ಪುನೀತ್, ರಮ್ಯಾ..ರಿಷಬ್..ರಕ್ಷಿತ್ ಸಾಥ್ ಕೊಟ್ಟ ಹಾಸ್ಟೆಲ್ ಹುಡುಗರಿಗೆ ‘ದೂದ್ ಪೇಡಾ’ ಸಿಹಿ*

*ಪುನೀತ್, ರಮ್ಯಾ..ರಿಷಬ್..ರಕ್ಷಿತ್ ಸಾಥ್ ಕೊಟ್ಟ ಹಾಸ್ಟೆಲ್ ಹುಡುಗರಿಗೆ ‘ದೂದ್ ಪೇಡಾ’ ಸಿಹಿ*

ಸಿನಿಮಾ ಮಾಡುವುದೇ ಒಂದು ಸಾಹಸ. ಸಿನಿಮಾ ಮಾಡಿ ಜನರಿಗೆ ತಲುಪಿಸುವುದು ಇನ್ನೂ ದೊಡ್ಡ ಸಾಹಸ. ಅದಕ್ಕೆ ಸರಿಯಾದ ರೀತಿಯ ಪ್ರಚಾರದ ಅವಶ್ಯಕತೆ ಬಹುಮುಖ್ಯ. ವಿಶೇಷ ರೀತಿಯ ಚಿತ್ರಕ್ಕೆ ವಿಶಿಷ್ಟ ಪ್ರಕಾರದ ಪ್ರಚಾರ‌ ಬೇಕು. ವಿಶಿಷ್ಟ ರೀತಿಯಲ್ಲಿ ಪ್ರಚಾರ ನಡೆಸುತ್ತಿರುವುದು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾತಂಡ. ಆರಂಭದ ದಿನದಿಂದಲೂ ನಾನಾ ಬಗೆಯಲ್ಲಿ ಚಿತ್ರಪ್ರೇಮಿಗಳನ್ನು ಸೆಳೆಯುತ್ತಿರುವ ಈ ಚಿತ್ರಕ್ಕೀಗ ಮತ್ತೊಬ್ಬ ಸ್ಟಾರ್ ಸಾಥ್ ಕೊಟ್ಟಿದ್ದಾರೆ. ಹಾಸ್ಟೆಲ್ ಹುಡುಗರಿಗೆ ದೂದ್ ಪೇಡಾ ಸಿಹಿ ಸಿಕ್ಕಿದೆ. ಅಂದರೆ ದೂದ್ ಪೇಡಾ ದಿಗಂತ್ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪುನೀತ್ ರಾಜಕುಮಾರ್, ರಮ್ಯಾ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಶೈನಿ ಶೆಟ್ಟಿ, ಪವನ್ ಕುಮಾರ್ ಬೆಂಬಲ ಕೊಟ್ಟಿರುವ ಈ ಚಿತ್ರದಲ್ಲಿ ದಿಗ್ಗಿ ಬಣ್ಣ ಹಚ್ಚಿದ್ದಾರೆ. ಆದರೆ ಅವರ ಪಾತ್ರವೇನೆಂಬುದನ್ನು ಚಿತ್ರತಂಡ ಸಸ್ಪೆನ್ಸ್ ಆಗಿ ಇಟ್ಟಿದೆ. ಜುಲೈ 7ಕ್ಕೆ ದಿಗಂತ್ ಲುಕ್ ರಿವೀಲ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದ್ದಾರೆ.

ಯೂತ್ ಸಬ್ಜೆಕ್ಟ್ ಕಥೆಯನ್ನೊಳಗೊಂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶಿಸಿದ್ದಾರೆ. ಬಹುತೇಕ ರಂಗಭೂಮಿ ಪ್ರತಿಭೆಗಳು ನಟಿಸಿರುವ ಈ ಚಿತ್ರವನ್ನು ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲ್ಮಂಸ್ ಬ್ಯಾನರ್ ನಡಿ ಪ್ರಜ್ವಲ್ ಬಿ.ಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ ಕಶ್ಯಪ್ ಬಂಡವಾಳ ಹೂಡಿದ್ದಾರೆ.ಪ್ರತಿ ಬಾರಿ ಯುನಿಕ್ ಕಾನ್ಸಎಪ್ಟ್ ಮೂಲಕ ಪ್ರಚಾರ ಮಾಡುತ್ತಿರುವ ಹಾಸ್ಟೆಲ್ ಹುಡುಗರನು ಸಿನಿಮಾವನ್ನು ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಅರವಿಂದ್ ಛಾಯಾಗ್ರಹಣ, ಸುರೇಶ್ ಸಂಕಲನವಿರುವ ಸಿನಿಮಾ ಜುಲೈನಲ್ಲಿ ತೆರೆಗೆ ಬರಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor