Actor Sudeep speaking another actor Darshan case. ದರ್ಶನ್ ಕೇಸ್ ಬಗ್ಗೆ ಕಿಚ್ಚನ ರಿಯಾಕ್ಷನ್

ದರ್ಶನ್ ಕೇಸ್ ಬಗ್ಗೆ ಕಿಚ್ಚನ ರಿಯಾಕ್ಷನ್

ಇಂದು ಕಲಾವಿದರ ಸಂಘದಲ್ಲಿ ಮಾಧ್ಯಮದವರ ಪ್ರಶ್ತೆಗಳಿಗೆ ಉತ್ತರಿಸಿದ ಸುದೀಪ್‍, ಈ ಪ್ರಕರಣದಲ್ಲಿ ಪೊಲೀಸರು ಮತ್ತು ಮಾಧ್ಯಮದವರು ಬಹಳಷ್ಟು ಶ್ರಮ ಹಾಕುತ್ತಿದ್ದಾರೆ. ಈ ಪ್ರಕರಣದಿಂದ ಎಲ್ಲರ ಹೃದಯ ನೊಂದಿದೆ.

ನಾವು ಅವರ ಪರ, ಇವರ ಪರ ಅಂತ ಹೋಗೋದು ತಪ್ಪಾಗುತ್ತೆ, ಯಾರವಿರುದ್ಧನೂ ಹೋಗಬಾರದು ಆ ಫ್ಯಾಮಿಲಿಗೆ ನ್ಯಾಯ ಸಿಗಬೇಕು. ಎಲ್ಲೋ ಓಡಾಡ್ಕೊಂಡಿದ್ದ ರೇಣಿಕಾಸ್ವಾಮಿ ಬೀದಿಯಲ್ಲಿ ಬಿದ್ದಿದ್ನಲ್ಲ ಅವರಿಗೆ ನ್ಯಾಯ ಸಿಗಬೇಕು, ಆ ಮಗುಗೆ ನ್ಯಾಯ ಸಿಗಬೇಕು.

ನಾವೇನು ಸ್ಟೇಷನ್ ಒಳಗೆ ಹೋಗಿ ನೋಡಿಲ್ಲ ನೀವುಮೀಡಿಯಾದಲ್ಲಿ ತೋರಿಸ್ತಿರೋದೆ ನಮಗೂ ಗೊತ್ತು ಅಷ್ಟೇ.

ಕೊನೆದಾಗಿ ಚಿತ್ರರಂಗಕ್ಕೆ ನ್ಯಾಯ ಸಿಗಬೇಕಾಗಿದೆ, ಯಾವುದೋ ಚಿಕ್ಕ ಚಿಕ್ಕ ವಿಚಾರಗಳಿಗೆ ಚಿತ್ರರಂಗದಲ್ಲಿ ನಡಿತಿರೋ ವಿಷಯಗಳಿಗೆ ಒಂದು ಕ್ಲೀನ್ ಚಿಟ್ ಸಿಗಬೇಕಿದೆ.

ಪ್ರತಿಯೊಂದು ವಿಚಾರಕ್ಕೂ ಚಿತ್ರರಂಗವನ್ನು ಎಳೆದು ತರಲಾಗಿದೆ. ಕನ್ನಡ ಚಿತ್ರರಂಗಕ್ಕೆ ಎಷ್ಟೋ ವರ್ಷಗಳ ಇತಿಹಾಸವಿದೆ. ತುಂಬಾ ಜನ ಈ ಚಿತ್ರರಂಗವನ್ನು ಕಟ್ಟಿದ್ದಾರೆ. ಇದೊಂದು ಪ್ರಕರಣದಿಂದ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರಬಾರದು. ಏನು ನಂಗೆ ಸರಿಯಾಗಿ ಕಾಣ್ತಿಲ್ಲ
ಚಿತ್ರರಂಗಕ್ಕೂ ಏನು ಸರಿಯಾಗಿ ಕಾಣ್ತಿಲ್ಲ
ಕಲಾವಿದರು ತುಂಬಾ ಜನ ಇದ್ದಾರೆ, ಚಿತ್ರರಂಗಕ್ಕೂ ಒಂದು ಕ್ಲಿನ್ ಚಿಟ್ ಸಿಕ್ಕಿದೆ. ಈ ಕೇಸ್ ಇಂದ ದರ್ಶನ್ ಆಚೆ ಬಂದ್ರೆ ಏನು ಇರಲ್ಲ

ಕನ್ನಡ ಚಿತ್ರರಂಗದಿಂದ ದರ್ಶನ್‍ ಅವರನ್ನು ಬ್ಯಾನ್ ಮಾಡುವ ವಿಷಯಕ್ಕೆ ಬ್ಯಾನ್ ಅರ್ಥ ನನಗೆ ಗೊತ್ತಿಲ್ಲ. ಬ್ಯಾನ್ ಗಿಂತ ನ್ಯಾಯ ದೊಡ್ಡದು. ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಅವರ ಪತ್ನಿ ಸಹನಾಗೆ ನ್ಯಾಯ ಸಿಗಬೇಕು ಎಂದರು.

ಚಿತ್ರರಂಗ ಏನಾದರೂ ನಿಲುವು ತೆಗೆದುಕೊಂಡಾಗಲೆಲ್ಲಾ ನಗೆಪಾಟಿಲಿಗೆ ಈಡಾಗಿದೆ. ಯಾರೋ ಒಬ್ಬರು ಬರ್ತಾರೆ. ನನಗೆ ಮನೆಯಲ್ಲಿ ಸಿಕ್ಕಾಪಟ್ಟೆ ಹೊಡೆಯುತ್ತಿದ್ದಾರೆ ಎಂದು ಇನ್ನೊಬ್ಬರ ಮನೆಗೆ ಹೋಗ್ತಾರೆ. ಅವರು ಇವರಿಗೆ ಸಪೋರ್ಟ್ ಮಾಡುತ್ತಾರೆ. ಕೊನೆಗೆ ಕಿತ್ತಾಡಿಕೊಂಡ ಅವರಿಬ್ಬರು ಒಂದಾಗುತ್ತಾರೆ. ಸಪೋರ್ಟ್ ಮಾಡಿದವರು ಗೂಬೆಗಳಾಗುತ್ತಾರೆ. ಎಂದು ದರ್ಶನ್ ಹೆಂಡತಿಗೆ ಹೊಡೆದಾಗ ಒಬ್ಬ ಸ್ಟಾರ್ ನಟರು ಸಹಾಯ ಮಾಡಿ ಕರೆದು ಬುದ್ದಿ ಹೇಳಿದ್ದರು ಆ ಪ್ರಸಂಗವನ್ನು ಪರೋಕ್ಷವಾಗಿ ನೆನಪಿಸಿದರು.

ಒಟ್ಟನಲ್ಲಿ ಕನ್ನಡ ಚಿತ್ರರಂಗಕ್ಕೆ ಈ ರೀತಿಯಾಗಿ ಒಂದೊಂದೆ ಗಂಡಾಂತರಗಳು ಆವರಿಸಿಕೊಳ್ಳುತ್ತಿರುವುದು ಯಾಕೆ ಎನ್ನುವುದು ಯಕಗಷ ಪ್ರಶ್ನೆಯಾಗಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor