ಸಾವಣ್ಣ ಪ್ರಕಾಶನದ ನಾಲ್ಕು ಪುಸ್ತಕ ಬಿಡುಗಡೆ ಮಾಡಿದರು ರಾಜ್ ಬಿ ಶೆಟ್ಟಿ ಹಾಗೂ ಧನಂಜಯ
ಸಿನಿಮಾ ಜಗತ್ತಿನಲ್ಲಿ ಎಲ್ಲವೂ ಇದೆ. ಬರಹಗಾರರ ಕೊರತೆ ಇದೆ. ಕಥಾ ಲೋಕ ಮತ್ತು ಸಿನಿಮಾ ಲೋಕ ಹತ್ತಿರ ಬಂದಾಗ ಸಿನಿಮಾ ಕ್ಷೇತ್ರ ಶ್ರೀಮಂತ ಆಗುತ್ತದೆ ಎಂದು ನಟ ನಿರ್ದೇಶಕ ರಾಜ್ ಬಿ ಶೆಟ್ಟಿ ಹೇಳಿದರು.
ನಟರಿಗೂ ಒಂದು ಖಾಸಗಿ ಬದುಕು ಇರುತ್ತದೆ. ಅಲ್ಲಿ ನಾವೂ ಎಲ್ಲರ ಹಾಗೆ ಇರುತ್ತೇವೆ. ನಮ್ಮ ಒಳಗಿನ ಹುಡುಕಾಟ, ತೊಳಲಾಟ, ಸಂಘರ್ಷ ನಡೆಯುತ್ತಲೇ ಇರುತ್ತವೆ. ಒಂದು ಪ್ರೇಮಾಂಕುರ ಆಗಲಿ ಅಂತ ಕಾಯುತ್ತಿರುತ್ತವೆ. ನನ್ನ ಕೆಲಸಗಳ ನಡುವೆ ಓದು ಬಿಟ್ಟುಹೋಗಿತ್ತು. ಈಗ ಮತ್ತೆ ಓದಲು ಶುರು ಮಾಡಿದ್ದೇನೆ ಎಂದು ನಟ ನಿರ್ಮಾಪಕ ಡಾಲಿ ಧನಂಜಯ ಹೇಳಿದರು.
ಸಾವಣ್ಣ ಪ್ರಕಾಶನದ ನಾಲ್ಕು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜ್ ಬಿ ಶೆಟ್ಟಿ ಹಾಗೂ ಧನಂಜಯ ಮುಖ್ಯ ಅತಿಥಿಗಳಾಗಿದ್ದರು.
ಜೋಗಿ ಅವರ ಚಿಯರ್ಸ್, ಅಶ್ವತ್ಥಾಮನ್, ಕಥೆಕೂಟ ಸದಸ್ಯರ ಒಲವು ತುಂಬುವುದಿಲ್ಲ ಹಾಗೂ ಜಗದೀಶ ಶರ್ಮ ಸಂಪ ಅವರ ದಶಕಂಠ ರಾವಣ ಕೃತಿಗಳು ಅನಾವರಣಗೊಂಡವು. ಜೋಗಿ, ಗೋಪಾಲಕೃಷ್ಣ ಕುಂಟಿನಿ, ಜಮೀಲ್ ವೇದಿಕೆಯಲ್ಲಿದ್ದರು.