ಅಭಿವೃದ್ಧಿಗಳ ಹರಿಕಾರ, ಸರ್ವಧರ್ಮಗಳ ಪ್ರೀತಿಯ ನಾಯಕ ಶ್ರೀ ರಾಮುಲು ರವರು 2024ರ ಲೋಕ ಸಭಾ ಚುನಾವಣೆಗೆ BJP ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಅಭಿವೃದ್ಧಿಗಳ ಹರಿಕಾರ, ಸರ್ವಧರ್ಮಗಳ ಪ್ರೀತಿಯ ನಾಯಕ ಶ್ರೀ ರಾಮುಲು ರವರು 2024ರ ಲೋಕ ಸಭಾ ಚುನಾವಣೆಗೆ BJP ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಬಳ್ಳಾರಿ ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪ್ರಭಲ ಅಭ್ಯರ್ಥಿ ಬಿ.ಶ್ರೀರಾಮುಲುರವರು 2024 ರ ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಜಯಗಳಿಸುವುದು ನಿಖರವಾಗಿದೆ. ಯಾವುದೇ ಸಮಸ್ಯೆ ಬಂದರು ಅವರೊಬ್ಬ ಮಾಸ್ ಲೀಡರ್ ನಂತೆ ಮುಂದೆ ನಿಂತು ಜನರ ಕಷ್ಟಗಳಗೆ ಸ್ಪಂದಿಸುವ ರೀತಿ ಅವರು ಕೇವಲ ಒಂದು ಜಿಲ್ಲೆಗಷ್ಟೇ ಅಲ್ಲದ ರಾಜ್ಯಕ್ಕೆ ಒಬ್ಬ ಒಳ್ಳೆಯ ನಾಯಕನಾಗಿ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ,

ಈ ಹಿಂದೆ ಅವರು ಮಾಡಿರುವ ಅನೇಕ ಸಾಧನೆ ಮತ್ತು ಅಭಿವೃದ್ಧಿ ಕಾರ್ಯಗಳ ಉದಾಹರಣೆಗಳು ಮತ್ತು ಎಸ್ ಟಿ ಸಮುದಾಯದ ಪರ ಒಬ್ಬ ಪ್ರಭಲ ನಾಯಕನಾಗಿ ಹೊರಹೊಮ್ಮಿರುವ ಅವರ ವರ್ಚಸ್ಸು, ಎಲ್ಲಾ ಧರ್ಮ ಜಾತಿಯವರಿಗೂ ಸ್ಪಂದಿಸುವ ಧೀಮಂತಿಕೆ, ಬಡವರ ರೈತರ ಕಾರ್ಮಿಕರ ಪರ ಇರುವ ಕಾಳಜಿ ಅವರನ್ನು ಜನರು ಗೆಲ್ಲಿಸುವಲ್ಲಿ ಎರಡು ಮಾತಿಲ್ಲ ಎನ್ನಬಹುದು.

2006 ರಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ಕೆಂಪೇಗೌಡ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಡಿಪಾಯ ಹಾಕಿದವರು ಶ್ರೀರಾಮುಲುರವರು, ಎಸ್ ಟಿ ಸಮುದಾಯಕ್ಕೆ 7.5%ಗೆ ಮೀಸಲಾತಿಯನ್ನು ಏರಿಸಿದ್ದು, ವಾಲ್ಮೀಕಿ ಜಯಂತಿಗೆ ಸರ್ಕಾರಿ ರಜೆ ಘೋಷಣೆ, ಬಳ್ಳಾರಿಯಲ್ಲಿ ಸುಸಜ್ಜಿತ ಟ್ರಾಮಾ ಕೇರ್ ಸೆಂಟರ್, ಬ್ಯಾಡಿಗಿ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ, ಬಳ್ಳಾರಿ ನಗರದಲ್ಲಿ 2014ರಲ್ಲಿ ಬೃಹತ್ ಕರೆ ಕಟ್ಟಿಸಿದ್ದು, ತುಂಗಭದ್ರಾ ನಾಲೆ, ಹಗರಿ ಕೃಷಿ ವಿಶ್ವ ವಿದ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಯಿ ಮಗು ಆಸ್ಪತ್ರೆಗಳ ನಿರ್ಮಾಣ, ಜಿಂದಾಲ್ ಜೊತೆ ಸೇರಿ 250 ಹಾಸಿಗೆಯ ಅತ್ಯಾಧುನಿಕ ಆಸ್ಪತ್ರೆಯ ನಿರ್ಮಾಣ,

ಈ ಹಿಂದೆ ರಾಜ್ಯ ಆರೋಗ್ಯ ಸಚಿವರಾಗಿದ್ದಾಗ 108 ಉಚಿತ ಆಂಬುಲೆನ್ಸ್ ಗಳನ್ನು ಮೊಟ್ಟಮೊದಲ ಬಾರಿಗೆ ರಾಜ್ಯಕ್ಕೆ ಪರಿಚಯಿಸಿದ್ದು ಇದೇ ಶ್ರೀ ರಾಮುಲು, ಸುಮಾರು 60000 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ, ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಅಂಕಿತ ಹಾಕುವ ಮೂಲಕ ಪ್ರವಾಸೋದ್ಯಮಕ್ಕೆ ಮತ್ತಷ್ಟು ಅನುಕೂಲವಾಗುವಂತೆ ಮಾಡಿದ್ದು ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ತಮ್ಮ ಜನರಿಗಾಗಿ ಇಪ್ಪತ್ನಾಲ್ಕು ಗಂಟೆಗಳೂ ದುಡಿಯುವ, ಸತ್ಯ, ಪ್ರಾಮಾಣಿಕತೆಯನ್ನೇ ಉಸಿರಾಡುವ ವಿಶ್ವವೇ ಭಾರತದೆಡೆ ತಿರುಗಿ ನೋಡುವಂತೆ ಮಾಡಿದ ಸನ್ಮಾನ್ಯ ಪ್ರಧಾನಿಗಳ ಅಗತ್ಯತೆ ದೇಶಕ್ಕೆ ಹೇಗೋ? ಬಳ್ಳಾರಿ ವಿಜಯನಗರ ಜಿಲ್ಲೆಗಳು ದೇಶದಲ್ಲೇ ಮಾದರಿ ಜಿಲ್ಲಗಳನ್ನಾಗಿಸಬೇಕೆಂದು ಪಣ ತೊಟ್ಟಿರುವ ಶ್ರೀರಾಮುಲು ಸಹ ಅವಳಿ ಜಿಲ್ಲೆಗಳಿಗೆ ಅಷ್ಟೇ ಅನಿವಾರ್ಯತೆ ಇದ್ದು ದಯಮಾಡಿ ಕ್ಷೇತ್ರದ ಎಲ್ಲಾ ಮತದಾರರು ಬಿಜೆಪಿ ಪಕ್ಷದ ಹೆಮ್ಮೆಯ ಅಭ್ಯರ್ಥಿ ಶ್ರೀ ರಾಮುಲುರವರಿಗೆ ಬಹುಮತ ನೀಡಿ ಆಯ್ಕೆ ಮಾಡ ಬೇಕೆಂಬುದು ಎಲ್ಲರ ಆಶಯವಾಗಿದೆ.

ಶ್ರೀ ರಾಮುಲು ಜನಪರ ಧ್ವನಿಯಾಗಿ, ಸಮಾಜದ ಒಳಿತಿಗಾಗಿ, ಇನ್ನಷ್ಟು, ಮೊಗದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮಾನ್ಯ ಮತದಾರರು ಅವರನ್ನು ಬಹುಮತಗಳಿಂದ ಗೆಲ್ಲಿಸಿ ಜಯಮಾಲೆಯನ್ನು ಹಾಕುವುದರಲ್ಲಿ ಎರಡು ಮಾತಿಲ್ಲ.