Actor Vasista Shimmha birthday Special announce new film ವಸಿಷ್ಠ ಸಿಂಹ ಹುಟ್ಟುಹಬ್ಬಕ್ಕೆ ಕಲಾ ಸೃಷ್ಠಿ ಪ್ರೊಡಕ್ಷನ್ಸ್ ನಿಂದ ಹೊಸ ಸಿನಿಮಾ ಘೋಷಣೆ .
ವಸಿಷ್ಠ ಸಿಂಹ ಹುಟ್ಟುಹಬ್ಬಕ್ಕೆ ಕಲಾ ಸೃಷ್ಠಿ ಪ್ರೊಡಕ್ಷನ್ಸ್ ನಿಂದ ಹೊಸ ಸಿನಿಮಾ ಘೋಷಣೆ .
ಬ್ರಹ್ಮ ನಿರ್ದೇಶನದಲ್ಲಿ ಮೂಡಿಬರಲಿದೆ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ
ತಮ್ಮ ಅಮೋಘ ಅಭಿನಯ ಹಾಗೂ ಕಂಠದ ಮೂಲಕ ಕನ್ನಡಿಗರ ಮನ ಗೆದ್ದಿರುವ ವಸಿಷ್ಠ ಸಿಂಹ ಅವರಿಗೆ ಈಗ(ಅಕ್ಟೋಬರ್ 19) ಹುಟ್ಟುಹಬ್ಬದ ಸಂಭ್ರಮ.

ವಸಿಷ್ಠ ಸಿಂಹ ಹುಟ್ಟುಹಬ್ಬದ ಸಲುವಾಗಿ ಕಲಾ ಸೃಷ್ಠಿ ಪ್ರೊಡಕ್ಷನ್ಸ್ ನಿಂದ ಹೊಸ ಚಿತ್ರದ ಘೋಷಣೆಯಾಗಿದೆ ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ಅಫ್ಜಲ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಹಿಂದೆ “ಸಿದ್ದಿ ಸೀರೆ” ಹಾಗೂ ರಾಗಿಣಿ ಅಭಿನಯದ “ಸಾರಿ” ಕರ್ಮ ರಿಟರ್ನ್ಸ್ ಚಿತ್ರದ ನಿರ್ದೇಶಕ ಬ್ರಹ್ಮ ಈ ನೂತನ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಕ್ರೈಮ್ ಥ್ರಿಲ್ಲರ್ ಹಾಗೂ ರಿವೆಂಜ್ ಕಥಾಹಂದರ ಹೊಂದಿರುವ ಈ ಚಿತ್ರ ಹಾಲಿವುಡ್ ಸ್ಟೈಲ್ ನಲ್ಲಿ (ನಾನ್ ಲೀನಿಯರ್ ಸ್ಕ್ರೀನ್ ಪ್ಲೇ) ಮೇಕಿಂಗ್ ಇರಲಿದೆ. ಬೆಂಗಳೂರು, ಕೊಡಗು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

ದೀಪಾವಳಿ ಹಬ್ಬದ ನಂತರ ಚಿತ್ರೀಕರಣ ಆರಂಭವಾಗಲಿದೆ.
ರಾಜೀವ್ ಗಣೇಶನ್ ಛಾಯಾಗ್ರಹಣ ಹಾಗೂ ರಾಘವನ್ ಕಾರ್ತಿಕ್ ಸಂಗೀತ ನಿರ್ದೇಶನ “ಪ್ರೊಡಕ್ಷನ್ ನಂ ೧” ಚಿತ್ರಕ್ಕಿರಲಿದೆ. ಅನೇಕ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.