ಬಾ ನಲ್ಲೆ ಮದುವೆಗೆ ಟೀಸರ್ ಮತ್ತು ಹಾಡುಗಳು ಬಿಡುಗಡೆ
ಬಾ ನಲ್ಲೆ ಮದುವೆಗೆ ಟೀಸರ್ ಮತ್ತು ಹಾಡುಗಳು ಬಿಡುಗಡೆ
ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ’ಬಾ ನಲ್ಲೆ ಮದುವೆಗೆ’ ಚಿತ್ರದ ಟೀಸರ್ ಮತ್ತು ಐದು ಹಾಡುಗಳ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ’ಹುಡುಗಿ ನೋಡಿ ಹುಚ್ಚರಾಗಬೇಡಿ’ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ಚಲನಚಿತ್ರ ಶಾಲೆಯಲ್ಲಿ ತರಭೇತಿ ಪಡೆದುಕೊಂಡಿರುವ ಚಾಮರಾಜನಗರದ ಎಂ.ಯೋಗೇಶ್‌ನಂದನ್ ಸಿನಿಮಾಕ್ಕೆ ರಚನೆ,ಚಿತ್ರಕಥೆ,ಸಂಭಾಷಣೆ, ಸಾಹಿತ್ಯ, ನಿರ್ದೇಶನ ಜತೆಗೆ ಭುಜಂಗೇಶ್ವರ ಉರುಕಾತೇಶ್ವರಿ ಮೂವೀಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಶೀರ್ಷಿಕೆ ಹೇಳುವಂತೆ ಪ್ರೀತಿಯ ಕಥೆಯನ್ನು ಹೊಂದಿದೆ. ಅತಿಯಾದ ಪ್ರೀತಿ ಇಬ್ಬರಿಂದ ಆದರೆ ಅದು ಮುಳುವಾಗುತ್ತದೆ. ಅದರಂತೆ ಕಷ್ಟಗಳು ಎದುರಾಗಿ, ಕುಟುಂಬದ ಕಡೆಯಿಂದಲೂ ಆಕ್ಷೇಪಗಳು ಬರುತ್ತದೆ. ಇದರಿಂದ ತೊಂದರೆ ಅನುಭವಿಸಬೇಕಾಗುತ್ತದೆ. ಅಲ್ಲದೆ ಸಂಬಂದಿಕರ ಮಾತು ಮೀರಿ ಆಕೆ ತೆಗೆದುಕೊಂಡ ನಿರ್ಧಾರಿಂದ, ಅವನು ಯಾವ ರೀತಿ ಕಷ್ಟಪಡುತ್ತಾನೆ. ಆದಕಾರಣ ತುಂಬಾ ಇಷ್ಟಪಡುವುದು ಒಳ್ಳೆಯದಲ್ಲವೆಂದು ಸಂದೇಶದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ.

ಹಳ್ಳಿ ಹುಡುಗನಾಗಿ ಅರ್ಜುನ್ ನಾಯಕ. ಮುಗ್ದೆಯಾಗಿ ಶೋಭಾ ನಾಯಕಿ. ಇವರೊಂದಿಗೆ ಮೀಸೆಆಂಜನಪ್ಪ, ನಾಗೇಶ್‌ಮಯ್ಯಾ, ಮೈಸೂರು ಮಂಜುಳಾ,ಗೋವಿಂದಪ್ಪ ಹಾಗೂ ಹಲವು ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಐದು ಹಾಡುಗಳಿಗೆ ದಿನೇಶ್‌ಕುಮಾರ್ ಸಂಗೀತ ಸಂಯೋಜಿಸಿದ್ದಾರೆ.

ಸಂಗೀತ ದಿನೇಶ್‌ಕುಮಾರ್, ಛಾಯಾಗ್ರಹಣ ಪ್ರಸನ್ನಕುಮಾರ್, ಸಂಕಲನ ರಘು, ಸಾಹಸ ಕೌರವವೆಂಕಟೇಶ್, ನೃತ್ಯ ರಾಜ್‌ದೇವು ಅವರದಾಗಿದೆ. ಚಾಮರಾಜನಗರ ಸುಂದರ ತಾಣಗಳು ಮತ್ತು ಸುವರ್ಣವತಿ ಡ್ಯಾಮ್ ಕಡೆಗಳಲ್ಲಿ 38 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಚಿತ್ರವು ಪೋಸ್ಟ್ ಪ್ರೊಡಕ್ಷನ್‌ದಲ್ಲಿ ಬ್ಯುಸಿ ಇದ್ದು, ಸದ್ಯದಲ್ಲೆ ಸೆನ್ಸಾರ್ ಅಂಗಳಕ್ಕೆ ಹೋಗಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.