Ambuja movie release on 21st. July. ನೀವೆಂದೂ ಕೇಳಿರದ ಬೆಚ್ಚಬೀಳಿಸೋ ಕಥೆಯ “ಅಂಬುಜ” ಸಿನಿಮಾ ಜುಲೈ 21ಕ್ಕೆ ತೆರೆಗೆ.

ನೀವೆಂದೂ ಕೇಳಿರದ ಬೆಚ್ಚಬೀಳಿಸೋ ಕಥೆ ಹೊತ್ತು ತಂದಿದೆ ಅಂಬುಜ ಚಿತ್ರ….ಜುಲೈ 21ಕ್ಕೆ ಶುಭಾ-ರಜನಿ ಸಿನಿಮಾ ತೆರೆಗೆ

ಮಹಿಳಾ ಪ್ರಧಾನ ಅಂಬುಜಾ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ನೈಜ ಘಟನೆ ಆಧಾರಿತ ಕುತೂಹಲಭರಿತ ಟ್ರೇಲರ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಶುಭಾ ಪೂಂಜಾ, ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ರಜಿನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ನಿರ್ದೇಶಕ ಶ್ರೀನಿ ಹನುಮಂತರಾಜು ಮಾತನಾಡಿ, ನಾನು ಶುಭಾಪೂಂಜಾ ಈ ಮೊದಲು ಒಂದು ಸಿನಿಮಾ ಮಾಡಿದ್ದೆವು. ಆ ಚಿತ್ರ ಯಶಸ್ಸು ಖಂಡಿತ್ತು. ಹಾಗೇ ಎರಡನೇ ಚಿತ್ರದ ಹುಡುಕಾಟದಲ್ಲಿದ್ದಾಗ ಕಾಶೀನಾಥ್ ಸರ್ ಸಿಕ್ಕರು. ನಾನು ಗ್ಯಾರಂಟಿ ನೀಡುತ್ತೇನೆ. ಈ ಕಥೆ ನೀವೆಲ್ಲೂ ನೋಡಿರಲ್ಲ, ಕೇಳಿರಲ್ಲ,ಖಂಡಿತಾ ಚಿತ್ರ ನೋಡುವಾಗ ಬೆಚ್ಚಿ ಬೀಳುತ್ತೀರಾ..
ನಾವೂ ಸುಮ್ಮನೇ ಹೇಳುತ್ತಿಲ್ಲ,
ಭರವಸೆ ನೀಡುತ್ತಿದ್ದೇವೆ. ಚಿತ್ರ ನೋಡಿದ‌ ಮೇಲೆ‌ ನೀವೇ ಶಾಕ್ ಆಗ್ತಿರ.
ಇದಕ್ಕೆ ಮೊದಲಿಗೆ ಕಲಾವಿದರಾಗಿ ಬಂದಿದ್ದು, ಶುಭಾ ಪೂಂಜಾ.
ರಜಿನಿ ಆಯ್ಕೆಯಾಗಿದ್ದೇ ವಿಚಿತ್ರ. ಸಿನಿಮಾನ ಒಂದಷ್ಟು ಜನ ಜೆನರಲ್ ಆಡಿಯನ್ಸ್ ನೋಡಿದ್ದಾರೆ.
ಅವರ ಕೈಕಾಲೇ ವೈಬ್ರೇಷನ್ ಆಗಿತ್ತು ಎಂದಿದ್ದಾರೆ.‌ಮತ್ತು ಚಿತ್ರದ ಕಥಾಹಂದರ ನೋಡಿ ಒಂದಷ್ಟು ಚರ್ಚೆ‌ ಮಾಡಿದ್ದಾರ

ನಿರ್ಮಾಪಕ ಕಾಶಿನಾಥ್ ಡಿ ಮಡಿವಾಳರ್ ಮಾತನಾಡಿ, ನಾನು ಕಥೆ ಬರೆದಾಗ ಇಷ್ಟೊಂದು ಚೆನ್ನಾಗಿ ಬರುತ್ತೆ ಅಂತ ಗೊತ್ತಿರಲಿಲ್ಲ. ಎಲ್ಲರೂ ಶ್ರಮ ಹಾಕಿದ್ದಾರೆ. ರಜಿನಿ ಮೇಡಂಗೆ ಕಾಲು ನೋವಿದ್ದರು 25 ಕೆಜಿ ತೂಕದಷ್ಟು ಕಾಸ್ಟ್ಯೂಮ್ ಹಾಕಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಶುಭಾ ಮೇಡಂ ಎತ್ತರದ ಭಯ ಇದ್ರು 3km ಬೆಟ್ಟವನ್ನು ಹತ್ತಿ ಹಾಡಿನ ಚಿತ್ರೀಕರಣ ಮಾಡಿದ್ದಾರೆ. ಈ ಸಿನಿಮಾಗಾಗಿ ಎಲ್ಲರೂ ಎಫರ್ಟ್ ಹಾಕಿದ್ದಾರೆ. ವಿಶೇಷವಾಗಿ ನಿರ್ದೇಶಕ ಶ್ರೀನಿ ಅವರು ತುಂಬಾ ಕಷ್ಟಪಟ್ಟು ಇಷ್ಟಪಟ್ಟು ಅಂಬುಜ ಚಿತ್ರವನ್ನು ಎಲ್ಲರಿಗೂ ಇಷ್ಟವಾಗುವಂತೆ ಮಾಡುದ್ದಾರೆ. ನಿಮಗೂ ಸಿನಿಮಾ ಖಂಡಿತ ಇಷ್ಟವಾಗುತ್ತೆ ಎಂದಿದ್ದಾರೆ.

ಶುಭಾ ಪೂಂಜಾ ಮಾತನಾಡಿ, ನನ್ನ ಪಾತ್ರ ಒಂದು ಕ್ರೈಂ ರಿಪೋರ್ಟರ್ ಪಾತ್ರ. ತುಂಬಾ ಶೇಡ್ ಇದೆ. ನನಗೆ ತುಂಬಾ ಇಷ್ಟವಾದ ಪಾತ್ರ. ಸಿನಿಮಾನಾ‌ ನಾನು ನೋಡಿದ್ದೇನೆ. ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಶ್ರೀನಿ ಜೊತೆಗೆ ಇದು ಎರಡನೇ ಸಿನಿಮಾ. ಕ್ರೈಮ್, ಹಾರರ್, ಸಸ್ಪೆನ್ಸ್ , ಕಾಮಿಡಿ, ಸೆಂಟಿಮೆಂಟ್ ಎಲ್ಲ ಅಂಶವನ್ನು ಸಿನಿಮಾದಲ್ಲಿ ಹಾಕುತ್ತಾರೆ. ಫ್ಯಾಮಿಲಿ ಕುಳಿತು ನೋಡುವಂತಹ ಸಿನಿಮಾ ಎಂದರು.

ರಜಿನಿ ಮಾತನಾಡಿ, ಇದು ನನ್ನ ಮೊದಲನೇ ಚಿತ್ರ, ಮೊದಲನೇ ಚಿತ್ರದಲ್ಲಿ ಅದ್ಭುತವಾದ ಪಾತ್ರ ನೀಡಿದ್ದಕ್ಕೆ ಧನ್ಯವಾದಗಳು
ನನ್ನ ಪಾತ್ರ ಎಲ್ಲರನ್ನೂ ಕಾಡುವಂತೆ ಮೂಡಿ ಬಂದಿದೆ. ನಾನು ಹೇಳೋದಕ್ಕಿಂತ ಜನ ನೋಡಿ, ಮೆಚ್ಚಿಕೊಂಡರೆ ಖುಷಿಯಾಗುತ್ತದೆ ಎಂದು ತಿಳಿಸಿದರು.

ಇನ್ನೂ ಚಿತ್ರದ ನಾಯಕನಾಗಿ ದೀಪಕ್ ಸುಬ್ರಮಣ್ಯ ಮಾತನಾಡಿ ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ ನನ್ನ ಪಾತ್ರಕ್ಕೆ ವಿಶೇಷ ಸ್ಕೋಪ್ ಇದೆ ಎಂದರು.
ಪದ್ಮಜಾರಾವ್, ಜಗದೀಶ್ ಹಲ್ಕುಡೆ, ಶರಣಯ್ಯ ,ಕಾಮಿಡಿಕಿಲಾಡಿ ಗೋವಿಂದೇಗೌಡ, ಸಂದೇಶ್ ಶೆಟ್ಟಿ, ನಿಶಾ ಹೆಗಡೆ, ಆಶಾರಾಣಿ, ಗುರುದೇವ ನಾಗಾರಾಜ, ಬೇಬಿ ಆಕಾಂಕ್ಷ,
ಮೋಹನ್ ಮಾಸ್ಟರ್, ಕ್ಯಾಮೆರಾಮನ್ ಮುರಳೀಧರ್ , ಎಡಿಟರ್ ವಿಜಯ್ ಎಂ.ಕುಮಾರ್, ಹಿನ್ನೆಲೆ ಸಂಗೀತ ನಿರ್ಧೇಶಕ ತ್ಯಾಗರಾಜ್ ಎಂ.ಎಸ್, ಎಲ್ಲರೂ ಚಿತ್ರದ ಬಗ್ಗೆ ಉತ್ಸುಕರಾಗಿ ಮಾತನಾಡಿದರು.
ಕ್ರೈಂ ಥ್ರಿಲ್ಲರ್ ಹಾರಾರ್ ಕಥಾಹಂದರ ಒಳಗೊಂಡ ಅಂಬುಜಾ ಸಿನಿಮಾಗೆ ಕಾಶಿನಾಥ್ ಡಿ ಮಡಿವಾಳರ್ ಬಂಡವಾಳ ಹೂಡಿದ್ದಾರೆ. ಮೊದಲ ಬಾರಿಗೆ ನಿರ್ಮಾಣಕ್ಕಿಳಿದಿರುವ ಇವರು, ಚಿತ್ರಕ್ಕೆ ಕಥೆ, ಸಾಹಿತ್ಯ ಕೂಡ ಬರೆದಿದ್ದಾರೆ. ಶ್ರೀನಿ ಹನುಂಮತರಾಜು ಎರಡನೇ ಸಿನಿಮಾ ಇದಾಗಿದೆ. ಪ್ರಸನ್ನ ಕುಮಾರ್ ಎಂ ಎಸ್ ಸಂಗೀತ ನಿರ್ದೇಶನ ಮಾಡಿದ್ದು, ಲಾಲಿ ಹಾಡನ್ನು ನಿರ್ಮಾಪಕ ಕಾಶಿನಾಥ್ ಮಗಳು, ಆಕಾಂಕ್ಷ ಅದ್ಭುತವಾಗಿ ಹಾಡಿದ್ದಾರೆ. ಚಿತ್ರದ ಸಹ ನಿರ್ಮಾಣದಲ್ಲಿ ಲೋಕೇಶ್ ಭೈರವ, ಶಿವಪ್ರಕಾಶ್ ಕೈ ಜೋಡಿಸಿದ್ದಾರೆ.
ಟ್ರೇಲರ್ ಮೂಲಕ ಗಮನಸೆಳೆಯುತ್ತಿರುವ ಅಂಬುಜಾ ಜುಲೈ 21ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor