Adi purusha hanuman poster Released “ಆದಿಪುರುಷ್ ಹನುಮಾನ್ ಪೋಸ್ಟರ್ ಬಿಡುಗಡೆ”
ಆದಿಪುರುಷ್ ಹನುಮಾನ್ ಪೋಸ್ಟರ್ ಬಿಡುಗಡೆ
ಅದ್ದೂರಿ ಚಿತ್ರ ’ಆದಿಪುರುಷ್’ ಬಿಡುಗಡೆಗೆ ಹತ್ತಿರವಾಗುತ್ತಿರುವಂತೆ ಪಾತ್ರಗಳ ಪರಿಚಯವನ್ನು ಮಾಡಲಾಗುತ್ತಿದೆ. ಇಲ್ಲಿಯವರೆಗೂ ರಾಮ ಮತ್ತು ಸೀತಾ ಪಾತ್ರಧಾರಿಗಳ ಲುಕ್, ಹಾಡುಗಳು ಹೊರ ಬಂದು ಸಾಕಷ್ಟು ವೈರಲ್ ಆಗಿತ್ತು. ಈಗ ಚಿತ್ರದಲ್ಲಿ ಬರುವ ಬಹು ಮುಖ್ಯ ಎನಿಸಿರುವ ಹನುಮಾನ್ ಪಾತ್ರವನ್ನು ದೇವ್‌ದತ್ತನಾಗೆ ನಿರ್ವಹಿಸಿರುತ್ತಾರೆ. ಅದರಂತೆ ಪ್ರಚಾರದ ಮತ್ತೋಂದು ಹಂತವಾಗಿ ಹನುಮಾನ್ ಪೋಸ್ಟರ್‌ನ್ನು ಬಿಡುಗಡೆ ಮಾಡಲಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಓಂ ರಾವುತ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ’ಟಿ’ ಸೀರೀಸ್‌ನ ಭೂಷಣ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. ವಾಲ್ಮಿಕಿ ಬರೆದ ರಾಮಾಯಣದ ಅಂಶಗಳನ್ನು ಚಿತ್ರದಲ್ಲಿ ಬಳಸಲಾಗಿದೆ.
ತಾರಗಣದಲ್ಲಿ ಪ್ರಭಾಸ್, ಕೃತಿಸನೂನ್, ಸೈಫ್‌ಆಲಿಖಾನ್ ಮತ್ತು ಸನ್ನಿಸಿಂಗ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರೊಂದಿಗೆ ವತ್ಸಲ್‌ಸೇತ್, ಸೋನಾಲ್‌ಚೌಹಾಣ್ ತೃಪ್ತಿತೋರದಮಲ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಸಂಗೀತ ಅಜಯ್-ಅತುಲ್, ಛಾಯಾಗ್ರಹಣ ಕಾರ್ತಿಕ್‌ಪಳನಿ, ಸಂಕಲನ ಅಪೂರ್ವಮೋತಿವಾಲೆಸಹಾಯ್-ಆಶಿಷ್‌ಮಾತ್ರ. ಅಂದಹಾಗೆ ಸಿನಿಮಾವು ಜೂನ್ 16ರಂದು ವಿಶ್ವದಾದ್ಯಂತ ಹಿಂದಿ, ತೆಲುಗು, ಕನ್ನಡ, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ 3D ಮಾದರಿಯಲ್ಲಿ ತೆರೆಗೆ ಬರುತ್ತಿದೆ.