ನ್ಯೂ ಗ್ಲೋಬಲ್ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಿಸಿರುವ ಹಾರರ್ ಹಿನ್ನೆಲೆಯ ಚಿತ್ರ ಛಾಯ ಈವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಛಾಯಾ ಈವಾರ ಬಿಡುಗಡೆ

ನ್ಯೂ ಗ್ಲೋಬಲ್ ಕ್ರಿಯೇಶನ್ಸ್ ಅಡಿಯಲ್ಲಿ ಶ್ರೀಮತಿ ನಂದ ಎಂ.ಆರ್. ಅವರು ನಿರ್ಮಿಸಿರುವ ಹಾರರ್ ಹಿನ್ನೆಲೆಯ ಚಿತ್ರ ಛಾಯ ಈವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಾಲ್ಕು ಜನ ಯುವಕರು ಒಂದು ಮನೆಗೆ ಅತಿಥಿಗಳಾಗಿ ಹೋದಾಗ ಅಲ್ಲಿ ಅನೇಕ ಚಿತ್ರವಿಚಿತ್ರ ಘಟನೆಗಳು ನಡೆಯುತ್ತವೆ. ಆ ಎಲ್ಲಾ ಅನಾಹುತಗಳಿಗೆ ಕಾರಣವೇನು ಎನ್ನುವುದೇ ಛಾಯ ಚಿತ್ರದ ಪ್ರಮುಖ ಕಥಾಹಂದರ. ನೃತ್ಯನಿರ್ದೇಶಕ ಜಗ್ಗು ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ಈ ಚಿತ್ರದ ೫ ಹಾಡುಗಳಿಗೆ ಮಂಜು ಕವಿ ಅವರ ಸಾಹಿತ್ಯ ಮತ್ತು ಸಂಗೀತ ಸಂಯೋಜನೆಯಿದೆ. ಮತ್ತಲ್ಲಿ ಕುಣಿಯೋಣ ಎಂಬ ಹಾಡು ಉತ್ತರ ಕರ್ನಾಟಕದಾದ್ಯಂತ ಜನಪ್ರಿಯವಾಗಿದೆ.

ವೀನಸ್ ನಾಗರಾಜ ಮೂರ್ತಿ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ದುರ್ಗಾ ಪಿ.ಎಸ್.ಅವರ ಸಂಕಲನ, ಜಾನಿ ಮಾಸ್ಟರ್, ಸುಪ್ರೀಂ ಸುಬ್ಬು ಅವರ ಸಾಹಸ, ನರಸಿಂಹಮೂರ್ತಿ, ಶ್ರೀಧರ್ ಅವರ ಸಹಕಾರ ನಿರ್ದೇಶನವಿದೆ. ಆನಂದ್, ತೇಜುರಾಜ್,


ಅನನ್ಯ, ರಾಜಶೇಖರ್, ನಯನಕೃಷ್ಣ, ಹೇಮಂತ್,ರಾಜ್ ಪ್ರಭು, ರಾಜ್ ಉದಯ್, ಕಿಲ್ಲರ್ ವೆಂಕಟೇಶ್, ದರ್ಶನ್, ನಂದನ್, ರೋಹಿಣಿ ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor