Koragajja movie new updates. “ಮಹಾಕುಂಭಮೇಳದಲ್ಲಿ ಕೊರಗಜ್ಜ ಚಿತ್ರತಂಡದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ”

ಕೊರಗಜ್ಜ ಚಿತ್ರತಂಡ‌ಪ್ರಾರಂಭದಲ್ಲಿಂದ ಏನಾದರೂ ಒಂದು ವಿಷಯವನ್ನು ಹೊರ ಹಾಕುತ್ತಿದೆ. ಈಗ ಚಿತ್ರ ಬಿಡುಗಡೆಗೆ ಮುನ್ನ ಮಹಾಕುಂಭ ಮೇಳದಲ್ಲಿ “ಕೊರಗಜ್ಜ” ಚಿತ್ರ ನಿರ್ದೇಶಕ- ನಿರ್ಮಾಪಕ. ಪುಣ್ಯ ಸ್ನಾನ ಮಾಡುವ ಮೂಲಕ ಸುದ್ದಿಯಾಗಿದೆ.

ಪ್ರಯಾಗ್ ರಾಜ್ ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳದಲ್ಲಿ ಬಹುಕೋಟಿ ಬಜೆಟ್ ನ “ಕೊರಗಜ್ಜ” ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್,ನಿರ್ಮಾಪಕ ತ್ರಿವಿಕ್ರಮ್ ಸಪಲ್ಯ ಹಾಗೂ ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ತ್ರಿವೇಣಿ ಸಂಗಮದಲ್ಲಿ ಮುಳುಗಿ ಎದ್ದು, ಗಂಗ-ಯಮುನ-ಸರಸ್ವತಿ ನದಿಗಳ ತ್ರಿವೇಣಿಸಂಗಮದಲ್ಲಿ ಚಿತ್ರದ ಯಶಸ್ಸಿಗಾಗಿ ಕುಂಭ ಪ್ರದೇಶದ ‘ಸರಸ್ವತ್ ಘಾಟ್’ ನಲ್ಲಿ ಕೋಟ್ಯಾಂತರ ಜನರ ಸಮಕ್ಷಮದಲ್ಲಿ ಪವಿತ್ರ ಸ್ನಾನ ಮಾಡಿ ಪ್ರಾರ್ಥಿಸಿದರು.

“ಕೊರಗಜ್ಜ” ಚಿತ್ರ ತಂಡ ಬಂದಿರುವ ವಿಷಯ ತಿಳಿದ ಪ್ರಯಾಗ್ ರಾಜ್ ನ ಕೆಲ ಪತ್ರಕರ್ತರು ಆಸಕ್ತಿಯಿಂದ ಕೆಲ ಹೊತ್ತು ಕಾದು ತಂಡದೊಂದಿಗೆ ಮಾತುಕತೆ ನಡೆಸಿದರು.ಕೋಟ್ಯಾಂತರ ಜನ ಸಮೂಹದ ನಡುವೆಯೂ,ಹಾಗೂ ಹೀಗೂ ತಂಡದೊಂದಿಗೆ ಸಂಪರ್ಕ ಸಾಧಿಸಿ,ಚಿತ್ರದ ಬಗ್ಗೆ ಮಾಹಿತಿ ಪಡೆದು ಕೊಂಡರು.ಕೆಲ ಚಾನೆಲ್ ಗಳು “ಕೊರಗಜ್ಜ” ಚಿತ್ರದ ಬಗ್ಗೆ ವಿಷೇಷ ಕಾರ್ಯಕ್ರಮವನ್ನೂ ಬಿತ್ತರಿಸಿದರು.ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ‘ಕಾಂತಾರ’, ‘RRR’, ‘ಪುಷ್ಪ’… ಇತ್ಯಾದಿ ಚಿತ್ರಗಳು ದೇಶಾದ್ಯಂತ ಧೂಳೆಬ್ಬಿಸಿರುವುದೇ, ಜೋರಾಗಿ ಸದ್ದು ಮಾಡುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ “ಕೊರಗಜ್ಜ” ಸಿನಿಮಾದ ಬಗ್ಗೆ ಉತ್ತರಭಾರತೀಯರ ಕುತೂಹಲಕ್ಕೆ ಕಾರಣ.

“ಕೊರಗಜ್ಜ” ಸಿನಿಮಾದ ನ್ಯೂಸ್ ಉತ್ತರಪ್ರದೇಶದ ಪ್ರಯಾಗ್ ರಾಜ್ ವರೆಗೂ ತಲುಪಿರುವುದು ಸಹಜವಾಗಿಯೇ ಚಿತ್ರತಂಡಕ್ಕೆ ಸಂತಸ ತಂದಿದೆ.

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಉದಾಹರಣೆಗೆ ಕಾಂತಾರ, RRR, ಪುಷ್ಪ ಮೊದಲಾದ ಪಾನ್ ಇಂಡಿಯಾ ಚಿತ್ರಗಳಂತೆ “ಕೊರಗಜ್ಹ”ಕೂಡಾ ಅದೇ ರೀತಿಯಲ್ಲಿ ಸದ್ದು ಮಾಡುತ್ತಿರುವ ಬಗ್ಗೆ ಪತ್ರಕರ್ತರು ಬಳಿ ಪ್ರಶ್ನೆ ಕೇಳಿದಾಗ ನಿರ್ದೇಶಕ ಸುಧೀರ್ ಅತ್ತಾವರ್, ಪ್ಯಾನ್ ಇಂಡಿಯಾ ಸಿನಿಮಾ ಇವತ್ತು ನಿನ್ನೆಯ ಕಾನ್ಸೆಪ್ಟ್ ಅಲ್ಲ. ಮದ್ರಾಸಿನ ಪ್ರಸಾದ್ ಸ್ಟುಡಿಯೋ ಬಹಳ ಹಿಂದೆಯೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಯಶಸ್ಸು ಕಂಡಿದ್ದರು. ಕಮಲ್ ಹಾಸನ್, ರಜನೀಕಾಂತ್ ಕೂಡಾ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದರು.ಆದರೆ ಇತ್ತೀಚೆಗೆ ತಾಂತ್ರಿಕವಾಗಿ ದಕ್ಷಿಣಭಾರತದ ಸಿನಿಮಾಗಳು ಶ್ರೀಮಂತವಾಗಿ ಮೂಡಿಬರುತ್ತಿದೆ- ಎಂದರು.

“ಕೊರಗಜ್ಜ” ಚಿತ್ರತಂಡವನ್ನು ಕಂಡು ಪುಳಕಿತ ಗೊಂಡ ಪ್ರಯಾಗ್ ರಾಜ್ ಕುಂಭಮೇಳದಲ್ಲಿನ ಪತ್ರಕರ್ತರು ,ದೇಶ- ವಿದೇಶಗಳಲ್ಲಿ ಹೆಸರು ಮಾಡುತ್ತಿರುವ
ದಕ್ಷಿಣ ಭಾರತದ ಸಿನಿಮಾಗಳಂತೆಯೇ ಪ್ಯಾನ್ ಇಂಡಿಯಾ ಸಿನಿಮಾ “ಕೊರಗಜ್ಜ” ಕೂಡಾ ಯಶಸ್ವಿಯಾಗಲಿ ಎಂದು ಹಾರೈಸಿದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor