ಗೋ ಪ್ರೇಮಿಯಿಂದ ಮಾಗಡಿ ಜಾತ್ರೆಯಲ್ಲಿ ಗೋವುಗಳಿಗೆ ಮತ್ತು ರೈತರಿಗೆ 12 ವರ್ಷಗಳಿಂದ ನಿರಂತರ ಜಲಧಾರೆ.
ಮಾಗಡಿಯ ಕುಲದೇವರು ಶ್ರೀ ರಂಗನಾಥಸ್ವಾಮಿ. ಇಲ್ಲಿ ರಂಗನಾಥಸ್ವಾಮಿಯ ಜಾತ್ರೆ ಪ್ರತಿವರ್ಷ ಯುಗಾದಿ ಹಬ್ಬದಂದೇ ಆರಂಭಗೊಳ್ಳುತ್ತದೆ. ಈ ಜಾತ್ರೆಯ ಬಹು ಆಕರ್ಷಣೆ ಎಂದರೆ ಇಲ್ಲಿ ನಡೆಯುವ ಗೋವಿನ ಜಾತ್ರೆ ಅಥವಾ ದನಗಳ ಜಾತ್ರೆ.

ಇಂತಹ ಐತಿಹಾಸಿಕ ಉತ್ಸವದಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ವಿಜಯನಗರ ಮಾರುತಿ ಮೆಡಿಕಲ್ಸ್‌ನ ಗೋಸೇವಕ ಮಹೇಂದ್ರ ಮುಣೋತ್ ಪಾಲ್ಗೊಂಡು ಗೋಜಾತ್ರೆಗೆ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಈ ಗೊಜಾತ್ರೆಯಲ್ಲಿ ಪಾಲ್ಗೊಳ್ಳುವ ಸಾವಿರಾರು ಗೋವುಗಳಿಗೆ
ನೀರನ್ನು ಸರಬರಾಜು ಮಾಡುವುದು ಇವರ ಮೊದಲ ಕಾಯಕ. ಹಾಗೆಯೇ ಈ ಬಾರಿಯ ಜಾತ್ರೆಯಲ್ಲಿ ಭಾಗವಹಿಸಿದ ಮಹೇಂದ್ರ ಮುಣೋತ್ ಅನ್ನದಾತ ರೈತ ಮತ್ತು ಗೋವುಗಳೊಂದಿಗೆ ದಿನಪೂರ್ತಿ ಕಳೆದು ರೈತರಲ್ಲಿ ಭರವಸೆ ಉತ್ಸವ ಮೂಡಿಸಿದರು.

ಜಾತ್ರೆಯಲ್ಲಿ ಮಾತನಾಡಿದ ಮುಣೋತ್ “ಎಂತಹದೇ ಕಷ್ಟಕರ ಪರಿಸ್ಥಿತಿ ಬಂದರೂ ರೈತಬಾಂಧವರು ತಮ್ಮ ಗೋವುಗಳನ್ನು ಕಟುಕರಿಗೆ ಮಾರ ಬೇಡಿ. ಅಂಥ ಬೇಡವಾದ ಗೋವುಗಳಿಗೆ ಆಶ್ರಯ ನೀಡಲು ಅನೇಕ ಗೋಶಾಲೆಗಳು ನಮ್ಮಲ್ಲಿದೆ. ರೈತ ತನಗೆ ಭಗವಂತ ನೀಡಿದ ಅಸಾಧಾರಣ ಬುದ್ದಿಶಕ್ತಿ ಮತ್ತು ಯುಕ್ತಿಯಿಂದ ಯಾವ ತಂತ್ರಜ್ಞಾನದಿಂದಲೂ ಉತ್ಪತ್ತಿಸಲಾಗದ ಚಿನ್ನಕ್ಕಿಂತಲೂ ಮಿಗಿಲಾದ ಅನ್ನವನ್ನು ಜಗತ್ತಿಗೆ ನೀಡುತ್ತಿದ್ದಾನೆ.

ಹಾಗೆಯೇ ಆತನಿಗಿರುವ ವಿವೇಕ ಜಾಣ್ಮೆಯಿಂದಲೇ ನಾಳೆ ನಡೆಯಲಿರುವ 2024 ರ ಲೋಕಸಭಾ ಚುನಾವಣೆಯಲ್ಲಿ ದೇಶದ ಹಿತಾಸಕ್ತಿಯ ಉದ್ದೇಶದಿಂದ ದೇಶಾಭಿಮಾನಿಗೆ ಯೋಗ್ಯ ಅಭ್ಯರ್ಥಿಗೆ ಮತಚಾಲಾಯಿಸುವಂತ್ತಾಗಲಿ. ಈ ವರ್ಷದ ಬೇಸಿಗೆ ಅಸಾಧ್ಯವಾಗಿದ್ದರೂ ನಾವೆಲ್ಲರೂ ವಿಶ್ವಾಸದಿಂದ ಬರಲಿರುವ ಹೊಸ ಮಳೆಗಾಗಿ ದೇಶದ ಹೊಸ ಯುಗಾರಂಭಕ್ಕೆ ಈ ಯುಗಾದಿ ಧಿಕ್ಸೂಚಿಯಾಗಲಿ” ಎಂದು ಕರೆನೀಡಿದರು. ಮಹೇಂದ್ರ ಅವರ ಈ ನೀರಿನ ಸೇವೆ ಜಾತ್ರೆಯ ಐದು ದಿನಗಳವರೆಗೂ ನಡೆಯಲಿದೆ.
