Agrasena movie with Ragini ಅಗ್ರಸೇನಾ ಚಿತ್ರಕ್ಕೆ ರಾಗಿಣಿ ಸಾಥ್
ಅಗ್ರಸೇನಾ ಚಿತ್ರಕ್ಕೆ ರಾಗಿಣಿ ಸಾಥ್
ಇದೇ ತಿಂಗಳ 23ರಂದು ಬಿಡುಗಡೆಯಾಗಲಿರುವ ಮುರುಗೇಶ್ ಕಣ್ಣಪ್ಪ ಅವರ ನಿರ್ದೇಶನದ ‘ಅಗ್ರಸೇನಾ’ ಚಿತ್ರಕ್ಕೆ ಈಗ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರು ಸಾಥ್ ನೀಡಿದ್ದಾರೆ. ಇತ್ತೀಚಿಗೆ ನಟಿ ರಾಗಿಣಿ ಅವರಿಗೆ ಅಗ್ರ ಸೇನಾ ಚಿತ್ರತಂಡ ಚಿತ್ರದ ಟ್ರೈಲರ್ ಹಾಗೂ ಹಾಡುಗಳನ್ನು ತೋರಿಸಿತು.
ಚಿತ್ರದ ಕಂಟೆಂಟ್, ಮೇಕಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಗಿಣಿ ದ್ವಿವೇದಿ, ಅಗ್ರಸೇನಾ ಚಿತ್ರದ ಟ್ರೈಲರ್, ಹಾಡುಗಳನ್ನು ಈಗತಾನೇ ನೋಡಿದೆ. ತುಂಬಾ ಪ್ರಾಮಿಸಿಂಗ್ ಆಗಿದೆ. ಕಥೆ ಇಂಟರೆಸ್ಟಿಂಗ್ ಆಗಿದೆ, 23ಕ್ಕೆ ನಾನೂ ಸಹ ಕಾಯುತ್ತಿದ್ದೇನೆ. ಮೊದಲ ದಿನವೇ ನಾನು ಈ ಚಿತ್ರವನ್ನು ನೋಡುತ್ತೇನೆ. ನನ್ನ ಜೊತೆ ನೀವೂ ಬನ್ನಿ ಎಂದು ಪ್ರೇಕ್ಷಕರಿಗೆ ಕರೆ ನೀಡಿದರು.
ಡಬಲ್ ಟ್ರ್ಯಾಕ್ ನಲ್ಲಿ ಸಾಗುವ ಕಥೆ ಇದಾಗಿದ್ದು,
ಅಮರ್ ವಿರಾಜ್ ಹಾಗೂ ಅಗಸ್ತ್ಯ ಬೆಳಗೆರೆ ಚಿತ್ರದ ಇಬ್ಬರು ನಾಯಕರಾಗಿ ಕಾಣಿಸಿಕೊಂಡಿದ್ದಾರೆ,
ರಚನಾ ದಶರಥ್, ಭಾರತಿ ಹೆಗ್ಡೆ ನಾಯಕಿಯರಾಗಿ ನಟಿಸಿದ್ದಾರೆ. ಅಲ್ಲದೆ ಚಿತ್ರದಲ್ಲಿ ಹಿರಿಯನಟ ರಾಮಕೃಷ್ಣ ಅವರು ಗ್ರಾಮದ ಮುಖಂಡ ಸೂರಪ್ಪನ ಪಾತ್ರವನ್ನು ನಿರ್ವಹಿಸಿದ್ದಾರೆ, ಆರ್.ಪಿ.ರೆಡ್ಡಿ ಅವರ ಛಾಯಾಗ್ರಹಣ, ಎಂ.ಎಸ್. ತ್ಯಾಗರಾಜ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.