#ParimalavDisoza movie Review ಪರಿಮಳ “ಡಿಸೋಜ ಚಿತ್ರ ವಿಮರ್ಶೆ ” ಸಸ್ಪೆನ್ಸ್ ಮತ್ತು ಥ್ರಿಲ್ಲರ್ ನ ಕಥೆಯಲ್ಲಿ ಡಿಸೋಜಳ ಪರಿಮಳ
ಚಿತ್ರ – ಪರಿಮಳ ಡಿಸೋಜ
ನಿರ್ಮಾಣ : ವಿನೋದ್ ಶೇಷಾದ್ರಿ, ನಿರ್ದೇಶನ : ಗಿರಿಧರ್ ಎಚ್.ಟಿ
Rating – 3/5
ಇಡೀ ಸಿನಿಮಾ ಒಂದು ಕೊಲೆಯ ಸುತ್ತ ಕೇಂದ್ರೀಕೃತವಾಗಿದೆ.
ಅದೊಂದು ತುಂಬಾ ಖುಷಿ, ಸಂತೋಷ ಮತ್ತು ಲವ ಲವಿಕೆಯಿಂದ
ಕೂಡಿದ ಅತ್ಯಂತ ಶ್ರೀಮಂತ .
ಆ ಕುಟುಂಬದ ಮುಖ್ಯವಾದ ಪ್ರೀತಿಯ ವ್ಯಕ್ತಿ ಎಂದರೆ ಆ ಮನೆಯ ಸೊಸೆ ಪರಿಮಳ ಡಿಸೋಜ.
ಈಕೆ ಚಿತ್ರದ ಪ್ರಾರಂಭದಲ್ಲೇ ಕೊಲೆಯಾಗುತ್ತಾಳೆ.
ಈ ಕೊಲೆಯ ಸುತ್ತಾ ತಿರುಗುವ ಕಥೆಯೇ ಪರಿಮಳ ಡಿಸೋಜ
.

ಈ ಚಿತ್ರದದಲ್ಲಿ ನಿರ್ದೇಶಕ ಜೋಗಿ ಪ್ರೇಮ್ ತಾಯಿಯ ಬಗ್ಗೆ ಒಂದು ಮನ ಮುಟ್ಟುವಂತ ಹಾಡು ಹಾಡಿದ್ದಾರೆ.
ಪರಿಮಳ ಡಿಸೋಜ ಪಾತ್ರದಲ್ಲಿ ಪೂಜಾ ರಾಮಚಂದ್ರ ಅಭಿನಯಿಸಿದ್ದಾರೆ.
ಆ ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ.
ವಿನೋದ್ ಶೇಷಾದ್ರಿ, ಕೊಮಲ ಬನವಾಸಿ ಹಾಗೂ ಇನ್ನಿತರ ಕಲಾವಿದರು ಪ್ರೇಕ್ಷಕರ ಗಮನ ಸೆಳೆಯುತ್ತದೆ.
ಈ ಚಿತ್ರ ಕೊಲೆಯ ತನಿಖೆಯ ಸುತ್ತಾ ತಿರುಗುತ್ತಾ ಒಂದಷ್ಟು ಅನುಮಾನದ ಹುತ್ತಗಳನ್ನು ಕೆಡವುತ್ತಾ ಹೊಗುತ್ತಿದ್ದಂತೆ ಮತ್ತಷ್ಟು ನಿಗೂಡತೆಯ ಮುಖಗಳು ಹೊರ ಬರುತ್ತವೆ.
ತನಿಖೆಯ ವೇಳೆ
ಪಾಳು ಬಂಗಲೆಯ ಪ್ರದೇಶದಲ್ಲಿ ಎರಡು ಹೆಣ ಒಂದು ಡೈರಿ ಸಿಗುತ್ತದೆ.
ಅಲ್ಲಿಂದ ಡೈರಿಯ ಮೂಲಕ ಮತ್ತೊಂದು ಕಥೆ ಆರಂಭ ವಾಗುತ್ತದೆ.
ಅಮ್ಮನ ಹುಡುಕಾಟದಲ್ಲೊಬ್ಬ ಅಸ್ವಸ್ಥ ಮನಸ್ಸಿನ ಹುಡುಗ ಹಾಗೂ ವಿಕೃತ ಪ್ರೇಮಿಯೊಬ್ಬನ ಹುಚ್ಚಾಟ ಇವೆಲ್ಲವೂ ಚಿತ್ರದ ಹೈಲೈಟ್ ಗಳು.
ಕೊನೆಗೆ ಕೊಲೆಗಳು ಮಾಡಿದ್ದು ಯಾರು, ಯಾಕೆ ಎನ್ನುವ ಕುತೂಹಲ ಭರಿತ ಸಸ್ಪೆನ್ಸ್ ಚಿತ್ರದ ಬಗ್ಗೆ ತಿಳಿಯಲು ಪ್ರೇಕ್ಷಕರು ಚಿತ್ರ ನೋಡಲೇ ಬೇಕು.

ಚಿತ್ರದ ಛಾಯಾಗ್ರಹಣ ಮತ್ತು ಸಂಗೀತ ಚಿತ್ರದ ಗೆಲುವುನ ಭಾಗವಾಗಿದೆ.
ಚಿತ್ರದಲ್ಲಿ ಅಲ್ಲಲ್ಲಿ ಬರುವ ಒಂದಷ್ಟು ಸಣ್ಣ ಪುಟ್ಟ ತಪ್ಪುಗಳನ್ನು ಬಿಟ್ಟರೆ ಚಿತ್ರವನ್ನು ಆರಾಮಾಗಿ ಯಾವುದೇ ಮುಜುಗರ ವಿಲ್ಲದೇ ಚಿತ್ರ ನೋಡಬಹುದು.
“ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡ ಕಾಂತಾರ”

ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡ ಕಾಂತಾರ”
ಸೈಮಾ” ದಲ್ಲೂ “ಕಾಂತಾರ” ದ ಕಲರವ. ಕಳೆದ ವರ್ಷ ಬಿಡುಗಡೆಗೊಂಡ ಕಾಂತಾರ ಸಿನಿಮಾದ ಅಲೆ ಇನ್ನೂ ಕಡಿಮೆಯಾಗಿಲ್ಲ. ದುಬೈನಲ್ಲಿ ನಡೆದ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕಾಂತಾರ ಸಿನಿಮಾ ೧೦ ಅವಾರ್ಡ್ ಗಳನ್ನು ಬಾಚಿಕೊಂಡಿದೆ.

ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಿಸಿ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಸಿನಿಮಾ “ಕಾಂತಾರ”, ಕಳೆದ ವರ್ಷ ಬಿಡುಗಡೆಯಾಗಿ ದೇಶದೆಲ್ಲೆಡೆ ಉತ್ತಮ ಪ್ರಶಂಸೆಗಳಿಸಿತ್ತು.

ಪ್ರಸ್ತುತ ಸೈಮಾ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ನಟನೆಗೆ, ನಿರ್ದೇಶನಕ್ಕೆ ಹಾಗು ಪಾಥ್ ಬ್ರೇಕಿಂಗ್ ಸ್ಟೋರಿಗೆ ಸ್ಪೆಷಲ್ ಅಪ್ರಿಸಿಯೇಷನ್ ಅವಾರ್ಡ್ ಸೇರಿ ಒಟ್ಟು ೩ ಅವಾರ್ಡ್ ಗಳು ರಿಷಬ್ ಶೆಟ್ಟಿಯವರಿಗೆ ದೊರಕಿದೆ.
