ಚೆಫ್ ಚಿದಂಬರನ ಪಾತ್ರೆಯಲ್ಲಿ ಒಂದಷ್ಟು ಹಾಸ್ಯ, ಒಂದಷ್ಟು ಲಾಸ್ಯ.
ಚಿತ್ರ ವಿಮರ್ಶೆ
ಚಿತ್ರ – ಚೆಫ್ ಚಿದಂಬರ
ನಿರ್ಮಾಣ ಸಂಸ್ಥೆ –
ನಿರ್ಮಾಪಕರು – ರೂಪ ಡಿ.ಎನ್.
ನಿರ್ದೇಶಕರು – ಎಂ. ಆನಂದಗ ರಾಜ್
ಸಂಗೀತ – ಮುರುಳೀಧರ್
ಕಲಾವಿದರು – ಅನಿರುದ್ ಜತ್ಕರ್, ನಿಧಿ ಸುಬ್ಬಯ್ಯ, ರಾಚೆಲ್ ಡೇವಿಡ್ ಮುಂತಾದವರು.
ಛಾಯಾಗ್ರಹಣ – ಉದಯಲೀಲಾ
ರೇಟಿಂಗ್-3/5
ಅನಿರುದ್ಧ ಜಟ್ಕರ್ ಸಿನಿ ಪ್ರಯಾಣದಲ್ಲಿ ಇದೊಂದು ವಿಭಿನ್ನ ಪಾತ್ರ ಈ ಹಿಂದೆ ಹಲವಾರು ಚಿತ್ರಗಳಲ್ಲಿ ಆಕ್ಷನ್ ಚಿತ್ರಗಳಲ್ಲಿ ಅಭಿನಯಿಸಿದ್ದರು ಕೂಡ ಈ ಚಿದಂಬರನ ಚಿತ್ರ ವಿಭಿನ್ನವಾಗಿದೆ.
ಅನಿರುದ್ ಈ ಚಿತ್ರದಲ್ಲಿ ಕಾಮಿಡಿ ಜೊತೆಗೆ ಒಂದು ಬ್ಲಾಕ್ ಕಾಮಿಡಿ ಪಾತ್ರದಲ್ಲಿ ವಿಭಿನ್ನವಾಗಿ ಅಭಿನಯಿಸಿದ್ದಾರೆ ಇದು ಆಕ್ಷನ್ ಕಾಮಿಡಿ ಥ್ರಿಲ್ಲರ್ ಎಲ್ಲವನ್ನು ಒಳಗೊಂಡಿರುವ ಬಿರಿಯಾನಿ ಎಕ್ಸ್ಪರ್ಟ್ ಜೊತೆಗೆ ಒಳ್ಳೆಯ ಅಭಿನಯದ ಎಕ್ಸ್ಪರ್ಟ್ ಕೂಡ ಆಗಿದ್ದಾರೆ.

ಜೊತೆ ಜೊತೆಯಲಿ ಸೀರಿಯಲ್ ನಂತರ ಅವರ ಅಭಿಮಾನಿಗಳ ಮುಂದೆ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ನಿಜಕ್ಕೂ ಈ ಪಾತ್ರ ಅವರನ್ನ ಮತ್ತಷ್ಟು ಒಂದು ಒಳ್ಳೆಯ ಸ್ಥಾನಕ್ಕೆ ಕರೆದುಕೊಂಡು ಹೋಗೋದರಲ್ಲಿ ಸಫಲವಾಗಿದೆ.
ಈ ಚಿದಂಬರನ ಸ್ಪೆಷಲ್ ಬಿರಿಯಾನಿಗೆ ಯಾವ ಪ್ರಾಣಿಯ ಮಾಂಸವನ್ನು ಬಳಸುತ್ತಾನೆ ಅನ್ನೋದೇ ಒಂದು ವಿಚಿತ್ರವಾದ ಒಂದು ಕಲ್ಪನೆ ಮತ್ತು ಜನಕ್ಕೆ ಅದರ ಕುತೂಹಲ ಇದ್ದೇ ಇರುತ್ತದೆ.
ಈ ಕುತೂಹಲಕ್ಕೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕಾಗುತ್ತೆ.

ನಿಜಕ್ಕೂ ಇದೊಂದು ಒಳ್ಳೆಯ ಪ್ರಯತ್ನ ಒಂದು ಒಳ್ಳೆಯ ಸಿನಿಮಾವನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಆನಂದ್ ರಾಜ್ ಚಿತ್ರಕ್ಕೆ ಮತ್ತು ಚಿತ್ರಕಥೆಗೆ ಹೆಚಗಚು ಗಮನ ಹರಿಸಿದ್ದರೆ ಇನ್ನೂ ಚಿತ್ರ ತುಂಬಾ ಚನ್ನಾಗಿ ಬರುವುದರಲ್ಲಿ ಎರಡು ಮಾತಿರಲಿಲ್ಲ. ಚಿತ್ರದಲ್ಲಿ ಸಂಗೀತ ಮುಖ್ಯ ಪಾತ್ರ ವಹಿಸಿದೆ ಎನ್ನಬಹುದು.
ಸಂಗೀತದ ಜೊತೆಗೆ ಆಕ್ಷನ್ ಮತ್ತು ಕ್ಯಾಮರಾ ಮೂರು ಕೂಡ ಬಹಳ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಅನಿರುದ್ ಈ ಹಿಂದೆ ಸಿನಿಮಾಗಳಲ್ಲಿ ಏನು ಅಭಿನಯ ಮಾಡಿದ್ರು ಅದೆಲ್ಲವನ್ನು ಮೀರಿಸಿದ ಅವರ ಈ ಪಾತ್ರ ಜನಕ್ಕೆ ತುಂಬಾ ಹತ್ತಿರವಾಗುತ್ತೆ ತುಂಬಾ ಇಷ್ಟ ಆಗುವಂತ ಪಾತ್ರ ಅಂತ ಹೇಳಬಹುದು.

ಚೆಫ್ ಚಿದಂಬರ ಥ್ರಿಲ್ಲರ್ ಕಾಮಿಡಿ ಚಿತ್ರವಾಗಿದ್ದು, ಇದನ್ನು ಎಂ ಆನಂದರಾಜ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅನಿರುದ್ಧ ಜಟ್ಕರ್, ನಿಧಿ ಸುಬ್ಬಯ್ಯ ಮತ್ತು ರಾಚೆಲ್ ಡೇವಿಡ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ರಿಥ್ವಿಕ್ ಮುರುಳೀಧರ್ ಸಂಗೀತ ಸಂಯೋಜಿಸಿದ್ದು, ಉದಯಲೀಲಾ ಅವರ ಛಾಯಾಗ್ರಹಣವಿದೆ. ಈ ಚಿತ್ರವನ್ನು ರೂಪ ಡಿಎನ್ ನಿರ್ಮಿಸಿದ್ದಾರೆ.