ಒಂದು ಸರಳ ಪ್ರೇಮ ಕಥೆ ಚಿತ್ರಕ್ಕೆ ವಿದೇಶದಲ್ಲಿ ಭಾರಿ ಬೇಡಿಕೆ
ಒಂದು ಸರಳ ಪ್ರೇಮ ಕಥೆ ಚಿತ್ರಕ್ಕೆ ವಿದೇಶದಲ್ಲಿ ಭಾರಿ ಬೇಡಿಕೆ..
ಕಳೆದ ವಾರ ತೆರೆಕಂಡು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಒಂದು ಸರಳ ಪ್ರೇಮ ಕಥೆ ಚಿತ್ರಕ್ಕೆ ವಿದೇಶಗಳಲ್ಲಿ ತೆರೆ ಕಾಣುವ ಸೌಭಾಗ್ಯ ಹುಡ್ಕೊಂಡು ಬಂದಿದೆ.

ರಾಜ್ಯದ ಜನ ಸಿನಿಮಾ ನೋಡಿ ಮೆಚ್ಚಿಕೊಳ್ತಾ ಇರೋ ಬೆನ್ನಲ್ಲೇ ವಿದೇಶಗಳಲ್ಲಿ ವಿತರಣ ಮಾಡು ಕಂಪನಿ ಚಿತ್ರತಂಡವನ್ನು ಸಂಪರ್ಕ ಮಾಡಿದೆ.. ಹೌದು ಸಿಂಪಲ್ ಸುನಿ ನಿರ್ದೇಶನದ ವಿನಯ್ ರಾಜ್ ಕುಮಾರ್ ನಟನೆಯ ಒಂದು ಸರಳ ಪ್ರೇಮ ಕಥೆ ಚಿತ್ರಕ್ಕೆ ನೆದರ್ ಲ್ಯಾಂಡ್ , UK , US ,ದುಬೈ ಹಾಗೂ ಇನ್ನಿತರ ಪಾಶ್ಚಿಮಾತ್ಯ ದೇಶಗಳಲ್ಲಿ ಬಿಡುಗಡೆ ಮಾಡಲು ಸ್ಯಾಂಡಲ್ ವುಡ್ ಟಾಕೀಸ್ ಕಂಪನಿ ವಿದೇಶಿ ವಿತರಣಾ ಹಕ್ಕನ್ನು ಖರೀದಿ ಮಾಡಿದ್ದಾರೆ.

ಈ ಶುಕ್ರವಾರದಿಂದ ವಿದೇಶಗಳಲ್ಲಿ ಬಿಡುಗಡೆಯಾಗಲಿದೆ.. ಈ ಮೂಲಕ ಅನಿವಾಸಿ ಕನ್ನಡಿಗರಿಗೆ ಒಂದು ಸರಳ ಪ್ರೇಮ ಕಥೆಯ ಘಮಲು ತಲುಪಲಿದೆ..