Again Nagarahavu movie in theatres soon. ಮತ್ತೆ ಬುಸು ಗುಟ್ಟುತ್ತಿದೆ ನಾಗರಹಾವು

ಮರುಸೃಷ್ಟಿಯಲ್ಲಿ ನಾಗರಹಾವು

70 ದಶಕದಲ್ಲಿ ಬಿಡುಗಡೆಗೊಂಡು ಸೂಪರ್ ಹಿಟ್ ಆಗಿದ್ದ ’ನಾಗರ ಹಾವು’  ಇದೇ ಶೀರ್ಷಿಕೆಯಲ್ಲಿ ಎರಡು ಬಾರಿ ಸಿನಿಮಾಗಳು ಬಂದಿದ್ದರೂ ಕಥೆ ಬೇರೆಯದೆ ಆಗಿತ್ತು. ಆದರೆ ಈಗ ಪಾತ್ರಧಾರಿಗಳ ಹೆಸರನ್ನು ಬಳಸಿಕೊಂಡಿರುವ ’ಚಾಮಯ್ಯ ಸನ್ ಆಫ್ ರಾಮಾಚಾರಿ’ ಚಿತ್ರವೊಂದು ಸದ್ದಿಲ್ಲದೆ ಮುಗಿಸಿಕೊಂಡಿದೆ. ಪ್ರಚಾರದ ಮೊದಲ ಹಂತವಾಗಿ  ಎಸ್‌ಆರ್‌ವಿ ಚಿತ್ರಮಂದಿರ ಕಿಕ್ಕಿರಿದ ಜನಸಂದಣಿಯಲ್ಲಿ ಎರಡು ನಿಮಿಷದ ಟ್ರೇಲರ್ ಅನಾವರಣಗೊಂಡಿತು. ಜೋಳಿಗೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಪಲ್ಲಕ್ಕಿ ಬರವಣಿಗೆ, ನಿರ್ದೇಶನ ಮತ್ತು ಒಂದು ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಾಧಾಕೃಷ ಪಲ್ಲಕ್ಕಿ ಬಂಡವಾಳ ಹೂಡಿದ್ದು, ಗೌತಮ್ ಪಲ್ಲಕ್ಕಿ ಮತ್ತು ವಿ.ಗೋವಿಂದರಾಜು ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ’ಕೋಟೆ ನಾಡಿನ ನಾಗರ ಹಾವು’ ಎಂಬ ಅಡಿಬರಹವಿದೆ.

   ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ’ಈ ಬಂಧನ’ ಚಿತ್ರೀಕರಣ ಸಂದರ್ಭದಲ್ಲಿ ಡಾ.ವಿಷ್ಣು ಸರ್ ಅವರನ್ನು ಭೇಟಿ ಮಾಡಿ, ಇದರ ಸಣ್ಣದೊಂದು ಎಳೆ ಹೇಳಿದ್ದನ್ನು ಇಷ್ಟಪಟ್ಟಿದ್ದರು. ಅವರು ಕಾಲವಾದ ನಂತರ ಇದನ್ನು ಮಾಡುವುದು ಬೇಡವೆಂದು ಸುಮ್ಮನಿದ್ದೆ. ಒಮ್ಮೆ ಉತ್ತರ ಕರ್ನಾಟಕದಲ್ಲಿ ನಾಟಕ ನೋಡಲು ಹೋದಾಗ ಅಲ್ಲಿ ರಂಗಭೂಮಿಯ ಹಿರಿಯ ಕಲಾವಿದ ಜಯಶ್ರೀ ರಾಜ್ ನಟನೆ ನೋಡಿದಾಗ, ಸಿನಿಮಾ ಮಾಡುವ ಬಗ್ಗೆ ಚಿಂತನೆ ನಡೆಸಲಾಯಿತು.

   ಮೂಲ ಸಿನಿಮಾದ ಕ್ಲೈಮಾಕ್ಸ್‌ದಲ್ಲಿ ರಾಮಾಚಾರಿ ಸಾಯುತ್ತಾನೆ. ಇದರಲ್ಲಿ ಬದುಕಿ  ಊರಿಗೆ ಬಂದಾಗ ಎಲ್ಲರು ಛೀಮಾರಿ ಹಾಕುತ್ತಾರೆ. ಪೈಲ್ವಾನ್ ಬಸಪ್ಪ (ಎಂ.ಪಿ.ಶಂಕರ್) ಈತನಿಗೆ ಒಳ್ಳೆ ಕೆಲಸ ಕೊಡಿಸುತ್ತೇನೆಂದು ಕಂಪೆನಿ ನಾಟಕಕ್ಕೆ ಸೇರಿಸುತ್ತಾರೆ. ಅಲ್ಲಿ ಹುಡುಗಿಯೊಂದಿಗೆ ಪ್ರೀತಿ ಹುಟ್ಟಿ, ಇಬ್ಬರಿಗೂ ಹುಟ್ಟಿದ ಮಗು ಚಾಮಯ್ಯ. ಜತೆಗೆ ಅಂದಿನ ಚಿತ್ರದುರ್ಗದ ಜನ, ಪ್ರಸಕ್ತ ತಲೆಮಾರಿನವರು ಹೇಗಿರುತ್ತಾರೆ. ಮುಂದೆ ಒಂದು ಘಟ್ಟದಲ್ಲಿ ರಾಮಾಚಾರಿ ಬದುಕಿನಲ್ಲಿ ಘೋರ ದುರಂತ ನಡೆಯುತ್ತದೆ. ಆಗ ಏನು ಕ್ರಮ ತೆಗೆದುಕೊಳ್ಳುತ್ತಾನೆ. 
ಇದರ ಮಧ್ಯೆ ಹಿಂದೂ ಮಹಾಸಭಾ ಕಾರ್ಯಕ್ರಮದಲ್ಲಿ ಕ್ರೈಂ ನಡೆಯುತ್ತದೆ. ಕೆಲವು ಸನ್ನಿವೇಶದಲ್ಲಿ ಚಿತ್ರದುರ್ಗದ ಕೋಟೆಯನ್ನು ಬಳಸದೆ, ಹಿನ್ನಲೆಯಲ್ಲಿರುವ ಮಹಾನ್ ನಾಯಕರ ಕೋಟೆಗಳ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಹಾಗೂ ಇವರೆಲ್ಲರ ಚರಿತ್ರೆಗಳು ಸಣ್ಣದಾಗಿ ಬಂದು ಹೋಗುತ್ತವೆ. ಬೆಂಗಳೂರು, ಬಾದಾಮಿ, ಬನಶಂಕರಿ, ಐಹೊಳೆ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ಜಲೀಲ್ (ಅಂಬರೀಷ್) ಮಗನಾಗಿí ಚೋಟಾ ಜಲೀಲ್ ಪೋಲೀಸ್ ಇನ್ಸ್‌ಪೆಕ್ಟರ್ ಆಗಿ ಕೊಲೆ ತನಿಖೆ ಮಾಡುವ ರೋಲ್ ನಿಭಾಯಿಸಿದ್ದೇನೆ. ಮಾಧ್ಯಮದವರು ವಿಚಾರವನ್ನು ಪ್ರಚಾರ ಮಾಡಬೇಕೆಂದು ಪಲ್ಲಕ್ಕಿ ಕೋರಿಕೊಂಡರು.

 ರಾಮಾಚಾರಿ ಪಾತ್ರ ನಿರ್ವಹಿಸಿರುವ ಜಯಶ್ರೀರಾಜ್ ಚಿತ್ರೀಕರಣದ ಅನುಭವ ಹಂಚಿಕೊಂಡು, ಸಾಹಸಸಿಂಹರ ಅಭಿನಯವನ್ನು ಅನುಕರಣೆ ಮಾಡದೆ, ತನ್ನದೆ ರಂಗಭೂಮಿಯ ಪ್ರಯೋಗ ಮಾಡಿದ್ದೇನೆ ಎಂದರು.

  ಚಾಮಯ್ಯನಾಗಿ ಪ್ರದೀಪ್ ಶಾಸ್ತ್ರೀ, ಮಗಳಾಗಿ ಚೈತ್ರಾ, ಮುಂದುವರಿದ ಪ್ರಿನ್ಸಿಪಾಲ್ (ಲೋಕನಾಥ್) ಆಗಿ ಪ್ರಕಾಶ್‌ಅರಸು. ಉಳಿದಂತೆ ಪ್ರೇಮಾಗೌಡ, ವಿನುತ, ರಾಘವೇಂದ್ರ, ಸುಧಾಕರ, ಸೂರ್ಯತೇಜ, ಕಾರ್ತಿಕ್, ಗುರುಕಿರಣ್, ಸಂದೀಪ್ ಹಾಗೂ ವೃತ್ತಿ ರಂಗಕರ್ಮಿಗಳಿಗೆ ಅವಕಾಶ ಮಾಡಿಕೊಡಲಾಗಿದೆ.

  ಡಾ.ಕುಮಾರ್‌ಚಲ್ಯಾ ಮತ್ತು ಹೈತೋ ಸಾಹಿತ್ಯದ ಗಜಲ್ ಗೀತೆಗಳಿಗೆ ಸ್ಯಾಂ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಎಂ.ಆರ್.ಸೀನು, ಸಂಕಲನ ಶಿವಕುಮಾರ್.ಎ ನಿರ್ವಹಿಸಿದ್ದಾರೆ. ಅಂದುಕೊಂಡಂತೆ ಆದಲ್ಲಿ ಏಪ್ರಿಲ್ ತಿಂಗಳಲ್ಲಿ ಜನರಿಗೆ ತೋರಿಸಲು ಪಲ್ಲಕ್ಕಿ ಸ್ಟುಡಿಯೋಸ್ ಯೋಜನೆ ಹಾಕಿಕೊಂಡಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor