Aaram Aravind Swamy Movie Review. ಆರಾಮ್ ಅರವಿಂದ್ ಸ್ವಾಮಿ ಚಿತ್ರ ವಿಮರ್ಶೆ ಆರಾಮಾಗಿ ನೋಡಬಹುದಾದಾ ಫುಲ್ಲಿ ಲೋಡೆಡ್ ಮನರಂಜನೆಯ ಚಿತ್ರ.
ಚಿತ್ರ ವಿಮರ್ಶೆ
ಚಿತ್ರ: ಆರಾಮ್ ಅರವಿಂದ್ ಸ್ವಾಮಿ
ನಿರ್ಮಾಣ ಸಂಸ್ಥೆ – 78G ಫಿಲಮ್ಸ್
ನಿರ್ಮಾಪಕರು – ಶ್ರೀಕಾಂತ್ ಪ್ರಸನ್ನ, ಪ್ರಶಾಂತ್ ರೆಡ್ಡಿ
ಕಥೆ, ನಿರ್ದೇಶನ – ಅಭಿಷೇಕ್ ಶೆಟ್ಟಿ
ಛಾಯಾಗ್ರಹಣ – ಶಿವಸಾಗರ್ ವೈವಿಬಿ.
ಸಂಗೀತ – ಅರ್ಜುನ್ ಜನ್ಯ
ಸಂಕಲನ – ಉಮೇಶ್ ಆರ್. ಬಿ.
ಕಲಾವಿದರು – ಅನೀಶ್, ಮಿಲನ ನಾಗರಾಜ್, ರಿತಿಕ ಶ್ರೀನಿವಾಸನ್, ಗೌರವ್ ಶೆಟ್ಟಿ, ಆರ್.ಜೆ. ವಿಕ್ಕಿ
ಅಚ್ಯುತ್, ಮುಂತಾದವರು.
ರೇಟಿಂಗ್ – 3.5/5
ಆರಾಮ್ ಅರವಿಂದ ಸ್ವಾಮಿ
ಇದೊಂದು ಫ್ಯಾಮಿಲಿ, ಎಮೋಷನಲ್ ಕಾಮಿಡಿ, ಹಾಗೂ ಪ್ರೇಮ ಸಂವೇದನೆಯ ಚಿತ್ರ.
ಒಬ್ಬ ಪ್ರೇಕ್ಷಕ ಕೊಡುವ ಹಣಕ್ಕೆ ಯಾವುದೇ ಮೋಸವಿಲ್ಲದ ಸಾದಾ ಸೀದಾ ಅಚ್ಚುಕಟ್ಟಾದ ಸರಳ ಮತ್ತು ವಿರಳ ಪ್ರೇಮಕಥೆ ಎನ್ನಬಹುದು.

ಇಲ್ಲಿ ಯಾವುದೇ ಓವರ್ ಬಿಲ್ಡಪ್ ಗಳು, ಬೇಡದ ದೃಶ್ಯಗಳಿಲ್ಲದ ನವಿರಾದ ಕಥೆಯನ್ನು ಎಣೆದಿದ್ದಾರೆ ನಿರ್ದೇಶಕ ಅಭಿಷೇಕ್ ಶೆಟ್ಟಿ.
ಚಿತ್ರ ಕಥೆಯ ನಿರೂಪಣೆಯನ್ನು ಮೊದಲ ದೃಶ್ಯದಿಂದ ಕೊನೆಯವರೆಗೂ ಎಲ್ಲೂ ಎಡವದಂತೆ ತುಂಬಾ ಚನ್ನಾಗಿ ನಿಭಾಯಿಸಿದ್ದಾರೆ
ಕಥಾನಾಯಕ ಅರವಿಂದ್ ಸ್ವಾಮಿ ತಾನು ಆರಾಮಾದ, ಸುಖಮಯವಾದ ಜೀವನ ನಡೆಸುತ್ತಿದ್ದೇನೆ ಎಂಬಂತೆ ತನ್ನನ್ನು ತಾನು ಬಿಂಬಿಸಿಕೊಂಡಿರುತ್ತಾನೆ ಆದರೆ ವಾಸ್ತವವಾಗಿ ಅವನೊಬ್ಬ ಸಾಧಾರಣವಾದ ಮಿಡಲ್ ಕ್ಲಾಸ್ ಹುಡುಗ. ತಾನು ಪ್ರೀತಿಸುತ್ತಿರುವ ಹುಡುಗಿಗಾಗಿ (ಮಿಲನ ನಾಗರಾಜ್ ) ತಾನೊಬ್ಬ ಶ್ರೀಮಂತ ಮನೆತನದ ಹುಡುಗ ಎಂದು ತನ್ನ ಸುತ್ತ ಸುಳ್ಳಿನ ಬಲೆ ಎಣೆದುಕೊಂಡು ಜನರನ್ನು ಹಾಗೂ ತನ್ನ ಹುಡುಗಿಯನ್ನು ಯಾಮಾರಿಸಿಕೊಂಡಿರುತ್ತಾನೆ ಆದರೆ ಒಂದು ದಿನ ತನ್ನ ಬಲೆಯಲ್ಲಿ ತಾನೆ ಸಿಕ್ಕಿಕೊಂಡು ಒದ್ದಾಡುವ ಪರಿಸ್ಥಿತಿ ಬಂದಾಗ ಹೇಗೆ ಅದನ್ನೆಲ್ಲಾ ನಿಭಾಯಿಸುತ್ತಾನೆ ಎನ್ನುವುದೇ ಆರಾಮ್ ಅರವಿಂದಸ್ವಾಮಿ ಕಥೆ.

ಅರವಿಂದ್ ಸ್ವಾಮಿ ಹೊರಗೆ arrogant ಆಗಿ ದರ್ಪದಿಂದಿದ್ದರು ಅವನೊಳಗೊಬ್ಬ ಪ್ರಾಮಾಣಿಕನಿರುತ್ತಾಬೆ, ಅವನೊಳಗೊಂದು ಮಗುವಿನ ಮನಸ್ಸಿರುತ್ತದೆ, ಅವನೊಳಗೊಬ್ಬ ಪ್ರಾಮಾಣಿಕ ಪ್ರೇಮಿ ಇರುತ್ತಾನೆ. ಇಬ್ಬರು ನಾಯಕಿಯರ ಮಧ್ಯೆ ಅರವಿಂದ ಸ್ವಾಮಿ ಏನೆಲ್ಲಾ ಕಷ್ಟಗಳಿಗೆ ಸಿಗುತ್ತಾನೆ ಅನ್ನುವುದನ್ನು ಒಂದಷ್ಟು ಹಾಸ್ಯಮಯವಾಗಿಯು ನೋಡಬಹುದು.
ನಟ ಅನೀಶ್ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಹಲವಾರು ರೀತಿಯಲ್ಲಿ ಚಿತ್ರರಂಗದಲ್ಲಿ ಕಷ್ಟ ಪಡುತ್ತಾ, ಏಳು ಬೀಳುಗಳನ್ನು ನೋಡುತ್ತಾ ಒಂದೊಂದೆ ಹೆಜ್ಜೆಗಳನ್ನು ಇಡುತ್ತಿದ್ದಾರೆ.

ಅನೀಶ್ ಒಬ್ಬ ಒಬ್ಬ ಒಳ್ಳೆಯ ಕಲಾವಿದ, ತನ್ನಲ್ಲಿರುವ ಪ್ರತಿಭೆಯನ್ನು ಪ್ರತೀಯೊಂದು ಚಿತ್ರದಲ್ಲೂ, ಪ್ರತೀಯೊಂದು ಪಾತ್ರಗಳ ಮೇಲೆ ಪ್ರಯೋಗ ಮಾಡುತ್ತಾ ಸೈ ಎನಿಸಿಕೊಂಡು ಜನರಿಗೆ ಚಿರ ಪರಿಚಿತರಾಗಿದ್ದಾರೆ.
ಅರವಿಂದ್ ಸ್ವಾಮಿಯಲ್ಲಿ arrogant ಪಾತ್ರದಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ, ಈ ಪಾತ್ರ ಅವರಿಗಷ್ಟೇ ಸೂಟ್ ಆಗುತ್ತದೆ ಎನ್ನುವಂತೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಹಾಗೇ ಪಾತ್ರಕ್ಕೆ ತಕ್ಕಂತೆ ಕಾಷ್ಟೂಮ್ ಕೂಡ ಚನ್ನಾಗಿದೆ ಅನೀಶ್ ಸ್ಟೈಲಿಷ್ ಆಗಿ ಕಾಣುತ್ತಾರೆ.

ಇನ್ನು ಮಿಲನ ನಾಗರಾಜ್ ಮಿಲನ ಸಹಜ ಅಭಿನಯದ ಸುಂದರಿ ಎನ್ನಬಹುದು. ಯಾವುದೇ ಪಾತ್ರವಾದರೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತೆ ಅಭಿನಯಿಸುತ್ತಾರೆ. ಈ ಚಿತ್ರದಲ್ಲಿ ಅರವಿಂದ್ ಸ್ವಾಮಿಯ ಪ್ರೇಯಸಿಯಾಗಿ, ಸ್ಕೂಲ್ ಟೀಚರ್ ಆಗಿ ಆರಾಮಾಗಿ ತೆರೆಯ ಮೇಲೆ ಮಿಂಚಿದ್ದಾರೆ.
ಮತ್ತೊಬ್ಬ ನಾಯಕಿ ಅರವಿಂದ ಸ್ವಾಮಿಯ ಟ್ರಯಾಂಗಲ್ ಲವ್ ಸ್ಟೋರಿಗೆ ಜೊತೆಯಾಗಿರುವುದು ರಿತಿಕ ಶ್ರೀನಿವಾಸನ್.
ಈಕೆ ಮಾತು ಬಾರದ, ಕುಂಟುವ ಮುಗ್ಧ ಹುಡುಗಿಯಾಗಿ ಮುದ್ದಾಗಿ ಅಭಿನಯಿಸಿದ್ದಾರೆ.

ಅಚ್ಯುತ್ ನಾಯಕಿಯ ಶ್ರೀಮಂತ ತಂದೆಯಾಗಿ, ಹೆಣ್ಣು ಹೆತ್ತ ತಂದೆ ತಾಯಿಯರ ಬವಣೆಯ ಪಾತ್ರವನ್ನು ಮನ ಮುಟ್ಟುವಂತೆ ನಿಭಾಯಿಸಿದ್ದಾರೆ ಪ್ರಶಾಂತ್ ರೆಡ್ಡಿ, ಶ್ರೀಕಾಂತ್ ಪ್ರಸನ್ನ ಚಿತ್ರದ ನಿರ್ಮಾಪಕರಾಗಿ ಒಂದೊಳ್ಳೆಯ ಚಿತ್ರವನ್ನು ಕನ್ನಡದ ಜನರಿಗೆ ನೀಡಿದ್ದಾರೆ.
ಈ ಕಥೆಗಾಗಿ ಬಹಳ ವರ್ಷ ಹುಡುಕಾಡಿ ಅನೀಶ್ ಗಾಗಿ ಒಂದೊಳ್ಳೆಯ ಕಥೆ ಹುಡುಕಿ ಈ ಸಿನಿಮಾಗೆ ಹಣ ಹೂಡಿದ್ದಾರೆ.
ಅನೀಶ್, ಪ್ರಶಾಂತ್ ರೆಡ್ಡಿ, ಶ್ರೀಕಾಂತ್ ಪ್ರಸನ್ನ, ಅಭಿಷೇಕ್ ಶೆಟ್ಟಿ ಈ ಒಂದು ತಂಡ ಶ್ರಮ ವಹಿಸಿ ಆರಾಮ್ ಅರವಿಂದ್ ಸ್ವಾಮಿಯನ್ನು ಕಟ್ಟಿಕೊಟ್ಟಿದ್ದಾರೆ
ಈ ತಂಡದ ಶ್ರಮ ಸಾರ್ಥಕವಾಗಬೇಕಾದರೆ ಸಿನಿಮಾ ಗೆಲ್ಲಬೇಕು ಎಂಬುದು ನಮ್ಮ ಆಶಯ.
ಅರ್ಜುನ್ ಜನ್ಯ ಸಂಗೀತ, ಶಿವಸಾಗರ್ ಛಾಯಾಗ್ರಹಣ, ಉಮೇಶ್ ಸಂಕಲನ ಎಲ್ಲವೂ ಚಿತ್ರದ ಗೆಲುವಿಗೆ ಸಾಥ್ ನೀಡಿವೆ.

ತಾಯಿ, ತಂದೆ, ಪ್ರೀತಿ ಪ್ರೇಮ ದುಃಖ, ಸಂತೋಷ, ಹಾಸ್ಯ, ಮೋಜು ಮಸ್ತಿ, ಹೆಣ್ಣು ಹೆತ್ತವರ ಬವಣೆ, ಸುಳ್ಳು ಸತ್ಯಗಳ ಸಂಗಮದೊಂದಿಗೆ ಸಮಾಜಕ್ಕೊಂದಿಷ್ಟು ಮೆಸೇಜು ಹೇಳುತ್ತಾನೆ ಅರವಿಂದ ಸ್ವಾಮಿ.
ಆರಾಮ್ ಅರವಿಂದ್ ಸ್ವಾಮಿಯಂತಹ ಸದಭಿರುಚಿಯ ಚಿತ್ರವನ್ನು
ಪ್ರೇಕ್ಷಕ ಪ್ರಭುಗಳು ಕೈ ಹಿಡಿದು ಮೇಲೆತ್ತ ಬೇಕಿದೆ.
ಆರಾಮಾಗಿ ಅರವಿಂದ ಸ್ವಾಮಿಯನ್ನು ನೋಡಬಹುದು ಇದು ಪಕ್ಕಾ ಪೈಸಾ ವಸೂಲ್ ಚಿತ್ರ.