Aaram Aravind Swamy release on November 22nd. ಆರಾಮ್ ಅರವಿಂದ್ ಸ್ವಾಮಿ’ಗೆ ಬಘೀರ ಸಾಥ್…ನ.22ಕ್ಕೆ ಅನೀಶ್-ಅಭಿಷೇಕ್ ಶೆಟ್ಟಿ ಸಿನಿಮಾ ರಿಲೀಸ್

‘ಆರಾಮ್ ಅರವಿಂದ್ ಸ್ವಾಮಿ’ಗೆ ಬಘೀರ ಸಾಥ್…ನ.22ಕ್ಕೆ ಅನೀಶ್-ಅಭಿಷೇಕ್ ಶೆಟ್ಟಿ ಸಿನಿಮಾ ರಿಲೀಸ್

ಅನೀಶ್ ‘ಆರಾಮ್ ಅರವಿಂದ್ ಸ್ವಾಮಿ’ಗೆ ಶ್ರೀಮುರಳಿ ಸಾಥ್…ನ.22ಕ್ಕೆ ತೆರೆಗೆ ಬರ್ತಿದೆ ಸಿನಿಮಾ

ಪ್ರಚಾರದ ವಿಚಾರದಲ್ಲಿ ನಾನಾ ಪಟ್ಟುಗಳನ್ನು ಪ್ರದರ್ಶಿಸುತ್ತಾ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿರುವ ಆರಾಮ್ ಅರವಿಂದ್ ಸ್ವಾಮಿ. ಸಿನಿಮಾ ಇದೇ ತಿಂಗಳ 22ಕ್ಕೆ ಚಿತ್ರ ತೆರೆಗೆ ಬರ್ತಿದೆ. ಅದರ ಭಾಗವಾಗಿ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪ್ರೀ ರಿಲೀಸ್ ಇವೆಂಟ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಘೀರ ಖ್ಯಾತಿಯ ಶ್ರೀಮುರಳಿ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ನಿರ್ದೇಶಕ ಸೂರಿ ಹಾಗೂ ಇಡೀ ಆರಾಮ್ ಅರವಿಂದ್ ಸ್ವಾಮಿ ಚಿತ್ರತಂಡ ಈ ವೇಳೆ ಉಪಸ್ಥಿತರಿದ್ದರು.

ಇದೇ ವೇಳೆ ನಟ ಶ್ರೀಮುರಳಿ ಮಾತನಾಡಿ, ಅನೀಶ್ ಅವರಿಗೆ ಒಳ್ಳೆದಾಗಲಿ. ಆರಾಮ್ ಅರವಿಂದ್ ಸ್ವಾಮಿ ನನಗೆ ಟೈಟಲ್ ತುಂಬಾ ಇಷ್ಟವಾಯಿತು ಅಭಿ. ನಿಮ್ಮ ಟೀಂನಲ್ಲಿ ಒಬ್ಬರಿಗೊಬ್ಬರಿಗೆ ಪ್ರೀತಿ ಕೊಡುತ್ತಿದ್ದೀರ. ನಮ್ಮ ಹೀರೋ ಬೆಳೆಯಬೇಕು ಅಂತಾ ನೀವು ಹೀರೋಗೆ ಸಪೋರ್ಟ್ ಮಾಡುವುದು. ಪ್ರೊಡ್ಯೂಸರ್ ಒಳ್ಳೆದಾಗಲಿ ಎಂದು ಹೀರೋ ಮಾತನಾಡುತ್ತಾರೆ. ಈ ಫೀಲಿಂಗ್ ಇಷ್ಟವಾಯ್ತು. ಸುಖ ಇರುವ ಕಡೆ ನೋವು ಬರುವುದು. ಸಕ್ಸಸ್ ಆದ್ಮೇಲೆ ಫೇಲ್ಯೂರ್ ಬರುವುದು. ಫೇಲ್ಯೂರ್ ಆದ್ಮೇಲೆ ಮತ್ತೆ ಸಕ್ಸಸ್ ಬರುತ್ತದೆ. ಈ ನಿಜಾಂಶ ತಿಳಿದುಕೊಳ್ಳಬೇಕು. ಜರ್ನಿ ಜಾಗದಲ್ಲಿ ತಾಳ್ಮೆ ಇರಬೇಕು. ಬಘೀರ ಆಗಿದ್ದು ಲಕ್ಕಿಯಿಂದಲ್ಲ. ಹಾರ್ಡ್ ವರ್ಕ್. ಶ್ರಮದಿಂದ ಸಕ್ಸಸ್ ಸಿಕ್ಕಿತು. ಸಕ್ಸಸ್ ಕೊಡುವುದು ಅಭಿಮಾನಿಗಳು. ನಿಮಗೆ ಒಳ್ಳೆದು ಆಗುತ್ತದೆ. ಅದಕ್ಕಾಗಿ ಕಾಯಬೇಕು. ಮಿಲನಾ ನಿಮ್ಮ ಬಗ್ಗೆ ಹೆಮ್ಮೆಯಾಯ್ತು. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ತಿಳಿಸಿದರು.

ನಟ ಅನೀಶ್ ಮಾತನಾಡಿ, ಕಷ್ಟಪಡುತ್ತಿದ್ದರೆ ಒಂದಲ್ಲ ಒಂದು ದಿನ ಫಲ ಸಿಗುತ್ತದೆ ಎನ್ನುವುದಕ್ಕೆ ಮುರಳಿ ಸರ್ ಬೆಸ್ಟ್ ಎಕ್ಸಂಪಲ್. ಇಂಡಸ್ಟ್ರೀಯಲ್ಲಿ ಒಬ್ಬರಿಗೊಬ್ಬರು ಸಪೋರ್ಟ್ ಮಾಡಲ್ಲ ಎಂಬ ಮಾತಿದೆ. ಅಕಿರಾ, ವಾಸು, ರಾಮಾರ್ಜುನಾ ಟೈಮ್ನಲ್ಲಿ ಈಗಲೂ ನಿಮ್ಮ ಬಳಿ ಬಂದು ಕೇಳಿದಾಗ ನಿನಗೋಸ್ಕರ ಬರುತ್ತೇನೆ ಎಂದ್ರಿ. ಇದು ನನ್ನ 12ನೇ ಸಿನಿಮಾ. ಇಂಡಸ್ಟ್ರೀಗೆ ಬಂದು ಅನೀಶ್ 14 ವರ್ಷವಾಯ್ತು ಎನ್ನುತ್ತಾರೆ. ನನಗೆ ಯಾವುದು ನೆನಪಿಲ್ಲ. 12ನೇ ಶುಕ್ರವಾರ ಎದುರಿಸ್ತಿದ್ದೇನೆ. ಅನೀಶ್ ನಟನೆ, ಡ್ಯಾನ್ಸ್, ಆಕ್ಷನ್ ಎಲ್ಲಾ ಚೆನ್ನಾಗಿ ಮಾಡಿದ್ದಾನೆ ಎನ್ನುತ್ತಾರೆ. ಹಾಸನ, ಬೆಂಗಳೂರು, ಮಂಗಳೂರಲ್ಲಿ ಇಷ್ಟು ಕಲೆಕ್ಷನ್ ಆಯ್ತು ಅನ್ನೋದನ್ನು ನೋಡಬೇಕು. ಈ ಪಯಣದಲ್ಲಿ ಏನು ಕಲಿತೆ ಎಂದರೆ. ಒಳ್ಳೆ ನಟ ಆಗಿರಬಹುದು. ಒಳ್ಳೆ ನಟ ಶುಕ್ರವಾರದ ಬಾಕ್ಸಾಫೀಸ್ ನಲ್ಲಿ ಸೋತರೆ ಕೆಟ್ಟ ನಟನೆ. ಒಂದೊಳ್ಳೆ ತಂಡ ನನ್ನ ಜೊತೆ ಇದೆ. ಇದೇ 22ಕ್ಕೆ ನಮ್ಮ ಸಿನಿಮಾ ಥಿಯೇಟರ್ ಗೆ ಬರುತ್ತಿದೆ ನಿಮ್ಮ ಬೆಂಬಲ ಇರಲಿ ಎಂದರು.

ನಿರ್ದೇಶಕ ಅಭಿಷೇಕ್ ಶೆಟ್ಟಿ ಮಾತನಾಡಿ. ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಪ್ರೀಮಿಯರ್ ಶೋನಲ್ಲಿ ಅನೀಶ್ ಹಾಗೂ ಪ್ರಸನ್ನ ಸರ್ ನನಗೆ ಪರಿಚಯವಾಗಿದ್ದು. ಆರಾಮ್ ಅರವಿಂದ್ ಸ್ವಾಮಿ ಸ್ಕ್ರೀಪ್ಟ್ ಮಾಡಿಕೊಂಡು ಅಲೆದಾಡುವಾಗ ಅನೀಶ್ ಅವರಿಗೆ ಕಥೆ ಮಾಡಬೇಕು ಅಂತಾ ಕಾಲ್ ಮಾಡಿ ಪ್ರಸನ್ನ ಸರ್ ತಂಡದವರು ಕರೆದರು. ಆಗ ಅನೀಶ್ ಗೆ ಎರಡು ಬ್ಯಾಕ್ ಟು ಬ್ಯಾಕ್ ಮಾಸ್ ಕಥೆ ಹೇಳಿದೆ. ಅವರಿಗೆ ಇಷ್ಟವಾಗಲಿಲ್ಲ. ಆ ಬಳಿಕ ನನಗೆ ಮಾಡಿಕೊಂಡು ಆರಾಮ್ ಅರವಿಂದ್ ಸ್ವಾಮಿ ಸ್ಕ್ರೀಪ್ಟ್ ಹೇಳಿದೆ. ಆಗ ಅವರು ಖುಷಿಯಾದರು. ಕಮ್ಮಿ ಬಜೆಟ್ ನಲ್ಲಿ ಸಿನಿಮಾ ಕೊಟ್ವಿ. ನಾನು ಯಾವುದನ್ನು ಪ್ಲ್ಯಾನ್ ಮಾಡಿಲ್ಲ. ಸಿನಿಮಾಗೆ ಏನೂ ಬೇಕು ಅದು ತೆಗೆದುಕೊಂಡಿದೆ. ನವೆಂಬರ್ 22ಕ್ಕೆ ನಮ್ಮ ಅಷ್ಟು ಜನರ ಶ್ರಮ, ಶ್ರದ್ಧೆ ತೆರೆಮೇಲೆ ಕಾಣುತ್ತದೆ ಎಂದರು.

ಮಾಸ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸಿರೋ ಅನೀಶ್ ತೇಜೇಶ್ವರ್ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ಆರಾಮ್ ಅರವಿಂದ್ ಸ್ವಾಮಿ ಸಿನಿಮಾದಲ್ಲಿ ನಟಿಸಿದ್ದಾರೆ. ‘ನಮ್ ಗಣಿ ಬಿಕಾಂ ಪಾಸ್’, ‘ಗಜಾನನ ಅಂಡ್ ಗ್ಯಾಂಗ್’ ಅಂತಹ ಸಿನಿಮಾಗಳನ್ನು ನಿರ್ದೇಶಿಸಿರೋ ಅಭಿಷೇಕ್ ಶೆಟ್ಟಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇಲ್ಲಿ ಅನೀಶ್‌ಗೆ ಮಿಲನಾ ನಾಗರಾಜ್ ಹಾಗೂ ಹೃತಿಕ ಶ್ರೀನಿವಾಸ್ ಇಬ್ಬರು ನಾಯಕಿಯರು.

ಆರಾಮ್ ಅರವಿಂದ್ ಸ್ವಾಮಿ ಸಿನಿಮಾಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಟ್ಯೂನ್ ಹಾಕುತ್ತಿದ್ದಾರೆ. ವೈವಿಬಿ ಶಿವಸಾಗರ್ ಕ್ಯಾಮರಾವರ್ಕ್ ಹಿಡಿದಿದ್ದಾರೆ. ‘ಅಕಿರ’ ಸಿನಿಮಾ ನಿರ್ಮಿಸಿದ್ದ ಶ್ರೀಕಾಂತ್ ಪ್ರಸನ್ನ ಹಾಗೂ ‘ಗುಳ್ಟು’ ಸಿನಿಮಾ ನಿರ್ಮಾಪಕ ಪ್ರಶಾಂತ್ ರೆಡ್ಡಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಟಿಕೆಟ್ ಬೆಲೆ 99 ರೂ
ಆರಾಮ್ ಅರವಿಂದ್ ಸ್ವಾಮಿ ಚಿತ್ರ ಇದೇ ತಿಂಗಳು 22 ರಂದು ರಿಲೀಸ್ ಆಗುತ್ತಿದೆ. ನವೆಂಬರ್ 22 ರಂದು ಎಲ್ಲೆಡೆ ಬರ್ತಿರೋ ಈ ಚಿತ್ರದ ಟಿಕೆಟ್ ಕೇವಲ 99 ರೂಪಾಯಿ ಆಗಿದೆ. ಆದರೆ ಸಿನಿಮಾ ರಿಲೀಸ್ ಆದ ಮೂರು ದಿನ ಮಾತ್ರ ಈ ಒಂದು ಆಫರ್ ಇರುತ್ತದೆ. ಆ ಮೇಲೆ ಎಂದಿನಂತೆ ಟಿಕೆಟ್ ಬೆಲೆ ಇರಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor