16th Bangalore International film festival updates. 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಲನಚಿತ್ರಗಳ ಆಹ್ವಾನ.

16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡ, ಭಾರತೀಯ ಮತ್ತು ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗಗಳಿಗೆ ಚಲನಚಿತ್ರಗಳ ಆಹ್ವಾನ.

​ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಕರ್ನಾಟಕ ಸರ್ಕಾರದ ಮಹತ್ವದ ಸಾಂಸ್ಕೃತಿಕ ಹಬ್ಬ. ಕರ್ನಾಟಕ ಸರ್ಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಗಳ ಮೂಲಕ 2025ರ ಮಾರ್ಚ್ 1 ರಿಂದ 8ರ ವರೆಗೆ ಹಮ್ಮಿಕೊಂಡಿರುವ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ “ಸರ್ವಜನಾಂಗದ ಶಾಂತಿಯ ತೋಟ” ಎಂಬ ಘೋಷ ವಾಕ್ಯದಡಿ ಚಲನಚಿತ್ರೋತ್ಸವ ಜರುಗಲಿದೆ.

​ಎಂದಿನಂತೆ ಈ ಬಾರಿಯೂ “ಕನ್ನಡ ಸಿನಿಮಾ” ಸ್ಪರ್ಧೆ, ಭಾರತೀಯ ಚಿತ್ರಗಳನ್ನು ಪ್ರತಿನಿಧಿಸುವ “ಚಿತ್ರಭಾರತಿ” ಮತ್ತು “ಏಷಿಯನ್ ಸಿನಿಮಾ” ಸ್ಪರ್ಧಾ ವಿಭಾಗಗಳಿಗೆ ಆಯ್ಕೆಗಾಗಿ ಅರ್ಹ ಚಲನಚಿತ್ರಗಳನ್ನು ಆಹ್ವಾನಿಸಲಾಗಿದೆ.

​“ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ”ದಲ್ಲಿಆಯ್ಕೆಗಾಗಿ ಸಲ್ಲಿಸಬೇಕಾದ ಕಥಾ ಚಿತ್ರಗಳು ಕನಿಷ್ಠ 70 ನಿಮಿಷದ ಅವಧಿಯಾಗಿದ್ದು, ಜನವರಿ 1, 2024 ರಿಂದ ಡಿಸೆಂಬರ್ 31, 2024 ರ ಒಳಗೆ (ಎರಡೂ ದಿನಗಳನ್ನು ಒಳಗೊಂಡಂತೆ) ನಿರ್ಮಾಣಗೊಂಡಿರಬೇಕು. ಕನ್ನಡ ಮತ್ತು ಕರ್ನಾಟಕ ರಾಜ್ಯದ ಯಾವುದೇ ಉಪಭಾಷೆಯಲ್ಲಿ ತಯಾರಾಗಿರುವ ಕಥಾ ಚಿತ್ರಗಳು, ಸ್ಪರ್ಧಾ ವಿಭಾಗದ ಆಯ್ಕೆಗೆ ಪ್ರವೇಶ ಪಡೆಯಲು ಅರ್ಹವಾಗುತ್ತವೆ.

​“ಚಿತ್ರಭಾರತಿ”- ಭಾರತೀಯ ಚಲನಚಿತ್ರಗಳ ಸ್ಪರ್ಧಾ ವಿಭಾಗದಲ್ಲಿಆಯ್ಕೆಗಾಗಿ ಸಲ್ಲಿಸಲಿರುವ ಚಿತ್ರಗಳು ಜನವರಿ 1, 2024 ರಿಂದ ಡಿಸೆಂಬರ್ 31, 2024ರ ಒಳಗೆ (ಎರಡೂ ದಿನಗಳನ್ನು ಒಳಗೊಂಡಂತೆ) ನಿರ್ಮಾಣಗೊಂಡಿರಬೇಕು ಹಾಗೂ ಭಾರತದ ಯಾವುದೇ ಭಾಷೆಯ ಕಥಾ ಚಿತ್ರವಾಗಿದ್ದು, ಕನಿಷ್ಠ 70 ನಿಮಿಷಗಳ ಅವಧಿಯ ಚಿತ್ರಗಳು ಸ್ಪರ್ಧಾ ವಿಭಾಗದ ಆಯ್ಕೆಗೆ ಪ್ರವೇಶ ಪಡೆಯಲು ಅರ್ಹವಾಗುತ್ತದೆ.

​“ಏಷಿಯಾ ಸಿನಿಮಾ ಸ್ಪರ್ಧಾ ವಿಭಾಗ”ಕ್ಕೆ, ಏಷಿಯಾದ ಯಾವುದೇ ದೇಶದಲ್ಲಿ, ಜನವರಿ 1, 2024 ರಿಂದ ಡಿಸೆಂಬರ್ 31, 2024ರ ಒಳಗೆ (ಎರಡೂ ದಿನಗಳನ್ನು ಒಳಗೊಂಡಂತೆ) ತಯಾರಾದ, ಕನಿಷ್ಠ 70 ನಿಮಿಷಗಳ ಅವಧಿಯ ಚಲನಚಿತ್ರಗಳು ಸ್ಪರ್ಧಾತ್ಮಕ ವಿಭಾಗದ ಆಯ್ಕೆಗೆ ಪ್ರವೇಶ ಪಡೆಯಲು ಅರ್ಹವಾಗುತ್ತವೆ.

​“ಕನ್ನಡ ಚಲನಚಿತ್ರ”, “ಚಿತ್ರಭಾರತಿ – ಭಾರತೀಯ ಚಲನಚಿತ್ರ” ಮತ್ತು “ಏಷಿಯನ್‌ ಚಲನಚಿತ್ರ” ವಿಭಾಗಕ್ಕೆ ಪ್ರವೇಶ ಬಯಸುವ ಭಾರತೀಯ ಭಾಷಾ ಚಲನಚಿತ್ರಗಳಿಗೆ, ಕೇಂದ್ರೀಯ ಚಲನಚಿತ್ರ ಪ್ರಮಾಣೀಕೃತ ಮಂಡಳಿ ನೀಡುವ ಪ್ರಮಾಣ ಪತ್ರದಲ್ಲಿ ನಮೂದಾಗುವ ದಿನಾಂಕವೇ ನಿರ್ಮಾಣದ ಮಾನದಂಡವಾಗುತ್ತದೆ.

​16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗಗಳಲ್ಲಿ ಆಯ್ಕೆಗಾಗಿ ಚಲನಚಿತ್ರಗಳನ್ನು ಸಲ್ಲಿಸುವ ಪ್ರಕ್ರಿಯೆ ದಿನಾಂಕ: 09.01.2025 ರಿಂದ ಪ್ರಾರಂಭವಾಗಿದ್ದು, ಸ್ಪರ್ಧಾತ್ಮಕ ವಿಭಾಗಗಳಿಗೆ ಚಲನಚಿತ್ರಗಳ ಅರ್ಜಿ ಸಲ್ಲಿಸಲು www.biffes.org ಜಾಲತಾಣಕ್ಕೆ ಭೇಟಿ ನೀಡಿ. ಅರ್ಜಿಯೊಂದಿಗೆ ಸಿನಿಮಾಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನೂ ನೀಡಬೇಕು. “ಕನ್ನಡ ಸಿನಿಮಾ” ಮತ್ತು “ಚಿತ್ರಭಾರತಿ – ಭಾರತೀಯ ಸಿನಿಮಾ” ಸ್ಪರ್ಧಾ ವಿಭಾಗಕ್ಕೆ ಅರ್ಜಿ ಸಲ್ಲಿಸಲು ಪ್ರತಿ ಚಿತ್ರಕ್ಕೂ ರೂ. 3,000/- ಪ್ರವೇಶ ಶುಲ್ಕವಿರುತ್ತದೆ. ಇಂಗ್ಲಿಷ್ ಉಪಶೀರ್ಷಿಕೆಗಳನ್ನೊಳಗೊಂಡ ಚಲನಚಿತ್ರದ ಆನ್‌ಲೈನ್ ಸ್ಕ್ರೀನರ್‌ನೊಂದಿಗೆ, ಆನ್‌ಲೈನ್‌ನಲ್ಲಿ ಪ್ರವೇಶ ಶುಲ್ಕವನ್ನು ಪಾವತಿಸಿ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23.01.2025.

​ಹೆಚ್ಚಿನ ಮಾಹಿತಿಗೆ: +91 8904645529 ಅಥವಾ biffesblr@gmail.com & www.biffes.org ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor