Aadujeevitham Movie Press MEET. ಮಾ.28ಕ್ಕೆ ನೈಜಕಥೆ ಆಧಾರಿತ ‘ಆಡು ಜೀವಿತಂ’ ದೇಶಾದ್ಯಂತ ಬಿಡುಗಡೆ

ಮಾ.28ಕ್ಕೆ ನೈಜಕಥೆ ಆಧಾರಿತ ‘ಆಡು ಜೀವಿತಂ’ ದೇಶಾದ್ಯಂತ ಬಿಡುಗಡೆ

ʼಆಡು ಜೀವಿತಂʼ (Aadujeevitham Movie) ಸದ್ಯ ದೇಶದ ಸಿನಿ ರಸಿಕರ ಗಮನ ಸೆಳೆದ ಮಲಯಾಳಂ ಚಿತ್ರ. ಮಾಲಿವುಡ್‌ ಸೂಪರ್‌ ಸ್ಟಾರ್‌, ʼಸಲಾರ್‌ʼ ಚಿತ್ರದ ಮೂಲಕ ಮಿಂಚಿದ ಪೃಥ್ವಿರಾಜ್‌ ಸುಕುಮಾರನ್ (Prithviraj Sukumaran) ಅಭಿನಯದ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅಕಾಡೆಮಿ ಪ್ರಶಸ್ತಿ ವಿಜೇತ ಎ.ಆರ್.ರೆಹಮಾನ್ (A.R.Rahman) ಈ ಸಿಮಾಕ್ಕೆ ಸಂಗೀತ ನೀಡಿರುವುದು ವಿಶೇಷ.

ಈ ಚಲನಚಿತ್ರವು ಮಲಯಾಳಂ ಸಾಹಿತ್ಯ ಪ್ರಪಂಚದಲ್ಲಿ ಅತ್ಯಂತ ಜನಪ್ರಿಯವಾದ, ಬೆಸ್ಟ್ ಸೆಲ್ಲರ್‌ಗಳಲ್ಲಿ ಒಂದಾದ ‘ಆಡು ಜೀವಿತಂ’ ಕಾದಂಬರಿಯನ್ನು ಆಧರಿಸಿದೆ. ಹೆಸರಾಂತ ಬರಹಗಾರ ಬೆನ್ಯಾಮಿನ್ ಬರೆದಿರುವ ಈ ಕಥೆ 90ರ ದಶಕದ ಆರಂಭದಲ್ಲಿ ಕೇರಳದ ಹಚ್ಚ ಹಸಿರಿನ ತೀರದಿಂದ ಅದೃಷ್ಟವನ್ನು ಹುಡುಕುತ್ತಾ ವಿದೇಶಕ್ಕೆ ವಲಸೆ ಹೋದ ಯುವಕ ನಜೀಬ್‌ನ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈಗಾಗಲೇ ಬಿಡುಗಡೆಯಾದ ಪೋಸ್ಟರ್‌, ಟೀಸರ್‌ ಕುತೂಹಲ ಮೂಡಿಸಿದೆ.

ವಿಷುಯಲ್ ರೊಮ್ಯಾನ್ಸ್ ನಿರ್ಮಿಸಿದ ಈ ಚಿತ್ರದಲ್ಲಿ ಹಾಲಿವುಡ್ ನಟ ಜಿಮ್ಮಿ ಜೀನ್-ಲೂಯಿಸ್, ಅಮಲಾ ಪೌಲ್, ಭಾರತೀಯ ನಟ ಕೆ.ಆರ್.ಗೋಕುಲ್ ಮತ್ತು ಹೆಸರಾಂತ ಅರಬ್ ನಟರಾದ ತಾಲಿಬ್ ಅಲ್ ಬಲುಶಿ ಮತ್ತು ರಿಕಾಬಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಈ ಚಿತ್ರ ಮಲಯಾಳಂ ಜತೆಗೆ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಇದೇ ತಿಂಗಳ28ರಂದು ದೇಶಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿತ್ತಿದೆ. ಕರ್ನಾಟಕದಲ್ಲಿ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನ ವಿಜಯ್ ಕಿರಂಗದೂರು ರಿಲೀಸ್ ಮಾಡುತ್ತಿದ್ದಾರೆ.

ಆಡು ಜೀವಿತಂ’ ಚಿತ್ರದ ಪ್ರಚಾಕ್ಕಾಗಿ‌ ಬೆಂಗಳೂರಿಗೆ ಆಗಮಿಸಿದ ನಾಯಕನಟ ಪೃಥ್ವಿ ಸುಕುಮಾರನ್ ಹಾಗೂ ನಿರ್ದೇಶಕ ಬ್ಲೆಸ್ಲಿ ಹಾಗು ನಟ ಜಿಮ್ಮಿ ಜೀನ್ ಲೂಯಿಸ್‌ ಭಾನುಬಾರ ಸಂಜೆ ಮಾಧ್ಯಮಗಳ ಮುಂದೆ ಹಾಜರಾಗಿ ಗೋಟ್ ಲೈಫ್ ಚಿತ್ರದ ಕುರಿತಂತೆ ಒಂದಷ್ಟು ‌ಮಾಹಿತಿಹಳನ್ಮು ಹಂಚಿಕೊಂಡರು.

2018ರಲ್ಲಿ ಈ ಚಿತ್ರದ ಶೂಟಿಂಗ್ ಶುರುವಾಗಿದ್ದು ನಂತರ ಕೋವಿಡ್ ಸೇರಿ ಅನೇಕ ಕಾರಣದಿಂದ ಚಿತ್ರ ತಡವಾಗಿದೆ. ಗ್ರೇಟೆಸ್ಟ್ ಸರ್ವೈವಲ್ ಅಡ್ವೆಂಚರ್‌
ಸಿನಿಮಾ ಇದಾಗಿದ್ದೂ ಒಂದು ಇನ್ ಸ್ಪಿರೇಷನ್ ಕಥೆಯನ್ನು ಈ ಚಿತ್ರ ಒಳಗೊಂಡಿದೆ.

ಈ ಸಂದರ್ಬದಲ್ಲಿ ಮಾತನಾಡಿದ ನಾಯಕ ನಟ ಪೃಥ್ವಿ ರಾಜ್ ಸುಕುಮಾರನ್ ನಜೀಬ್ ಮೊಹಮ್ಮದ್ ಅವರ ನೈಜ ಕಥೆಯನ್ನು ಈ ಚಿತ್ರದಲ್ಲಿ ಈ ಚಿತ್ರದ ಮೂಲಕ ತೆರೆಯಮೇಲೆ ತಂದಿದ್ದೇವೆ.ಇದು 16 ವರ್ಷಗಳ ಸುರ್ಧಿರ್ಘ/ಪಯಣ ಈ ಮೊದಲು ಬೆನ್ನಿಮನ್ ಅವರು ನಜೀಮ್ ಕಥೆಯನ್ನು ಪುಸ್ತಕ ರೂಪದಲ್ಲಿ ತಂದರು,ಆ ಪುಸ್ತಕ ಮಾರಾಟ ದಾಖಲೆಯನ್ನೆ ಬರೆಯಿತು. ನಂತರ ಅದನ್ನೇ ಇಟ್ಟುಕೊಂಡು ಗೋಟ್ ಲೈಫ್ ಚಿತ್ರ ಮಾಡಿದ್ದೇವೆ ,ಕೋವಿಡ್ ಸಮಯದಲ್ಲಿ ಸ್ವಲ್ಪ ಬ್ರೇಕ್ ಆಯ್ತು, ಈ ಚಿತ್ರ ಪಾತ್ರಕ್ಕಾಗಿ ನಾನು 31 ಕೆಜಿ ತೂಕ ಕಳೆದಿಕೊಂಡಿದ್ದೆ. ಒಂದುವರೆಯಿಂದ ಎರಡು ವರ್ಷ ಶೂಟಿಂಗ್ ಸ್ಟಾಪ್ ಆಗಿದ್ದು ವೇಟ್ ಲಾಸ್ ಮಾಡಿಕೊಳ್ಳಲು ಸಮಯ ಸಿಕ್ಕಿತು ಎಂದು ಹೇಳಿದರು.

ನಂತರ ಚಿತ್ರದ ನಿರ್ದೇಶಕ ಬ್ಲಸ್ಲಿ ಮಾತಾನಾಡಿ ಈ ಸಿನಿಮಾ 16 ವರ್ಷಗಳ ಕನಸು, ಇದೊಂದು ನೈಜಕಥೆಯಾಗಿದ್ದು‌ ಫಿಷರ್‌ ಮ್ಯಾನ್ ನಜೀಬ್ ನ ಕಥೆಯಾಗಿದೆ. ಇದೇ 28ಕ್ಕೆ ಬಿಡುಗಡೆಯಾಗಿತ್ತಿದೆ ಅಂತ ಹೇಳಿದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor