Back benchers movie review. “ಬ್ಯಾಕ್ ಬೆಂಚರ್ಸ್” ಚಿತ್ರ ವಿಮರ್ಶೆ. ಇಂದಿನ ಕಾಲೇಜಿನ ಸ್ಟೂಡೆಂಟ್ಸ್ ಗಳ ಅತೀರೇಕದ ಬದುಕಿಗೆ ಕನ್ನಡಿ
“ಬ್ಯಾಕ್ ಬೆಂಚರ್ಸ್”
ರೇಟಿಂಗ್ : 3/5
ಸ್ಕೂಲು ಕಾಲೇಜಿಗಳಲ್ಲಿ ಎರಡು ವರ್ಗದ ಹುಡುಗರಿರುತ್ತಾರೆ.
ಒಂದು ಮುಂದಿನ ಬೆಂಚಿನ ಬುದ್ದಿವಂತ ಪುಸ್ತಕದ ಹುಳುಗಳು ಅಂತಲೇ ಕರೆಸಿಕೊಳ್ಳುವ ಬುಕ್ಕಿಷ್ ಗಳಿರುತ್ತಾರೆ.
ಹಾಗೆಯೇ ಹಿಂದಿನ ಬೇಂಚಿನ ತರಲೆ, ಪೋಲಿತನ, ಉಡಾಫೆಗಳ ಜೊತೆಗೆ ಒಂದಷ್ಟು ಪುಸ್ತಕದಾಚೆಗಿನ ಲೋಕ ಜ್ಞಾನ ವಿರುವ ಹುಡುಗರು.
ಇಲ್ಲಿ ನಿರ್ದೇಶಕರು ಮುಂದಿನ ಬೇಂಚಿನಲ್ಲಿದ್ದ ಚನ್ನಾಗಿ ಓದುತ್ತಿದ್ದ ಹುಡುಗರನ್ನು ಕಾರಣಾಂತರದಿಂದ ಹಿಂದಿನ ಬೇಂಚಿಗೆ ವರ್ಗಾಯಿಸುವುದರ ಜೊತೆಗೆ ಅವರಿಗೆ “ಬ್ಯಾಕ್ ಬೆಂಚರ್ಸ್” ಎಂಬ ಹಣೆಪಟ್ಟಿಯನ್ನು ಕಟ್ಟಿ ಹುಚ್ಚಾಪಟ್ಟೆ ಕುಣಿಸಿ ಆಡಿಸಿದ್ದಾರೆ.

ಏನು ತಿಳಿಯದ ಪ್ರಾಮಾಣಿಕ ಹುಡುಗರು ಹಳೆಯ ಕೊನೆ ಬೇಂಚಿನ ಹುಡುಗರ ಕೈಗೆ ಸಿಲುಕಿ ಮಾಡಬಾರದ್ದೆಲ್ಲಾ ಮಾಡಿ, ಆಡಬಾರದ್ದೆಲ್ಲಾ ಆಡಿ ಕೊನೆಗೆ ಪೋಲಿಸರ ಆತಿಥ್ಯಕ್ಕೆ ರೇಪಿಷ್ಟ್ ಗಳು ಎನ್ನುವ ಅಪರಾಧಿಗಳಾಗಿ ಸಿಲುಕುವುದರೊಂದಿಗೆ ಸಿನಿಮಾದ ಕಥೆ ತೆರೆದು ಕೊಳ್ಳುತ್ತದೆ.
ಸ್ಟೂಡೆಂಟ್ ಲೈಫ್ ಗೋಲ್ಡನ್ ಲೈಫ್ ಅಂತಾರೆ ಆದರೆ ಏಕೋ ನಿರ್ದೇಶಕರು ಸ್ವಲ್ಪ ಮುನ್ನುಗ್ಗಿ ವಿಧ್ಯಾರ್ಥಿ ಜೀವನವನ್ನು ಕುಡಿತ, ಸಿಗರೇಟು, ಗಾಂಜಾ, ಪ್ರೇಮಾ ಕಾಮಾದ ಅಮಲಿನಲ್ಲಿ ತೇಲಾಡಿಸಿದ್ದಾರೆ.
ಅರೆ ಬೆತ್ತಲೆಯಾಗಿ ರಸ್ತೆಯಲ್ಲಿ ಓಡಾಡಿಸಿದ್ದಾರೆ.
ರೇಪಿಷ್ಟ್ ಗಳ ಹೆಸರಿನಲ್ಲಿ ಸಿಕ್ಕಿ ಬಿದ್ದು ಎನ್ಕೌಂಟರ್ ಆಗಲು ಹೊರಟ ಹುಡುಗರ ಫ್ಲಾಷ್ ಬ್ಯಾಕ್ ನೊಂದಿಗೆ ಬ್ಯಾಕ್ ಬೆಂಚರ್ಸ್ ಕಥೆ ಒಂದೊಂದಾಗಿ ತೆರೆದುಕೊಳ್ಳುತ್ತದೆ.

ಕಾಲೇಜಿನಲ್ಲಿ ಓದಲು ಹೊರಟ ಹುಡುಗ ಹುಡುಗಿಯರು ತಂದೆ ತಾಯಂದಿರಿಗೆ ಹೇಗೆಲ್ಲಾ ಯಾಮಾರಿಸಿ ದುಷ್ಚಟಗಳಿಗೆ ದಾಸರಾಗುತ್ತಾರೆ ಎನ್ನುವುದನ್ನು ನಿರ್ದೇಶಕ ಕಮ್ ನಿರ್ಮಾಪಕ ರಾಜಶೇಕರ್ ತೆರೆಯ ಮೇಲೆ
ಹಾಸ್ಯ, ತುಂಟಾಟ, ಮೋಜು ಮಸ್ತಿಯೊಂದಿಗೆ ಬ್ಯಾಕ್ ಬೆಂಚರ್ಸ್ ಅನ್ನು ತೆರೆದಿಟ್ಟಿದ್ದಾರೆ.

ಯಾವುದೇ ಆಗಲಿ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವುದಕ್ಕೆ ಈ ಚಿತ್ರದ ಕಥೆಯೇ ಸಾಕ್ಷಿ.
ಹಿರಿಯ ನಟ ಸುಚ್ಚೇಂದ್ರ ಪ್ರಸಾದ್ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಶಃ
ಇದೇ ಮೊದಲ ಬಾರಿಗೆ ಸುಚೀಂದ್ರಪ್ರಸಾದ್ ಅವರು ತಮ್ಮ ಚೌಕಟ್ಟನ್ನು ಬಿಟ್ಟು ಹೊರಬಂದು ನಟಿಸಿದ್ದಾರೆ. ಅಮ್ಮನವರ ಗಂಡನಾಗಿ, ದೇಹದ ವಾಂಛೆಗಳಿಗೆ ತಹ ತಹಿಸುವ ಕಾಮಿಡಿ ಅಪ್ಪನಾಗಿ ಕಾಣಿಸಿಕೊಂಡಿದ್ದಾರೆ.

ಇನ್ನುಳಿದಂತೆ ರಂಜನ್, ಜತಿನ್ ಆರ್ಯನ್, ಶಶಾಂಕ್ ಸಿಂಹ
ಆಕಾಶ್ ಎಂ.ಪಿ, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್,ಚ ಕುಂಕುಮ್ ಹೆಚ್
ಅನುಷಾ ಸುರೇಶ್ ಚಿತ್ರದಲ್ಲಿ ಅಭಿನಯಿಸಿದ್ದಾರೆ
ನಕುಲ್ ಅಭಯಂಕರ್ ರವರ ಸಂಗೀತ ಅರ್ಥಪೂರ್ಣ ವಾಗಿದೆ.
ಮನೋಹರ್ ಜೋಶಿ ಛಾಯಾಗ್ರಾಹಕನಾಗಿ ಚನ್ನಾಗಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.

ಸುಖಾ ಸುಮ್ಮನೆ ಪೋಲೀಸರ ಎನ್ಕೌಂಟರ್ ಗೆ ಬಲಿಯಾಗಲೂ ಸಿದ್ದವಾಗಿದ್ದವರ ಕಥೆ ಏನಾಗುತ್ತದೆ , ಕುಡಿತಕ್ಕೆ ದಾಸರಾದವರು ಅದರಿಂದ ಹೇಗೆ ಹೊರಗೆ ಬರುತ್ತಾರೆ.?
ಇಂದಿನ ಕಾಲೇಜಿನ ಸ್ಟೂಡೆಂಟ್ಸ್ ಗಳ ಅತೀರೇಕದ ಬದುಕಿಗೆ ಪಾಠವಾಗುತ್ತಾರಾ..?
ಎನ್ನುವ ಕುತೂಹಲಗಳನ್ನು ತಣಿಸಿಕೊಳ್ಳಲು ಪ್ರೇಕ್ಷಕರು ಸಿನಿಮಾ ನೋಡಲು ಚಿತ್ರ ಮಂದಿರಕ್ಕೆ ಬರಬೇಕು.

ಸ್ವಲ್ಪ ಅತಿಯಾದರೂ ಮಿತಿಯಾಗಿ ಸಮಾಜಕ್ಕೊಂದು ಸಂದೇಶವಿದೆ.
ಪ್ರೇಕ್ಷಕರು ಸಿನಿಮಾ ನೋಡಿ ಈ ತಂಡಕ್ಕೆ ಪ್ರೋತ್ಸಾಹ
ನೀಡಿ ಕನ್ನಡ ಚಿತ್ರಗಳನ್ನು ಗೆಲ್ಲಿಸಬೇಕಿದೆ.