90 Bid I Manig Nadi “90 ಬಿಡಿ ಮನಿಗ್ ನಡಿ ಈ ವಾರ ತೆರೆಗೆ ಬರಲಿದೆ
*ಈ ವಾರ ತೆರೆಗೆ ಬರಲಿದೆ “90 ಬಿಡಿ ಮನೀಗ್ ನಡಿ”* .
*ಹಿರಿಯ ನಟ ಬಿರಾದರ್ ಅಭಿನಯದ 500ನೇ ಚಿತ್ರ* .
ರಾಷ್ಟ್ರಪ್ರಶಸ್ತಿ ವಿಜೇತ ನಟ ವೈಜನಾಥ್ ಅಭಿನಯದ 500ನೇ ಚಿತ್ರ “90 ಬಿಡಿ ಮನೀಗ್ ನಡಿ”.
ಈ ಗುರುವಾರ (ಜೂನ್ 29) ರಂದು
ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ್ ಅರೆಹೊಳೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಅಮ್ಮ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ತಾರಾಬಳಗದಲ್ಲಿ ಬಿರಾದಾರ್, ಅಭಯ್, ಪ್ರೀತು ಪೂಜಾ, ನೀತಾ, ಆರ್ ಡಿ ಬಾಬು, ವಿವೇಕ್ ಹೊಸಕೋಟೆ, ಮುರುಳಿ, ಕರಿಸುಬ್ಬು, ಧರ್ಮ, ಪ್ರಶಾಂತ್ ಸಿದ್ದಿ, ಮುಂತಾದವರಿದ್ದಾರೆ.
ಕೃಷ್ಣ ನಾಯ್ಕರ್ ಛಾಯಾಗ್ರಹಣ, ವೆಂಕಟೇಶ್ ಯುಡಿವಿ ಸಂಕಲನ, ರಾಕಿ ರಮೇಶ್ ಸಾಹಸ ನಿರ್ದೇಶನ, ವೀರ್ ಸಮರ್ಥ್ ಹಿನ್ನೆಲೆ ಸಂಗೀತವಿದ್ದು, ಕಿರಣ್ ಶಂಕರ್ ಮತ್ತು ಶಿವು ಭೇರಗಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.