Alaikya movie release on May 10th. ಅಲೈಕ್ಯಾ ಚಿತ್ರ ಈ ವಾರ ರಾಜ್ಯದಾದ್ಯಂತ ತೆರೆಗೆ ಬರಲಿದೆ.
ಈ ವಾರ ತೆರೆಗೆ ‘ಅಲೈಕ್ಯಾ’
ಹಾರರ್ ಹಿನ್ನೆಲೆಯಲ್ಲಿ ನಡೆಯೋ ಕಥಾಹಂದರ ಒಳಗೊಂಡ ಚಿತ್ರ ಅಲೈಕ್ಯಾ ಈ ವಾರ ತೆರೆಕಾಣುತ್ತಿದೆ. ಹಿತೇಶ್ ಮೂವೀಸ್ ಲಾಂಛನದಲ್ಲಿ ಎಂ.ಭೂಪತಿ ನಿರ್ಮಿಸಿರುವ, ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿದ ಈ ಚಿತ್ರಕ್ಕೆ ಸಾತ್ವಿಕ್ ಎಂ.ಭೂಪತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣ ಮಾಡಿದ್ದಾರೆ.

ಒಂದಷ್ಟು ಸ್ನೇಹಿತರ ತಂಡ ವೀಕೆಂಡ್ ಕಳೆಯಲು ಜಾಲಿ ಟ್ರಿಪ್ ಹೊರಡುತ್ತಾರೆ. ಗೆಸ್ಟ್ ಹೌಸ್ ವೊಂದಕ್ಕೆ ತೆರಳಿ ಅಲ್ಲಿ ತಂಗಿದಾಗ ಅಲ್ಲಿ ಅನಿರೀಕ್ಷಿತವಾಗಿ ನಡೆದ ಕೆಲವು ಘಟನೆಗಳಿಗಳಿಂದ ಆ ಅತಿಥಿ ಗೃಹದಲ್ಲಿ ಆತ್ಮಗಳಿರುವುದು ಗೊತ್ತಾಗುತ್ತದೆ. ಆಗವರು ಅಲ್ಲಿಂದ ತಪ್ಪಿಸಿಕೊಂಡು ಬರಲು ಪ್ರಯತ್ನಿಸಿ ವಿಫಲರಾಗುತ್ತಾರೆ.

ಅ ಮನೆಯಲ್ಲಿದ್ದ ಬೆಲೆಬಾಳುವ ಅಮೂಲ್ಯ ವಜ್ರವನ್ನು ಲ ಆತ್ಮದ ಸಹಾಯದಿಂದ ಅವರು ಹೇಗೆ ವಶಪಡಿಸಿಕೊಂಡು ಹೊರಬರುತ್ತಾರೆ, ಅಷ್ಟಕ್ಕೂ ಅವರಿಗೂ, 21-21-21 ನಂಬರಿಗೂ ಇರುವ ಸಂಬಂಧವೇನು ಎಂಬುದೇ ಈ ಚಿತ್ರದ ಕಥಾಹಂದರ.
ದರ್ಶಿನಿ ಆರ್.ಒಡೆಯರ್, ನಿಸರ್ಗ, ಮನ್ವೀರ್ ಚವ್ಹಾನ್, ವಿವೇಕ್ ಚಕ್ರವರ್ತಿ, ವಜ್ರ, ಕಾವ್ಯಪ್ರಕಾಶ್, ಜಾಹ್ನವಿ ವಿ, ನಾರಾಯಣ್ ಸ್ವಾಮಿ ಡಿಎಂ., ಸಾತ್ವಿಕ್ ಎಂ.ಭೂಪತಿ, ಶಿವಕುಮಾರ್, ಡಿಕೆ, ಮಂಜು, ಶಿವಮ್ಮ ಪ್ರಮುಖ ತಾರಾಗಣದಲ್ಲಿದ್ದಾರೆ. ಸಾಯಿ ಸೋಮೇಶ್ ಸಂಗೀತ, ಬುಗುಡೆ ವೀರೇಶ್ ಛಾಯಾಗ್ರಹಣ, ಮುತ್ತುರಾಜ್ ಸಂಕಲನ, ಹರಿಪ್ರಸಾದ್ ಸಾಹಿತ್ಯ ಹಾಗೂ ತೇಜ್ ಆರಾಧ್ಯ ನೃತ್ಯ ನಿರ್ದೇಶನ ಚಿತ್ರಕ್ಕಿದೆ.