4N6 Movie Review. “4 ಎನ್ 6” ಈವಾರ ಬಿಡುಗಡೆ ಚಿತ್ರ ವಿಮರ್ಶೆ.
ಚಿತ್ರ ವಿಮರ್ಶೆ. 4N6
ಪರ್ಪಲ್ ಪ್ಯಾಚ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಾಯಿಪ್ರೀತಿ ಎನ್. ಅವರು ನಿರ್ಮಿಸಿರುವ,4N6 ಚಿತ್ರ ಈ ವಾರ ತೆರೆ ಕಂಡಿದೆ.
ಮರ್ಡರ್ ಮಿಸ್ಟ್ರಿ ಜೊತೆಗೆ ಇನ್ ವೆಸ್ಟಿಗೇಷನ್ ಥ್ರಿಲ್ಲರ್ ಕಾನ್ಸೆಪ್ಟ್ ಹೊಂದಿರುವ ಚಿತ್ರ, ನಿಗೂಡ ಸರಣಿ ಕೊಲೆಗಳ ಸುತ್ತ ತನಿಖೆ ನಡೆಯುವ ಕಥಾಹಂದರದ ಚಿತ್ರವಾಗಿದ್ದು, ಅಸಾಹಯಕ ಹೆಣ್ಣುಬ್ಬಳ ಬದುಕಿನಲ್ಲಿ ನಡೆಯುವ ವೈದ್ಯಕೀಯ ದುರುಳರಿಂದ ಆಗುವ ವಂಚನೆಯಿಂದ ನಡೆಯುವ ನಿಗೂಡ ಕೊಲೆಗಳನ್ನು ಬೇದಿಸುವುದೇ ಪೋಲಿಸ್ ಹಾಗೂ ಫೋರೆನ್ಸಿಕ್ ತಂಡಕ್ಕೆ ದೊಡ್ಡ ತಲೆನೋವಾಗಿರುತ್ತದೆ

ಲವ್ ಮಾಕ್ಟೇಲ್ ಹಾಗೂ ಲವ್ 360 ಖ್ಯಾತಿಯ ರಚನಾ ಇಂದರ್ ಅವರು ಇದೇ ಮೊದಲ ಬಾರಿಗೆ ಫಾರೆನ್ಸಿಕ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರ ತುಂಬಾ ತೂಕದ್ದು ಹಾಗೂ ಚಿತ್ರದಲ್ಲಿ ತುಂಬಾ ಪ್ರಮುಖವಾಗಿದೆ. ರಚನಾ ಇಂದರ್ ಇಂತಹ ಪಾತ್ರಗಳಿಗೆ ಇನ್ನೂ ಪಳಗಬೇಕಿದೆ.ಚಾಕ್ಲೇಟ್ ಗರ್ಲ್ ಆಗಿ ಕಾಣುವ ರಚನಾ ಮೊದಲ ಬಾರಿಗೆ ಈ ರೀತಿಯ ಪಾತ್ರಕ್ಕೆ ಬಣ್ಣ ಹಚ್ಚಿ ಪಾತ್ರಕ್ಕೆ ಜೀವ ತುಂಬಲು ಪ್ರಯತ್ನಿಸಿದರೆ.
ಇನ್ನು ಪೋಲಿಸ್ ಸಬ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಅಭಿನಯಿಸಿರುವ ಭವಾನಿ ಶಂಕರ್ ಚಿತ್ರದಲ್ಲಿ ಕೊಲೆಗಳ ನಿಗೂಡತೆಯನ್ನು ಬಯಲಿಗೆಳೆಯುವುದಕ್ಕಿಂತ ಲೆಕ್ಕಕ್ಕೆ ಸಿಗದಷ್ಟು ಸಿಗರೇಟ್ ಗಳನ್ನು ಸುಟ್ಟುಹಾಕಿದ್ದಾರೆ. ಒಮ್ಮೊಮ್ಮೆ ಸಿಗರೇಟ್ ಹೊಗೆಯಲ್ಲಿ ಮುಳುಗಿ ಹೋಗಿದ್ದಾರೆ ಎನ್ನಬಹುದು. ಭವಾನಿ ಶಂಕರ್ ಈಗಾಗಲೇ ಹಲವು ಚಿತ್ರಗಳಲ್ಲಿ ಖಡಕ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಈ ರೀತಿಯ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸುತ್ತಾರೆ. ಇಲ್ಲೂ ಕೂಡ ನಿರ್ದೇಶಕರು ಹೇಳಿದಂತೆ ಪಾತ್ರ ನಿರ್ವಹಿಸಿದ್ದಾರೆ. ಈ ಪಾತ್ರಕ್ಕೆ ನಿರ್ದೇಶಕರು ಹೊಗೆಯ ಮದ್ಯೆ ಸಬ್ ಇನ್ಸ್ಪೆಕ್ಟರ್ ಹೆಗಲ ಮೇಲೆ ಎಷ್ಟು ಸ್ಟಾರ್ ಗಳು ಇಡಬೇಕು ಎನ್ನುವುದನ್ನು ಮರೆತಂತಿದೆ.

ದರ್ಶನ್ ಶ್ರೀನಿವಾಸ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಇಂದಿನ ವಾಸ್ತವತೆ ಹತ್ತಿರವಾದ ಕಥೆಯಾಗಿದ್ದು, ಸಮಾಜದಲ್ಲಿ ಅಮಾಯಕರ ಮೇಲೆ ನಡೆಯುವ ದೌರ್ಜನ್ಯ ಹಾಗೂ ಅಬಲೆಯರ ಮೇಲೆ ನಡೆಯುವ ಅತ್ಯಾಚಾರಗಳ ವಿರುದ್ಧ ಮತ್ತೊಬ್ಬ ಹೆಣ್ಣು ಮಗಳು ಹೇಗೆ ಬುದ್ದಿ ಕಲಿಸುತ್ತಾಳೆ ಎನ್ನುವ ಕಥೆಯನ್ನು ಎಣೆದಿದ್ದಾರೆ.
ನವೀನ್ ಕುಮಾರ್ ಮಹದೇವ ಒಬ್ಬ ತನಿಖಾ ಛಾಯಗ್ರಾಹಕನಾಗಿ ಅಭಿನಯಿಸಿದ್ದಾರೆ. ಆ ಪಾತ್ರಕ್ಕೆ ಇರಬೇಕಾದ ಗಂಭೀರತೆಗಿಂತ ಇವರಿಂದ ಕಾಮಿಡಿ ಮಾಡಿಸುವ ಪ್ರಯತ್ನ ಮಾಡಿದ್ದಾರೆ
ಆದ್ಯಾ ಶೇಕರ್ ಪಾತ್ರ ವಯಸ್ಸಿಗೆ ಮೀರಿದ್ದು, ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇವರು ಪ್ರೇಕ್ಷಕರ ಮನ ಮುಟ್ಟುವಂತ ಸನ್ನಿವೇಶಗಳಲ್ಲಿ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಒಬ್ಬ ತಾಯಿ ಒಂಟಿಯಾಗಿ ಸಮಾಜದಲ್ಲಿ ಮಕ್ಕಳನ್ನು ಸಾಕಿಕೊಂಡು ಅವರನ್ನು ಹೇಗೆ ದಡ ಮುಟ್ಟಿಸಬೇಕು, ಅದರಲ್ಲೂ ಕಾಮುಕರಿಂದ ಹೇಗೆ ಕಷ್ಟಗಳಿಗೆ ಸಿಲುಕುತ್ತಾಳೆ, ಜೊತೆಗೆ ಹಣ, ಹೆಣ್ಣಿನ ಆಸೆಗೆ ಹೇಗೆ ಬಲಿಯಾಗುತ್ತಾಳೆ ಎನ್ನುವ ದೃಶ್ಯಗಳು ಧ್ವಿತಿಯಾರ್ಧ ದಲ್ಲಿ ಪ್ರೇಕ್ಷಕರ ಮನ ಮುಟ್ಟುವಂತೆ ನಿರ್ದೇಶಕರು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ರಚನಾ ಇಂದರ್, ಭವಾನಿ ಪ್ರಕಾಶ್, ನವೀನ್ ಕುಮಾರ್ ಮಹಾದೇವ್ ಅಗೂ ಆದ್ಯಶೇಖರ್ ಈ 4 ಪ್ರಮುಖ ಪಾತ್ರಗಳ ಸುತ್ತ ಚಿತ್ರಕಥೆ ನಡೆಯುತ್ತದೆ.
ಇನ್ನು ಈ ಚಿತ್ರಕ್ಕೆ ನಿರ್ದೇಶಕರೇ ಎಡಿಟರ್ ಆಗಿದ್ದು ಮುತ್ತುರಾಜ್ ಸಾಥ್ ನೀಡಿದ್ದಾರೆ.
ಚರಣ್ ತೇಜ್ ಅವರ ಛಾಯಾಗ್ರಹಣ, ಸತ್ಯಕಹಿ ಅವರ ಸಂಭಾಷಣೆ ಹಾಗೂ ಸಾಯಿ ಸೋಮೇಶ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕೆ ಪೂರಕವಾಗಿದೆ.
ಅರ್ಜುನ್, ಆಶಿತಾ ಅಲ್ವಾ, ಮುಕ್ತಿ ಅಲ್ವಾ, ಆರ್ ನಿಕ್ಸಾನ್, ಪ್ರಶಾಂತ್, ಸಂಜಯ್ ನಾಯಕ್, ಸೌರವ್, ಸತ್ಯ ಕಹಿ, ಬೇಬಿ ವಂಶಿಕಾ, ಬೇಬಿ ರೇಯನ್ಸ್ ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸೈಕಲಾಜಿಕಲ್, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆಯ 4N6 ಚಿತ್ರ ಚಿತ್ರ ಮಂದಿರಗಳಲ್ಲಿ ಪ್ರೇಕ್ಷಕರು ನೋಡಿ ಚಿತ್ರ ತಂಡದ ಯಶಸ್ಸಿಗೆ ಸಾಥ್ ನೀಡಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಹಣ ಹಾಕಿದ ನಿರ್ಮಾಪಕರನ್ನು ಗೆಲ್ಲಿಸಿ ಮುಂದೆ ಒಳ್ಳೆಯ ಚಿತ್ರಗಳು ಈ ಸಂಸ್ಥೆಯಿಂದ ಬರಲಿ ಎಂಬುದು ನಮ್ಮ ಆಶಯ.