Agnyaathavaasi movie release on April 11th. ಕುತೂಹಲ ಹಾದಿಯಲ್ಲಿ ಸಾಗುವ ʼಅಜ್ಞಾತವಾಸಿʼ ಟ್ರೇಲರ್..ಏಪ್ರಿಲ್ 11ಕ್ಕೆ ರಂಗಾಯಣ ರಘು ಚಿತ್ರ ರಿಲೀಸ್

ಕುತೂಹಲ ಹಾದಿಯಲ್ಲಿ ಸಾಗುವ ʼಅಜ್ಞಾತವಾಸಿʼ ಟ್ರೇಲರ್..ಏಪ್ರಿಲ್ 11ಕ್ಕೆ ರಂಗಾಯಣ ರಘು ಚಿತ್ರ ರಿಲೀಸ್

ರಣರೋಚಕ ʼಅಜ್ಞಾತವಾಸಿʼ ಟ್ರೇಲರ್..ಏ.11ಕ್ಕೆ ಹೇಮಂತ್ ರಾವ್ ನಿರ್ಮಾಣದ ಚಿತ್ರ ತೆರೆಗೆ

ಮಲೆನಾಡಿನ ಒಡಲಿನ ನಿಗೂಢ ಕಥೆ ʼಅಜ್ಞಾತವಾಸಿʼ ಟ್ರೇಲರ್ ಅನಾವರಣ

ಮಲೆನಾಡು ಸೊಗಡಿನ ಮತ್ತೊಂದು ಥ್ರಿಲರ್ ಕಥೆ ಅಜ್ಞಾತವಾಸಿ ಟ್ರೇಲರ್ ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಮರ್ಡರ್ ಮಿಸ್ಟರಿ ಸಿನಿಮಾಗಳು ಬಂದಿವೆ. ಬರುತ್ತಲೇ ಇವೆ. ಈಗ ಬಿಡುಗಡೆಗೆ ಸಜ್ಜಾಗಿರುವ ಅಜ್ಞಾತವಾಸಿ ಸಿನಿಮಾ ಕೂಡ ಮರ್ಡರ್ ಮಿಸ್ಟರಿ ಕಥಾಹಂದರವನ್ನು ಹೊಂದಿದೆ. ಆದರೆ ಈ ಚಿತ್ರ ಬೇರೆಯದ್ದೇ ಕಂಟೆಂಟ್ ಹೊಂದಿದೆ ಅನ್ನೋದನ್ನು ಟ್ರೇಲರ್ ಹೇಳುತ್ತಿದೆ. ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅಜ್ಞಾತವಾಸಿ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆಯಿತು. ಈ ವೇಳೆ ಇಡೀ ಚಿತ್ರತಂಡ ಹಾಜರಾಗಿತ್ತು.

ಟ್ರೇಲರ್ ಬಿಡುಗಡೆ ಬಳಿಕ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಮಾತನಾಡಿ, ಮಲೆನಾಡಿನಲ್ಲಿ ನಡೆಯುವ ಕಥೆ. ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಕಾಲ್ಪನಿಕ ಕಥೆ. ಹಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಸ್ಥಾಪನೆಯಾಗಿ 25 ವರ್ಷವಾಗಿರುತ್ತದೆ. ಯಾವುದೇ ಸಣ್ಣ ಕೇಸ್ ಕೂಡ ಅಲ್ಲಿ ರಿಪೋರ್ಟ್ ಆಗಿರುವುದಿಲ್ಲ. 1997ರಲ್ಲಿ ಮರ್ಡರ್ ಕೇಸ್ ದಾಖಲಾಗುತ್ತದೆ. ಅನುಭವಿ ಇಲ್ಲದ ಪೊಲೀಸ್ ಅಲ್ಲಿಗೆ ಬಂದಾಗ ಈ ಕೇಸ್ ಹೇಗೆ ಬಗೆಹರಿಸುತ್ತಾರೆ ಎಂಬುವುದೇ ಕಥೆ. ಗುಲ್ಟು ಬಳಿಕ ಏನೂ ಮಾಡಬೇಕು ಅಂದುಕೊಂಡಾಗ ಈ ಕಥೆ ನನ್ನನ್ನು ಎಕ್ಸೈಟ್ ಮಾಡಿತು. ಹೇಮಂತ್ ಅವರಿಗೆ ಕಥೆ ಹೇಳಿದ ಅವರಿಗೆ ಇಷ್ಟವಾಯ್ತು. ಏಪ್ರಿಲ್ 11ಕ್ಕೆ ಚಿತ್ರ ತೆರೆಗೆ ಬರುತ್ತಿದ್ದು, ಎಲ್ಲರೂ ನೋಡಿ ಹಾರೈಸಿ ಎಂದರು.

ನಿರ್ಮಾಪಕ ಹೇಮಂತ್ ಎಂ ರಾವ್ ಮಾತನಾಡಿ, ಗೋಧಿ ಬಣ್ಣ ಸಾಧಾರಾಣ ಮೈಕಟ್ಟು ಬಳಿಕ ನಾನು ರಕ್ಷಿತ್ ಮಾತಾಡಿಕೊಳ್ಳುತ್ತಿದ್ದೇವು. ಈ ರೀತಿ ಸಿನಿಮಾ ಮಾಡಲು ಯಾಕೆ ಇಷ್ಟು ಒದ್ದಾಟ ಮಾಡಬೇಕು. ಅವತ್ತು ನಾವಿಬ್ಬರು ಈ ರೀತಿಯ ಒಳ್ಳೆ ಕಥೆಗೆ ಬಂಡವಾಳ ಹಾಕಲು ತೀರ್ಮಾನ ಮಾಡಿಕೊಂಡಿದ್ದೇವು. ಅದರಂತೆ ಅಜ್ಞಾತವಾಸಿ ಸಿನಿಮಾ ಮಾಡಿದ್ದೇನೆ. ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಒಳ್ಳೆ ಸಿನಿಮಾ ಮೇಕರ್. ನಮ್ಮ ಇಂಡಸ್ಟ್ರೀಯ ಬ್ರೈಟ್ ಫಿಲ್ಮಂ ಮೇಕರ್. ರಘು ಸರ್ ಸೇರಿದಂತೆ ಇಡಿ ತಂಡ ಚಿತ್ರದಲ್ಲಿ ಸಾಕಷ್ಟು ಕೆಲಸ ಮಾಡಿದೆ. ಸಿನಿಮಾ ಚೆನ್ನಾಗಿ ಬಂದಿದೆ. ಜನರನ್ನು ನಂಬಿ ಈ ರೀತಿ ಸಿನಿಮಾ ಮಾಡಿದ್ದೇವೆ. ನೀವು ಈ ಚಿತ್ರಗಳಿಗೆ ಬೆಂಬಲ ಕೊಡಿ ಎಂದು ತಿಳಿಸಿದರು.

ರಂಗಾಯಣ ರಘು ಮಾತನಾಡಿ, ಒಬ್ಬರಿಗೊಬ್ಬರು ನಿರ್ದೇಶಕರು ಬೆಳೆಯಲಿ ಎಂದು ಈ ರೀತಿ ಸಿನಿಮಾಗಳನ್ನು ಮಾಡುತ್ತಿರುವುದು ಖುಷಿ ವಿಚಾರ. ಜನಾರ್ಧನ್ ಕಥೆ ಹೇಳಿದಾಗ ಎಲ್ಲಾ ಪಾತ್ರಗಳ ಮೇಲೆ ಹೊಟ್ಟೆ ಕಿಚ್ಚು ಬಂದಿತ್ತು. ಅಷ್ಟೂ ಚೆನ್ನಾಗಿವೆ ಪಾತ್ರಗಳು. ಇದು ಮರ್ಡರ್ ಮಿಸ್ಟ್ರಿ ಸಿನಿಮಾ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಒಳ್ಳೆ ಸಿನಿಮಾಗಳು ಬಂದಿವೆ. ಆ ಸಾಲಿಗೆ ಈ ಚಿತ್ರವನ್ನು ಜನಾರ್ಧನ್ ಹೇಮಂತ್ ಸೇರಿಸುತ್ತಾರೆ. ಆ ರೀತಿ ಕೆಲಸವನ್ನು ಎಲ್ಲರೂ ಮಾಡಿದ್ದಾರೆ. ಇದೊಂದು ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಸಪೋರ್ಟ್ ಇರಲಿ ಎಂದು ತಿಳಿಸಿದರು.

2 ನಿಮಿಷ 6 ಸೆಕೆಂಡ್ ಇರುವ ಅಜ್ಞಾತವಾಸಿ ಟ್ರೇಲರ್ ಸಾಕಷ್ಟು ಕುತೂಹಲ ಹೆಚ್ಚಿಸಿದೆ. ಮಲೆನಾಡಿ ಸೊಬಗಿನಲ್ಲಿ ನಡೆಯುವ ರೋಚಕ ಮರ್ಡರ್ ಮಿಸ್ಟರಿ ಕಥೆ ರಣರೋಚಕವಾಗಿ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಕಟ್ಟಿಕೊಟ್ಟಿದ್ದಾರೆ. ಇನ್ನೂ ಎಂದಿನಂತೆ ರಂಗಾಯಣ ರಘು ತಮ್ಮ ಪಾತ್ರದಲ್ಲಿ ಜೀವಿಸಿದ್ದಾರೆ. ಪವನಾ ಗೌಡ, ಸಿದ್ದು ಮೂಲಿಮನೆ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಟ್ರೇಲರ್ ನಲ್ಲಿಒ ಗಮನಸೆಳೆಯುತ್ತಾರೆ. ಚರಣ್ ರಾಜ್ ಸಂಗೀತ, ಹಾಗೂ ಅದ್ವೈತ್ ಗುರುಮೂರ್ತಿ ಕ್ಯಾಮೆರಾ ವರ್ಕ್ ಟ್ರೇಲರ್ ಅಂದವನ್ನು ಹೆಚ್ಚಿಸಿದೆ.

ಅಜ್ಞಾತವಾಸಿ ಚಿತ್ರಕ್ಕೆ ‘ಗುಳ್ಟು’ ಸಾರಥಿ ಜನಾರ್ಧನ್ ಚಿಕ್ಕಣ್ಣ ಆಕ್ಷನ್ ಕಟ್ ಹೇಳಿದ್ದಾರೆ. ‘ಗೋಧಿಬಣ್ಣ ಸಾಧಾರಣ ಮೈಕಟ್ಟು’, ಸಪ್ತ ಸಾಗರದಾಚೆ ಎಲ್ಲೋ ಸರಣಿ ಚಿತ್ರಗಳ ಸಾರಥಿ ಹೇಮಂತ್ ಎಂ ರಾವ್ ತಾಯಿ ನೆನಪಿನಲ್ಲಿ ಪ್ರಾರಂಭಿಸಿರುವ ದಾಕ್ಷಾಯಿಣಿ ಟಾಕೀಸ್ ಪ್ರೊಡಕ್ಷನ್ ಹೌಸ್ ನಡಿ ಚಿತ್ರ ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಅಜ್ಞಾತವಾಸಿಯಲ್ಲಿ ಪಾವನಾ ಗೌಡ ಹಾಗೂ ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ.

ಜನಾರ್ಧನ್ ಚಿಕ್ಕಣ್ಣ ಗುರುಗಳಾದ ಕೃಷ್ಣರಾಜ್ ಅವರು ಅಜ್ಞಾತವಾಸಿ ಚಿತ್ರಕ್ಕೆ ಕಥೆ ಬರೆದ್ದಾರೆ. 1997ರಲ್ಲಿ ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ಕಥೆ ಹೆಣೆಯಲಾಗಿದೆ. ಕನ್ನಡದಲ್ಲಿ ಈವರೆಗೂ ಬಂದಿರದ ಮರ್ಡರ್ ಮಿಸ್ಟರಿ ಕಥಾಹಂದರ ಚಿತ್ರದಲ್ಲಿದೆ. ಅದ್ವೈತ ಛಾಯಾಗ್ರಾಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ, ಭರತ್ ಎಂ.ಸಿ ಸಂಕಲನಕಾರರಾಗಿ, ಉಲ್ಲಾಸ್ ಹೈದೂರು ಕಲಾ ನಿರ್ದೇಶಕರಾಗಿ ಅಜ್ಞಾತವಾಸಿ ಚಿತ್ರದಲ್ಲಿ ಕಾರ್ಯನಿರ್ವಾಹಿಸಿದ್ದಾರೆ. ಎನ್ ಹರಿಕೃಷ್ಣ ಸಹ ನಿರ್ದೇಶಕರಾಗಿ ದುಡಿದಿದ್ದು, ಜಿ.ಬಿ.ಭರತ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor