Athi I love you movie Review. ಎಲ್ಲರೂ ನೋಡಲೇ ಬೇಕಾದ ಅಥಿ ಐ ಲವ್ ಯು ಚಿತ್ರ “ಸಂಸಾರದಲ್ಲಿ ಸರಿ ಘಮ”
ನಿರ್ಮಾಣ : ಬ್ಲ್ಯಾಕ್ ಅಂಡ್ ವೈಟ್ ಸೆವೆನ್ ರಾಜ್ ಆರ್ಟ್ಸ್
ನಿರ್ದೇಶನ, ನಟನೆ : ಲೋಕೇಂದ್ರ ಸೂರ್ಯ
“ಸಂಸಾರದಲ್ಲಿ ಸರಿ ಘಮ” ಅದುವೇ ಅಥಿ ಐ ಲವ್ ಯು ಚಿತ್ರ
ಇಂದಿನ ಸಮಾಜದಲ್ಲಿ ಮದುವೆ ಮತ್ತು ಮದುವೇತರ ಕೌಟುಂಬಿಕ ಜೀವನ ಮಕ್ಕಳ ಆಟವಾದಂತಿದೆ.
ಮದುವೆ ನಡೆದ ಮೂರು ತಿಂಗಳಾಗಿರೋದಿಲ್ಲ ವಿಚ್ಚೇದನಕ್ಕಾಗಿ ಕೋರ್ಟ್ ಮೆಟ್ಟಿಲು ಹತ್ತವುದು ಸಮಾಜ ಒಂದು ಕೆಟ್ಟ ಕಾಯಿಲೆಯಾಗಿದೆ.
ಇಂದು ಎಲ್ಲರೂ ಗಂಡು ಹೆಣ್ಣು ಎಂಬ ಬೇದವಿಲ್ಲದೇ ಸಮಾಜದ ಮುಂಚೂಣಿಯಲ್ಲಿ ನಿಂತು ಹಣ ಗಳಿಸುತ್ತಿದ್ದಾರೆ ಹಾಗೆ ಜೊತೆ ಜೊತೆಗೆ ನಾನು ಎನ್ನುವ ಅಹಂ ಅನ್ನು ಮೈತುಂಬ ಮೆತ್ತಿಕೊಂಡು ಕೊಪದ ಕೈಗೆ ಬುದ್ದಿಯನ್ನು ಕೊಟ್ಟು ತಮ್ಮ ಸಂಸಾರಗಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಆದರೆ ಈ ಚಿತ್ರದ ಕಥೆ ಇಂದಿನ ಪೀಳಿಗೆಗೆ ಮಾದರಿಯಾಗಿದೆ ಗಂಡ ಹೆಂಡತಿ ಹೇಗೆ ಬಾಳಬೇಕು ಇಬ್ಬರ ನಡುವೆ ಒಳ್ಳೆಯ ಸಂಭಂದ, ಅನ್ಯೋನ್ಯತೆ ಇರಬೇಕಾದರೆ ಯಾವ ಸೂತ್ರ ಅನುಸರಿಸ ಬೇಕು ಎಂದು ನಟ ನಿರ್ದೇಶಕ ಲೋಕೆಂದ್ರ ಪ್ರೇಕ್ಷಕರಿಗೆ ಈ ಚಿತ್ರದ ಮೂಲಕ ಒಳ್ಳೆಯ ಸಂದೇಶವನ್ನು ನೀಡಿದ್ದಾರೆ.
ಚಿತ್ರದಲ್ಲಿ ಛಾಯಗ್ರಹಣದ ಕೆಲಸವನ್ನು ನಿರ್ದೇಶಕರೇ ಮಾಡಿರುವುದರಿಂದ ಏನು ಪ್ರೇಕ್ಷಕರಿಗೆ ಹೇಳಬೇಕೋ, ಏನು ತೋರಿಸಬೇಕೋ ಅದನ್ನು ತೋರಿಸಿದ್ದಾರೆ.
ಸಂಗೀತ ಕೂಡ ಚಿತ್ರದಲ್ಲಿ ವಿಭಿನ್ನವಾಗಿದೆ ಹಿನ್ನೆಲೆ ಸಂಗೀತ ಕಥೆಯ ಸುತ್ತಮುತ್ತ ನಡೆಯುವ ಸ್ವಾಭಾವಿಕ ಸದ್ದುಗಳನ್ನೇ ಬಳಸಿಕೊಂಡಿರುವುದು ವಿಭಿನ್ನವಾಗಿದೆ ಕೆಲವು ಸರಿ ಚನ್ನಾಗಿದೆ ಅನ್ನಿಸಿದರು ಕೆಲವು ಭಾರಿ ಪ್ರೇಕ್ಷಕರಿಗೆ ಕಿರಿ ಕಿರಿಯಾಗುತ್ತದೆ.
ಇನ್ನು ನಿರ್ಮಾಪಕರಾದ ರೆಡ್ ಅಂಡ್ ವೈಟ್ ಸೆವೆನ್ ರಾಜ್ ರವರು ಒಳ್ಳೆಯ ಮನಸ್ಸಿನಿಂದ ಇಂದಿನ ಸಮಾಜಕ್ಕೆ ಒಳ್ಳೆಯ ಚಿತ್ರ ನೀಡಲು ಹಣ ಹೂಡಿದ್ದಾರೆ. ಮಾತೆತ್ತಿದರೆ ಡೈವರ್ಸ್ ಗಾಗಿ ಕೋರ್ಟ್ ಮೆಟ್ಟಿಲು ಹತ್ತುವ ಸಂಸಾರಗಳಿಗೆ ಮಾಧರಿ ಚಿತ್ರವನ್ನು ನೀಡಿದ್ದಾರೆ.
ಚಿತ್ರಗಳಲ್ಲಿ ಹೆಚ್ಚು ಪಾತ್ರಗಳಿಲ್ಲ ಎರಡೇ ಪಾತ್ರವಾದರೂ ಹಿನ್ನೆಲೆ ಧ್ವನಿಯಿಂದಲೇ ಬೇರೆ ಬೇರೆ ಪಾತ್ರಗಳ ಸೃಷ್ಠಿಗೆ ನಿರ್ದೇಶಕರ ಜಾಣ್ಮೆಯನ್ನು ಮೆಚ್ಚಬೇಕು
ಈ ವಾರ ತೆರೆಕಂಡ ಚಿತ್ರ “ಅಥಿ ಐ ಲವ್ ಯು.
ಒಂದು ಭಾರಿ ಎಲ್ಲರೂ ನೋಡಲೇ ಬೇಕಾದ ಚಿತ್ರ.