“ಕೋಮಲ್ ಗೆ ದೆವ್ವಗಳ ಕಾಟ” ಭಯ ನಗುವಿನ ನಡುವೆ ನಮೋ ಭೂತಾತ್ಮ
“ಕೋಮಲ್ ಗೆ ದೆವ್ವಗಳ ಕಾಟ” ಭಯ ನಗುವಿನ ನಡುವೆ ನಮೋ ಭೂತಾತ್ಮ
ಚಿತ್ರ: ನಮೋ ಭೂತಾತ್ಮ- 2
ನಿರ್ದೇಶನ : ವಿ.ಮರುಳಿ
ತಾರಾಗಣ: ಕೋಮಲ್, ಲೇಖಾ ಚಂದ್ರ, ಗೋವಿಂದೇ ಗೌಡ, ರಾಘು ರಮಣಕೊಪ್ಪ ಮತ್ತಿತರರು
ರೇಟಿಂಗ್: – 3.5/5
ಕಾಮಿಡಿ ಚಿತ್ರವೆಂದರೆ ಕೋಮಲ್ ಗೆ ನೀರು ಕುಡಿದಂತೆ ಹಾಸ್ಯ ನಟನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಕೋಮಲ್ ತನ್ನದೇ ಆದ ಅಭಿಮಾನಿಗಳನ್ನು ಹಿಂದಿರುವುದು ಹಳೇಯ ವಿಷಯ. ಅದೇ ಅಭಿಮಾನಿಗಳನ್ನು ನಗಿಸುತ್ತಲೇ ಹೀರೋ ಆಗಿ ತೆರೆಯ ಮೇಲೆ ರಾರಜಿಸಿ ತನ್ನ ಅಭಿಮಾನದ ಸಾಮ್ರಾಜ್ಯವನ್ನು ಮತ್ತಷ್ಟು ಬಲ ಪಡಿಸಿಕೊಂಡರು.
ಈ ವಾರ ತೆರೆ ಕಂಡ ನಮೋ ಭೂತಾತ್ಮ 2 ಚಿತ್ರ ನಗಿಸುತ್ತಲೇ ಆಗಾಗ ಬೆಚ್ಚಿ ಬೀಳಿಸುತ್ತದೆ. ಹಾಸ್ಯ ಮತ್ತು ಹಾರರ್ ವಿಷಯಗಳನ್ನು ದೆವ್ವ ಭೂತಗಳ ಜೊತೆಗೆ ಕಥೆ ಎಣೆದಿರುವುದು ನಿರ್ದೇಶಕರಿಗೆ ಸವಾಲಿನ ಕೆಲಸ.
ನೃತ್ಯ ನಿರ್ದೇಶಕ ವಿ.ಮರುಳಿ ಎರಡನೇ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ ಒಂದಷ್ಡು ಕಾಮಿಡಿ, ಹಾರರ್ ಮತ್ತು ಭಯದ ಅಂಶಗಳ ಜೊತೆಗೆ ಇತ್ತೀಚೆಗೆ ಟಿವಿ ಮಾಧ್ಯಮಗಳಲ್ಲಿ ಜನರನ್ನು ಭಕ್ರ ಮಾಡುವ ಕಥೆಯ ಅಂಶವನ್ನು ಅದರಿಂದಾಗುವ ಅವಗಡವನ್ನು ಅದರಿಂದಾಗುವ ಅನಾಹುತವನ್ನು ಬಹಳ ನಾಜೂಕಾಗಿ ತೆರೆಯ ಮೇಲೆ ನಿರೂಪಿಸಿದ್ದಾರೆ.
ಚಿತ್ರದ ಕೊನೆಯಲ್ಲಿ ಭಯಾನಕವಾಗಿ ಕಾಡುವ ದೆವ್ವಗಳಿಗೂ ಮಾನವೀಯತೆ, ಕರುಣೆ,ಅನುಕಂಪ ಇದೆ ಎನ್ನುವುದನ್ನು ತೆರೆಗೆ ಕಟ್ಟಿಕೊಡುವ ಮೂಲಕ ತಮ್ಮ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ,
ನಟ ಕೋಮಲ್ ಅವರು ಹಾವ-ಬಾವದ ಮೂಲಕವೇ ಗಮನ ಸೆಳೆದಿದ್ಧಾರೆ. ಈ ಮೂಲಕ ಅಭಿನಯ ನೀರು ಕುಡಿದಷ್ಟು ಸಲೀಸು ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ನಟಿ ಲೇಖಾ ಚಂದ್ರ, ಸಹಕಲಾವಿದರಾದ ಗೋವಿಂದೇ ಗೌಡ, ನಂದಿನಿ ಹಾಗು ಶ್ರೇಯಸ್ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಭೂತ ಬಂಗಲೆಯಲ್ಲಿ ದೆವ್ವಗಳಿಂದ ಬಿಡಿಸಿಕೊಳ್ಳಲು ಸಾದ್ಯವಾಗದೆ ಪರದಾಡುತ್ತಾರೆ. ಜೊತೆಯಲ್ಲಿರುವವರಲ್ಲೇ ಯಾರು ದೆವ್ವ ಎನ್ನುವ ಕುತೂಹಲದಲ್ಲಿ ಚಿತ್ರ ಸಾಗುತ್ತದೆ.
ಭೂತ ಬಂಗಲೆಯಲ್ಲಿ ಸಿಲುಕಿದ ಅವರು ಅಲ್ಲಿಂದ ಪಾರಾಗಿ ಬರ್ತಾರ. ಇಲ್ಲ ಮುಂದೇನಾಗುತ್ತದೆ ಎನ್ನುವುದನ್ನು ತಿಳಿಯಲು ಚಿತ್ರ ನೋಡಬೇಕು.
ನಿರ್ದೇಶಕ ವಿ.ಮರುಳಿ, ಕನ್ನಡಕ್ಕೆ ಒಬ್ಬ ಒಳ್ಳೆಯ ನಿರ್ದೇಶಕನಾಗುವುದನ್ನು ನಿರೂಪಿಸಿದ್ದಾರೆ.
ಚಿತ್ರದ ಛಾಯಾಗ್ರಹಣ ಹಾಗೂ ಸಂಗೀತ ಚನ್ನಾಗಿ ಮೂಡಿ ಬಂದಿದೆ. ಹಿನ್ನೆಲೆ ಸಂಗೀತ ಕೂಡ ಗಮನ ಸೆಳೆಯುತ್ತದೆ.
ತುಂಬಾ ದಿನದ ನಂತರ ಹಾರರ್ ಕಾಮಿಡಿ ಚಿತ್ರ ತೆರೆಗೆ ಬಂದಿದೆ. ಹಾಗೇ ಕೋಮಲ್ ಅಭಿಮಾನಿಗಳಿಗೆ ತುಂಬಾ ದಿನದ ನಂತರ ತಮ್ಮ ನಟನನ್ನು ತೆರೆಯ ಮೇಲೆ ನೋಡುವ ಅವಕಾಶ ಒದಗಿ ಬಂದಿದೆ ಎನ್ನಬಹುದು. ಒಟ್ಟಿನಲ್ಲಿ ಈಗ ಒಳ್ಳೆಯ ಚಿತ್ರಗಳು ತೆರೆ ಕಾಣುತ್ತಿರುವುದು ಖುಷಿಯ ವಿಚಾರ.