆಲೋಡಿ ಸಂಗೀತ ಆಫ್ರಿಕಾದ ಕಾಡಿನಲ್ಲಿ ತಂಗಾಳಿಯಂತೆ ತೇಲಿ ಬಂದಿದೆ.
ಗಣೇಶ್ ಸಿನಿಮಾಗಳೆಂದ್ರೆ ಒಂದಷ್ಟು ಪಂಚಿಂಗ್ ಡೈಲಾಗ್ ಗಳು ಪ್ರೀತಿ ಪ್ರೇಮದ ಬಗ್ಗೆ ನಿರಾಳವಾಗಿ ಹರಿದು ಬರುವ ಸಂಭಾಷಣೆ ಇಲ್ಲಿ ಕಾಣಿಸೋದಿಲ್ಲ.
ನಾಯಕಿ ರೇಷ್ಮಾ ನಾಣಯ್ಯ ಹೇಳುವ ಮಾತು ಬೆಳಿಗ್ಗೆನೇ ಮಾರ್ಕೇಟ್ ಗೆ ಹೋಗಿ ತಿಂಡಿತಂದು ಅಡುಗೆ ಮಾಡಿದ್ರು ಅನ್ನೋದು
ಹಾಗೂ ಗಣೇಶ್ ಹೇಳುವ
ಈಡೀ ಎಲೆಯಲ್ಲಿ ಅನ್ನ, ಹಪ್ಪಳ, ಎಲ್ಲಾ ಊಟ ನೀವಾದ್ರೆ ನಾನು ಎಲೆಯ ತುದಿಯಲ್ಲಿರುವ ಉಪ್ಪಿನಕಾಯಿ ಚೂರು ಅಷ್ಟೇ. ಎನ್ನುವ ಸಂಭಾಷಣೆ
ಗಮನ ಸೆಳೆಯುತ್ತದೆ.

ರಂಗಾಯಣ ರಘುರವರ ಪಾತ್ರವಂತು ಸಿನಿಮಾದ ಆತ್ಮ ಎನ್ನಬಹುದು.
ರಂಗಾಯಣ ರಘು ಅವರನ್ನು ಪ್ರೇಕ್ಷಕರು ಈ ಸಿನಿಮಾದಲ್ಲಿ ಬೇರೆಯದೇ ರೀತಿಯಾಗಿ ಕಣ್ತುಂಬಿಕೊಳ್ಳುತ್ತಾರೆ.
ಎಲ್ಲಾ ಸಿನಿಮಾಗಳಲ್ಲಿ ಅಪ್ಪಾ ಮಗನ, ಅಮ್ಮ ಮಗನ, ಸೆಂಟಿಮೆಂಟ್ ನೋಡಿರ್ತೀರಿ ಆದರೆ ಈ ಚಿತ್ರದಲ್ಲಿ
ಮೊದಲಾರ್ಧದಲ್ಲಿ ಅಪ್ಪಾ ಮಗಳ ಸೆಂಟಿಮೆಂಟ್ ದ್ವಿತೀಯಾರ್ಧದಲ್ಲಿ ಮಾವ ಅಳಿಯನ ಸೆಂಟಿಮೆಂಟ್ ನೋಡಬಹುದು.
ರಂಗಾಯಣ ರಘು ಅಪ್ಪನಾಗಿ, ಮಾವನಾಗಿ ಅದ್ಬುತ ಅಭಿನಯ ನೀಡಿದ್ದಾರೆ.
ಈ ಭಾರಿಯ ಪೋಷಕ ನಟ ಪ್ರಶಸ್ತಿಯಂತು ಕಂಡಿತವಾಗಿ ರಘುರವರಿಗೆ ಬರುವುದರಲ್ಲಿ ಎರಡು ಮಾತಿಲ್ಲ.
ಇನ್ನೂ ರುಕ್ಮಿಣಿ ಹೊಸ ಮುಖ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.
ಅವರ ಅಭಿನಯವೂ ಕೂಡ ಚನ್ನಾಗಿದೆ.
ಹಾಗೇ ರೇಷ್ಮಾ ನಾಣಯ್ಯ ಪ್ರೇಮ್ ನಿರ್ದೇಶನದ “ಏಕ್ ಲವ್ ಯಾ” ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟವರು. ಈ ಚಿತ್ರದಲ್ಲಿ ಲವ ಲವಿಕೆಯಲ್ಲಿ ಎರಡನೇ ಭಾಗವನ್ನು ನಡೆಸಿಕೊಂಡು ಹೋಗಿದ್ದಾರೆ.

ಪ್ರೀತಮ್ ಗುಬ್ಬಿಯವರ ನಿರ್ದೇಶನ ಹೊಸತನ್ನು ಹೇಳಿದೆ. ಆದರೆ ಇನ್ನೂ ಸ್ವಲ್ಪ ಚನ್ನಾಗಿ ಮಾಡಬಹುದಿತ್ತೇನೋ ಅನ್ನಿಸುತ್ತದೆ.
ಒಟ್ಟಿನಲ್ಲಿ ಇಂದಿನ ಸಮಾಜಕ್ಕೆ ಒಪ್ಪುವ ಚಿತ್ರ ಇದಾಗಿದೆ.
ಕಥೆ, ಚಿತ್ರಕಥೆ ಹೊಸದಾಗಿದೆ.
ಚಿತ್ರದ ಮತ್ತೊಂದು ವಿಶೇಷವೆಂದರೆ KRG ಸಂಸ್ಥೆಯ ನೂರನೇ ಚಿತ್ರದ ಡಿಷ್ಟ್ರಿಬ್ಯೂಷನ್ ಇದಾಗಿದೆ. ಕಾರ್ತಿಕ್ ಹಾಗೂ ಯೋಗಿಯವರ ನಿರಂತರ ಸಾಹಸದ ದಾರಿಯಲ್ಲಿ ಬಾನದಾರಿ 100ನೇ ಚಿತ್ರ

ಕಥೆಯ ಪ್ರಾರಂಭದಿಂದ ಕೊನೆಯವರೆಗೂ ಪುನೀತ್ ಧ್ವನಿ “ಬಾನದಾರಿಯಲ್ಲಿ ಸೂರ್ಯ ಜಾರಿಹೋದ” ಹಾಡಿನ ಮೂಲಕ ಕಾಡುತ್ತದೆ
ಗಣೇಶ್ ಗೆ ಇಬ್ಬರು ನಾಯಕಿಯರು ಏಕೆ, ಯಾರು ಗಣೇಶ್ ಜೋಡಿಯಾಗುತ್ತಾರೆ,.? ಈ ಇಬ್ಬರು ಹುಡುಗಿಯರೊಂದಿಗೆ ರಂಗಾಯಣ ರಘುವಿನ ಸಂಬಂಧ ಏನು..?
ಆಫ್ರಿಕಾ ಪ್ರವಾಸ ಏಕೆ..?
ತಿಳಿಯಲು ಈ ಕ್ರಿಕೆಟ್, ಸ್ವಿಮ್ಮರ್, ಬ್ಲಾಗರ್ ನಡುವಿನ ಕಥೆಯ ಪಯಣದ ಬಾನದಾರಿಯಲ್ಲಿ ನೀವು ಪಯಣಿಸಲು ಯಾವುದೇ ಅಭ್ಯಂತರವಿಲ್ಲ ಈಗಲೇ ನಿಮ್ಮ ಟಿಕೇಟ್ ಬುಕ್ ಮಾಡಿಕೊಳ್ಳಿ ಆಫ್ರಿಕಾದ ಕಾಡುಗಳಲ್ಲಿ ನೈಜ ಪ್ರಾಣಿಗಳ ಜೊತೆ ಅಡ್ಡಾಡಿ ಬನ್ನಿ. ಜೊತೆಗೆ ಪುನೀತ್ ಧ್ವನಿ ನಿಮ್ಮನ್ನು ಕಾಡಿಸುತ್ತದೆ, ಹಾಡಿಸುತ್ತದೆ.
ಮತ್ತೊಂದು