ಅನಿರುದ್ದ್ ಅಭಿನಯದ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ
ಅನಿರುದ್ ನಾಯಕ ನಟನಾಗಿ ಅಭಿನಯದ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆಯಿತು.
ಆನಂದ್ ರಾಜ್ ರವರು ಕಥೆ ಬರೆದಿದ್ದು ತಾವೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ
ರಾಚೆಲ್ ಡೇವಿಡ್ ಹಾಗೂ ನಿಧಿ ಸುಬ್ಬಯ್ಯ ರವರು ಈ ಚಿತ್ರದ ನಾಯಕಿಯರಾಗಿ ತೆರೆ ಹಂಚಿಕೊಳ್ಳಲಿದ್ದಾರೆ.
ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಗಣೇಶ್ ಪರಶುರಾಮ್ ರವರು ಬರೆಯುತ್ತಿದ್ದಾರೆ.
ಇದಕ್ಕೆ ಸರ್ವೋತ್ತಮ್ ರಾಜು ರವರು ನಿರ್ಮಾಪಕರಾಗಿದ್ದಾರೆ. ಉದಯಲೀಲಾ ರವರ ಛಾಯಾಗ್ರಹಣ, ವಿಜೇತ್ ಚಂದ್ರರವರ ಸಂಕಲನ, ರಿತ್ವಿಕ್ ಮುರಳಿಧರ್ ರವರ ಸಂಗೀತ ನಿರ್ದೇಶನ, ಆಶಿಕ್ ಕುಸುಗೊಳ್ಳಿ ರವರ ಡಿ.ಐ. (ವಿಕ್ರಾಂತ್ ರೋಣ ಖ್ಯಾತಿ), ನರಸಿಂಹಮೂರ್ತಿ ರವರ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ರವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ಸೌಂಡ್ ಡಿಸೈನರ್ ಆಗಿ ಬಿ.ಆರ್ ನವೀನ್ ಕುಮಾರ್ ರವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ಚಿತ್ರದ ಸ್ಕ್ರಿಪ್ಟ್ ಪೂಜೆಗೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ದ್ ರವರ ಶ್ರೀಮತಿ ಕೀರ್ತಿ ಯವರು ಭಾಗವಹಿಸಿದ್ದರು.
ತಮ್ಮೆಲ್ಲರ ಆಶೀರ್ವಾದ ಹಾಗೂ ಹಾರೈಕೆ ಚಿತ್ರ ತಂಡದ ಮೇಲಿರಲಿ ಎಂಬುದು ನಮ್ಮ ಆಶಯ.🙏🤗❤️