12th Faile ಕನ್ನಡಕ್ಕೆ ವಿಧು ವಿನೋದ್‍ ಚೋಪ್ರಾ ನಿರ್ದೇಶನದ ’12th ಫೇಲ್‍’ ಚಿತ್ರ

ಕನ್ನಡಕ್ಕೆ ವಿಧು ವಿನೋದ್‍ ಚೋಪ್ರಾ ನಿರ್ದೇಶನದ ’12th ಫೇಲ್‍’ ಚಿತ್ರ
ಕೆ ಆರ್ ಜಿ ಸ್ಟುಡಿಯೋಸ್‍ನಿಂದ ಕರ್ನಾಟಕದಲ್ಲಿ ವಿತರಣೆ; ಅ.27ಕ್ಕೆ ಬಿಡುಗಡೆ

ಕರ್ನಾಟಕದ ಜನತೆಗೆ ಗುಣಮಟ್ಟದ ಚಿತ್ರಗಳನ್ನು ತಲುಪಿಸುವ ನಿಟ್ಟಿನಲ್ಲಿ ಕನ್ನಡದ ಜನಪ್ರಿಯ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಕೆ ಆರ್ ಜಿ ಸ್ಟುಡಿಯೋಸ್‍ ಯಾವತ್ತೂ ಮುಂಚೂಣಿಯಲ್ಲಿದ್ದು, ಈ ಸಂಬಂಧ ಹೊಸ ಹೆಜ್ಜೆ ಇಟ್ಟಿದೆ. ‘ಪರಿಂದಾ’, ‘1942 ಎ ಲವ್‍ ಸ್ಟೋರಿ’ ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ ‘ಮುನ್ನಾಭಾಯ್‍’ ಸರಣಿಯ ನಿರ್ಮಾಪಕರಾದ ಬಾಲಿವುಡ್‍ನ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ವಿಧು ವಿನೋದ್‍ ಚೋಪ್ರಾ ಅವರೊಂದಿಗೆ ಇದೀಗ ಕಾರ್ತಿಕ್‍ ಗೌಡ ಮತ್ತು ಯೋಗಿ ಜಿ ರಾಜ್‍ ಒಡೆತನದ ಕೆ ಆರ್ ಜಿ ಸ್ಟುಡಿಯೋಸ್‍ ಕೈಜೋಡಿಸಿದೆ. ವಿಧು ವಿನೋದ್‍ ಚೋಪ್ರಾ ಅವರ ’12th ಫೇಲ್‍’ ಚಿತ್ರವನ್ನು ಕನ್ನಡ ಮತ್ತು ಹಿಂದಿಯಲ್ಲಿ ಅ. 27ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ.


’12th ಫೇಲ್‍’ ಚಿತ್ರವು ಅನುರಾಗ್‍ ಪಾಠಕ್‍ ಅವರ ಅದೇ ಹೆಸರಿನ ಜನಪ್ರಿಯ ಕಾದಂಬರಿಯನ್ನು ಆಧರಿಸಿದೆ. ಹಲವು ಅಡೆತಡೆಗಳನ್ನು ದಾಟಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್‍ ಆಗಿ, ಅಸಾಧ್ಯವನ್ನು ಸಾಧ್ಯವನ್ನಾಗಿಸಿದ ಐಪಿಎಸ್ ಅ‍ಧಿಕಾರಿ ಮನೋಜ್‍ ಕುಮಾರ್ ಶರ್ಮಾ ಅವರ ಜೀವನವನ್ನಾಧರಿಸಿದ ಈ ಚಿತ್ರದಲ್ಲಿ ‘ಎ ಡೆಥ್‍ ಇನ್‍ ದಿ ಗುಂಜ್‍’, ‘ಚಪಾಕ್‍’, ‘ಹಸೀನ್‍ ದಿಲ್ರುಬಾ’ ಮುಂತಾದ ಚಿತ್ರಗಳ ಖ್ಯಾತಿಯ ವಿಕ್ರಾಂತ್ ಮಾಸ್ಸೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor