ಖುಷಿ ಮತ್ತು ರಿಷಿ ನಡುವೆ ಭಯಾನಕ ಪ್ರೇಮಕಥೆ
ಅದೊಂದು ನೂರಾರು ವರ್ಷಗಳ ಇತಿಹಾಸದ ಪುಟಗಳಲ್ಲಿ ಸೇರಿ ಹೋದ ಕಾಲೇಜ್ ಬ್ರಿಟಿಷರ ಕಾಲದಲ್ಲಿ ಎರಡನೇ ವರ್ಲ್ಡ್ ವಾರ್ ಸಮಯದಲ್ಲಿ ಯುದ್ದದಲ್ಲಿ ಸತ್ತ ಸೈನಿಕರ ಮಕ್ಕಳಿಗಾಗಿ ನಿರ್ಮಾಣವಾದ ಕಾಲೇಜ್ ಇಲ್ಲಿ ಓದುವ ವಿದ್ಯಾರ್ಥಿಗಳು ಅಲ್ಲಿನ ಕಾನೂನು ಕಟ್ಟಳೆಯನ್ನು ಮೀರುವಂತಿಲ್ಲ ಅಂದಿನ ಕಾಲದಿಂದಲೂ ಈ ಕಾಲೇಜಿನಲ್ಲಿ ಪ್ರೀತಿ ಮಾಡುವಂತಿಲ್ಲ ಐ ಲವ್ ಯೂ ಅಂತ ಹೇಳಿದೊರೆಲ್ಲಾ ಸಾಯುತ್ತಾರೆ ಹೇಗೆ ಸಾಯುತ್ತಾರೆ ಏಕೆ ಸಾಯುತ್ತಾರೆ, ಯಾರು ಸಾಯಿಸುತ್ತಾರೆ ಅಂತ ಅನ್ನೋದನ್ನ ನೋಡಬೇಕೆಂದರೆ ಚಿತ್ರ ನೋಡಬೇಕು.

ಇದೊಂದು ಹಾರರ್ , ಸಸ್ಪೆನ್ಸ್ ಲವ್ ಸ್ಟೋರಿ. ಇಡೀ ಸಿನಿಮಾ ಬಹುತೇಕ ಕಾಲೇಜಿನಲ್ಲಿ ನಡೆಯುತ್ತಾದರೂ ಸಿನಿಮಾವನ್ನು ಬಹಳ ಅದ್ದೂರಿಯಾಗಿ ಚಿತ್ರೀಕರಿಸಿದ್ದಾರೆ. ನಿರ್ದೇಶಕ ಭರತ್ ಹಾಸ್ಯ ಮಯವಾಗಿ ನಗಿಸುತ್ತಲೇ ಹೆದರಿಸಿದ್ದಾರೆ. ದಿಯಾ ಖ್ಯಾತಿಯ ನಟಿ ಖುಷಿ ಬಹಳ ಚನ್ನಾಗಿ ಅಭಿನಯಿಸಿ ಪ್ರೇಕ್ಷಕರ ಮನ ಸೆಳೆದಿದ್ದಾರೆ. ಹಾಗೆ ನಟ ವಿವೇಕ್ ಸಿಂಹ ಕಾಂಬಿನೇಷನ್ ನಲ್ಲಿ ಸಿನಿಮಾ ಚನ್ನಾಗಿ ಮೂಡಿ ಬಂದಿದೆ.
ಈಗಾಗಲೇ ರಂಗಿತ ರಂಗ, ಅವನೇ ಶ್ರೀಮನ್ನಾರಾಯಣ, ಕಥಾ ಸಂಗಮ ದಂತ ಸಧಬಿರುಚಿಯ ಚಿತ್ರಗಳನ್ನು ನೀಡಿದ ನಿರ್ಮಾಪಕ ಹೆಚ್. ಕೆ. ಪ್ರಕಾಶ್ ನಿರ್ಮಾಣದಲ್ಲಿ ಚಿತ್ರ ಅದ್ದೂರಿಯಾಗಿ ಮೂಡಿ ಬಂದಿದೆ.
ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಎನ್ನ ಬಹುದು.
ಮೆಲ್ಲುಸಿರೇ ಸವಿಗಾನ ಗೀತೆಗೆ ಮರು ಸಂಗೀತ ನೀಡಿ ಇಂದಿನ ಯುವ ಜನತೆಗೆ ಹಳೆಯ ಗೀತೆಯನ್ನು ಉಣ ಬಡಿಸಿದ್ದಾರೆ.
ಒಟ್ಟಿನಲ್ಲಿ ಚಿತ್ರ ಬಹಳ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಪಕ್ಕಾ ಪೈಸಾ ವಸೂಲ್ ಚಿತ್ರ ಎನ್ನ ಬಹುದು.