“ಸ್ಕ್ಯಾಮ್ 1770” ಚಿತ್ರ ವಿಮರ್ಶೆ ದಡ್ಡ ಪ್ರವೀಣ ಇಲ್ಲಿ ಅತೀ ಬುದ್ಧಿವಂತ ಅಕ್ಷರಗಳನ್ನು ಮಾರಟಕ್ಕಿಟ್ಟವರ ಅಟ್ಟಹಾಸ
ಚಿತ್ರ ವಿಮರ್ಶೆ
ಚಿತ್ರ ÷ ಸ್ಕ್ಯಾಮ್ 1770
ನಿರ್ಮಾಣ ಸಂಸ್ಥೆ – ಡಿ ಕ್ರಿಯೇಷನ್
ನಿರ್ಮಾಪಕರು – ಆರ್. ದೇವರಾಜ್
ನಿರ್ದೇಶನ – ವಿಕಾಸ್ ಪುಷ್ಪಗಿರಿ
ಛಾಯಾಗ್ರಹಣ –
ಸಂಗೀತ ಸಂಯೋಜನೆ –
ಕಲಾವಿದರು – ಬಿ.ಸುರೇಶ್, ಹರಿಣಿ, ರಾಘು ಶಿವಮೊಗ್ಗ, ನಾರಾಯಣಸ್ವಾಮಿ, ರಂಜನ್, ನಟನಾ ಪ್ರಶಾಂತ್ ಮುಂತಾದವರು
ದುಡ್ಡೇ ದೊಡ್ಡಪ್ಪ ವಿದ್ಯೆ ಅವರಪ್ಪ ಅಂತಿದ್ರು ಒಂದು ಕಾಲದಲ್ಲಿ ಆದ್ರೆ ಈಗ ವಿದ್ಯೆಯನ್ನು ಕೊಂಡುಕೊಳ್ಳುವ ಹಂತದಲ್ಲಿ ಸಮಾಜ ಬದಲಾಗಿದೆ. ಕೊಳೆತು ನಾರುತ್ತಿರುವ ವ್ಯವಸ್ಥೆಯಲ್ಲಿ ಸಿಲುಕಿರುವ ಶ್ರೀ ಸಾಮಾನ್ಯನ ಗೋಳು ಕೇಳೋಕೆ ಯಾವಪ್ಪನು ಬರಲ್ಲ ಅನ್ನೋದು ಸತ್ಯ.
ಎಲ್ರಿಗೂ ಮಕ್ಕಳನ್ನ ಪ್ರತಿಷ್ಠಿತ ಸ್ಕೂಲು- ಕಾಲೇಜುಗಳಲ್ಲಿ ಓದಿಸಬೇಕು ಎನ್ನುವ ಆಸೆ ಅದಕ್ಕಾಗಿ ಸಾಲ ಮಾಡಿಯಾದರು ತುಪ್ಪ ತಿನ್ನೋ ಆಸೆಗೆ ಬಿದ್ದು ಪಡಬಾರದ ಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ.

ಅಕ್ಷರಗಳನ್ನ ಮಾರಟಕ್ಕಿಟ್ಟ ರಾಜಕರಣಿಗಳು ಮಕ್ಕಳ ಭವಿಷ್ಯದಲ್ಲಿ ಆಟ ಆಡುತ್ತಿದ್ದಾರೆ ಅದರಲ್ಲೂ ಮೆಡಿಕಲ್ ಸೀಟುಗಳ ದಂದೆಯಲ್ಲಿ ಶ್ರೀ ಸಾಮಾನ್ಯರನ್ನ ಹೇಗೆ ಸುಲಿಯುತ್ತಿದ್ದಾರೆ ಅನ್ನೋದೆ ಸ್ಯಾಮ್ 1770 ಚಿತ್ರದ ಮೂಲ ಕಥೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ದಡ್ದ ಪ್ರವೀಣ ಈ ಚಿತ್ರದಲ್ಲಿ ಅಗತ್ಯಕ್ಕಿಂತ ಹೆಚ್ಚೇ ಬುದ್ದಿವಂತನಾಗಿದ್ದಾನೆ. ಇವನ ಜಾಣತನಕ್ಕೆ ನಿರ್ದೇಶಕರೇ ದಡ್ಡರಾಗಿದ್ದಾರೆ ಎನ್ನಬಹುದು.

ಅಂದುಕೊಂಡ ಕಾಲೇಜಿನಲ್ಲಿ ಹಣಕಾಸಿನಲ್ಲಿ ಹಿಂದುಳಿದ ಕೋಟಾದಲ್ಲಿ ಸೀಟು ಪಡೆದು ವೈದ್ಯ ನಾಗಬೇಕೆನ್ನುವ ಕನಸ್ಸಿಗೆ ಬೆಂಕಿ ಬಿದ್ದು ತನ್ನ ಸೀಟು ಬೇರೆಯ ಶ್ರೀಮಂತ ಪಡೆದಾಗ ಅವನಿಗಾಗುವ ಕಿಚ್ಚು ಅವನಂತೆಯೇ ಮೋಸಕ್ಕೊಳಗಾದವರಿಗೆ ನ್ಯಾಯ ಕೊಡಿಸುವ ಹಂತದಲ್ಲಿ ತುಸು ಹೆಚ್ಚೇ ಬುದ್ದಿವಂತನಾಗಿದ್ದಾನೆ ಎನ್ನಬಹುದು.
ಬಶೀರ್ ಎನ್ನುವ ಆಸಾಮಿ ಮೆಡಿಕಲ್ ಸೀಟುಗಳನ್ನು ಥಿಯೇಟರ್ ಮುಂದೆ ಬ್ಲಾಕ್ ಟಿಕೇಟ್ ಮಾರುವ ರೀತಿಯಲ್ಲಿ ಮಾರಿಕೊಂಡು ರಾಜಾರೋಷವಾಗಿ ಅಡ್ಡಾಡಿಕೊಂಡಿದ್ದರು ಅವನನ್ನು ಮುಟ್ಟೋಕೆ ಆಗದ ವ್ಯವಸ್ಥೆ, ಲಕ್ಷಗಟ್ಟಲೆ ಹಣಕೊಟ್ಟು ಮುಂಡಾಯಿಸಿಕೊಂಡವರು ಏನು ಮಾಡಲಾಗದ ಸ್ಥಿತಿ, ಟಿವಿ ಮಾಧ್ಯಮದ ವರದಿಗಾರನ ಮನೆಯವರೇ ಲಕ್ಷಾಂತರ ರೂಪಾಯಿ ಮೋಸ ಹೋದರು ಎಲ್ಲೂ ಸುದ್ದಿಯಾಗದೇ ಇರುವುದು ನಿರ್ದೇಶಕರು ಹೋಂವರ್ಕ್ ಸರಿಯಾಗಿ ಮಾಡಿಕೊಂಡಿಲ್ಲವೇ ಎನ್ನಿಸುತ್ತದೆ.

ಇಲ್ಲಿ ಜಾಣ ರಂಜನ್ “ಟಿ” ಆಗಿ ಅಂದ್ರೆ ತಿಮ್ಮೇಗೌಡನಾಗಿ ಎಲ್ಲವನ್ನು ಏಕಾಂಗಿಯಾಗಿ ಹೋರಾಡಿ ಕೊನೆಗೆ ನೀರಿನಲ್ಲಿ ಹೋಮ ಮಾಡಿದಂತ ಸ್ಥಿತಿ ತಲುಪುತ್ತಾನೆ.
ಚಿತ್ರದ ಕಥೆಯ ತಿರುಳು ಚನ್ನಾಗಿದೆ ಮೆಡಿಕಲ್ ಮಾಫಿಯಾವನ್ನು ಬಯಲಿಗೆಳೆಯುವ ಪ್ರಯತ್ನ ನಿರ್ದೇಶಕರು ಮಾಡಿದ್ದಾರೆ.
ಈ ಚಿತ್ರದಿಂದ ಜನ ಎಚ್ಚೆತ್ತುಕೊಂಡರೆ ಈ ಚಿತ್ರ ನಿರ್ಮಿಸಿದ ಸಾರ್ಥಕಥೆ ನಿರ್ಮಾಪಕ ದೇವರಾಜು ಅವರದ್ದು.
ಈಗಾಗಲೇ ನಾಲ್ಕು ಚಿತ್ರಗಳನ್ನು ನಿರ್ಮಿಸಿ ಜನಪರ ಕಾಳಜಿಯಿಂದ ಸಮಾಜಕ್ಕೆ ಒಳಿತಾಗುವಂತ ಹಾಗೂ ಸಮಾಜದಲ್ಲಿರುವ ಕೆಟ್ಟ ಹುಳುಗಳ ಮುಖವಾಡ ಬಯಲಿಗೆಳಯುವಂತ ಚಿತ್ರಗಳನ್ನು ಮಾಡಿದ್ದಾರೆ ದೇವರಾಜ್ ರವರು.
ಇಂತಹ ಒಬ್ಬ ಒಳ್ಳೆಯ ನಿರ್ಮಾಪಕರನ್ನು ಚಿತ್ರರಂಗ ಉಳಿಸಿಕೊಳ್ಳಬೇಕಾಗಿದೆ

ಅದಕ್ಕಾಗಿ ಜನ ಇಂತಹ ಸದಭಿರುಚಿಯ ಚಿತ್ರಗಳನ್ನು ನೋಡಿ ಕೈ ಹಿಡಿಯಬೇಕಿದೆ.
ಸ್ಕ್ತಾಮ್ 1770 ಚಿತ್ರ ನಮ್ಮ ನಿಮ್ಮ ನಡುವೆ ನಡೆಯುತ್ತಿರುವ ಸತ್ಯ ಘಟನೆ ಆಧಾರಿತ ಚಿತ್ರ, ಮುಖ್ಯವಾಗಿ ಎಲ್ಲಾ ತಂದೆ ತಾಯಂದಿರು ಮಕ್ಕಳ ಜೊತೆ ನೋಡುವಂತ ಚಿತ್ರ.