Anish tejeshwar started new project. ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟ ಹೀರೋ ಅನೀಶ್ ತೇಜೇಶ್ವರ್

Press Note :
ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟ ಹೀರೋ ಅನೀಶ್
ಆರಾಮ್ ಅರವಿಂದ ಸ್ವಾಮಿ ಸೂಪರ್ ಹಿಟ್ ಬೆನ್ನಿಗೆ
  ಮತ್ತೆ ಅಖಾಡಕ್ಕಿಳಿದ‌ ಅನೀಶ್ ತೇಜೇಶ್ವರ್

ಈ ಸಲ ಕಮರ್ಷಿಯಲ್ + ಕಂಟೆಂಟ್ ಆಟ

2025ಕ್ಕೆ ಅನೀಶ್ ಕೊಡಲಿದ್ದಾರೆ ಅಚ್ಚರಿ ಉಡುಗೊರೆ

2024ರಲ್ಲಿ ಸದ್ದು ಸುದ್ದಿ ಮಾಡಿದ ಸಿನಿಮಾಗಳ ಸಾಲಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲೋ ಸಿನಿಮಾಗಳಲ್ಲಿ ಆರಾಮ್ ಅರವಿಂದ ಸ್ವಾಮಿ ಕೂಡ ಒಂದು..

ಕಮರ್ಷಿಯಲ್ ಸಕ್ಸಸ್ ಕೊಟ್ಟ ಬೆನ್ನಿಗೆ ನಟ ನಿರ್ದೇಶಕ ಅನೀಶ್ ತೇಜೇಶ್ವರ್ ಈ ವರ್ಷ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ‌… ಮತ್ತೊಮ್ಮೆ ನಿರ್ದೇಶನದ ಜೊತೆಗೆ ಹೀರೋ ಆಗಿ ನಟಿಸ್ತಿದ್ದಾರೆ… ಈ ಟ್ರೆಂಡಿಗೆ ತಕ್ಕಂತ ಮಾಸ್ ಕಮರ್ಷಿಯಲ್ ಪ್ರಯೋಗವನ್ನ ಮಾಡೋದಕ್ಕೆ ಮುಂದಾಗಿದ್ದಾರೆ. ರಾಮಾರ್ಜುನ ಚಿತ್ರದ ನಂತ್ರ ಮತ್ತೆ ಆ್ಯಕ್ಷನ್ ಕಟ್ ಹೇಳ್ತೀರೋ ಅನೀಶ್ ಗೆ ಭಾವಪ್ರೀತ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್‌ ಸಾಥ್ ಕೊಡ್ತಿದೆ. ಭಾವಪ್ರೀತ ಪ್ರೊಡಕ್ಷನ್ಸ್ ನ ವಿಜಯ್ ಎಂ ರೆಡ್ಡಿ ಅನೀಶ್ ವಿಷನ್ ಗೆ ಬಂಡವಾಳ ಹೂಡ್ತಿದ್ದಾರೆ. ಅನೀಶ್ ಚಿತ್ರದೊಂದಿಗೆ ಉದ್ಯಮಕ್ಕೆ ಕಾಲಿಡ್ತಿರೋ ವಿಜಯ್ ಎಂ ರೆಡ್ಡಿ ಉದ್ಯಮದಲ್ಲಿ ದೊಡ್ಡದಾಗಿ ನೆಲೆ ನಿಲ್ಲೋದಕ್ಕೆ ಸಜ್ಜಾಗಿದ್ದಾರೆ.

ಈ ಕುರಿತು ಅನೀಶ್ ತಮ್ಮ ಸೋಷಿಯಲ್ ಮಿಡಿಯಾ ಪೇಜ್ ಮೂಲಕ ಪೋಸ್ಟ್ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor