Actor Dhananjay Doctor Dhanyata marriage updates. ನಟ ಧನಂಜಯನಿಗೆ ಮೂಡಿದ ಧನ್ಯತಾಭಾವ, ಜನುಮದ ಗೆಳತಿಯೊಂದಿಗೆ ಪಾಣಿಗ್ರಹಣಕ್ಕೆ ಸಜ್ಜು
ಧನಂಜಯ್ ಬಹು ಕಾಲದ ಗೆಳತಿ ಧನ್ಯತಾರೊಂದಿಗೆ ಮದುವೆ ಆಗುವ ವಿಷಯವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ಫೋಟೋ ಹರಿ ಬಿಡುವ ಮೂಲಕ ಜಗಜಾಹೀರೂ ಮಾಡಿದ್ದಾರೆ.

ವೃತ್ತಿಯಲ್ಲಿ ವೈದ್ಯೆಯಾಗಿರುವ ಧನ್ಯತಾ ಧನಂಜಯರೊಂದಿಗೆ ಓದಿದ್ದು ಮೈಸೂರಿನಲ್ಲಿ. ಈ ಹಳೆಯ ಸ್ನೇಹ ಪ್ರೀತಿಯಾಗಿ ಈಗ ದಂಪತಿಗಳಾಗಲು ನಿರ್ಧರಿಸಿದ್ದಾರೆ.
ಚಿತ್ರದುರ್ಗದವರಾದ ಧನ್ಯತಾ ರವರು ಮೈಸೂರಿನಲ್ಲಿ ವಿಧ್ಯಾಭ್ಯಾಸ ಮಾಡಿದ್ದಾರೆ ಅಲ್ಲಿ ಪರಿಚಯವಾದ ಧನಂಜಯರೊಂದಿಗೆ ಪ್ರೇಮಾಂಕುರವಾಗಿ ಈಗ ತಮ್ಮಿಬ್ಬರ ಪ್ರೀತಿಗೆ ಒಂದು ಅರ್ಥಪೂರ್ಣ ಸಂಭಂದವನ್ನು ಮೂಡಿಸಲು ಸತಿ ಪತಿಗಳಾಗಲು ನಿರ್ಧರಿಸಿದ್ದಾರೆ.

ಧನಂಜಯ್ ಹಾಗೂ ಧನ್ಯತಾ ಇಬ್ಬರಿಗೂ ಪ್ರೇಮಾಂಕುರವಾದ ಪ್ರೇಮತಾಣ ಮೈಸೂರು. ಮೈಸೂರಿನಲ್ಲೇ ಫೆಬ್ರವರಿ16 ರಂದು ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ನವ ಜೋಡಿಗೆ ಅಕ್ಷತೆ ಹಾಕಿ ಶುಭಕೋರಲು ಕನ್ನಡ ಚಿತ್ರರಂಗ ಸಜ್ಜಾಗುತ್ತಿದೆ.
ಧನಂಜಯ ಮತ್ತು ಧನ್ಯತಾರವರಿಗೆ ಶುಭವಾಗಲಿ ಎಂದು ಹಾರೈಸೋಣ.