Capture movie poster Release ಪ್ರಿಯಾಂಕ ಉಪೇಂದ್ರ ಅಭಿನಯದ “ಕ್ಯಾಪ್ಚರ್” ಚಿತ್ರದ 60 ಅಡಿಯ ಪೋಸ್ಟರ್ ರಿಲೀಸ್
ಮೊಟ್ಟ ಮೊದಲಬಾರಿಗೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ವೀರೇಶ್ ಚಿತ್ರಮಂದಿರದ ಮುಂದೆ 60 ಅಡಿಯ ಫೋಸ್ಟರ್ ಬಿಡುಗಡೆಯಾಗಿದೆ.
ಪ್ರಿಯಾಂಕ ಉಪೇಂದ್ರ ಅಭಿನಯದ “ಕ್ಯಾಪ್ಚರ್” ಚಿತ್ರದ 60 ಅಡಿಯ ಪೋಸ್ಟರ್ ರಿಲೀಸ್ ಮಾಡಲು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಜ್ವಲ್ ದೇವರಾಜ್ ಆಗಮಿಸಿ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದರು.
ಈ ಚಿತ್ರವನಗನು CC ಕ್ಯಾಮರಾ ದಲ್ಲಿ ನಡೆಯುವ ಕೆಲವು ಘಟನೆಯಾದಾರಿತ ಕಥೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.ನಿರ್ದೇಶಕ ಲೋಹಿತ್.
ಲೋಹಿತ್ ಈಗಾಗಲೇ ಪ್ರಿಯಾಂಕ ಉಪೇಂದ್ರರವರೊಂದಿಗೆ ಇದು ಮೂರನೇ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಶ್ರೀ ದುರ್ಗಾ ಪರಮೇಶ್ವರಿ ಪ್ರೊಡಕ್ಷನ್ ಮೂಲಕ ಈ ಚಿತ್ರ ನಿರ್ಮಾಣವಾಗುತ್ತಿದ್ದು ಮೊದಲ ಬಾರಿಗೆ ರವಿರಾಜ್ ನಿರ್ಮಾಪಕರಾಗಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ರವಿರಾಜ್ ಈಗಾಗಲೇ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ಚಿರ ಪರಿಚಿತರಾಗಿದ್ದಾರೆ.
ಇಇದೇ ಸಂದರ್ಭದಲ್ಲಿ ಮಾತಾಡಿದ ಉಪೇಂದ್ರ ಮನೇಲಿ ರುಚಿ ರುಚಿಯಾಗಿ ಅಡುಗೆ ಮಾಡಿಕೊಂಡೆ 51 ಸಿನಿಮಾ ಮಾಡಿಬಿಟ್ಟರು ಎಂದು ರೇಗಿಸುತ್ತಲೇ ತಂಡಕ್ಕೆ ಶುಭಕೋರಿದರು. ಹಾಗೂ ಛಾಯಾಗ್ರಾಹಕನಿಗೆ ಕನ್ನಡ ಬರದೇ ತಮಿಳಿನಲ್ಲಿ ಮಾತಾಡುವೆ ಎಂದಾಗ ಉಪ್ಪಿ ಆತನಿಗೆ ಕನ್ನಡ ಹೇಳಿಕೊಟ್ಟು ಕನ್ನಡದಲ್ಲೇ ಮಾತಾಡುವಂತೆ ಮಾತಾಡಿ ಅಭಿಮಾನಿಗಳಿಗೆ ಖುಷಿ ಮತ್ತು ಹೆಮ್ಮೆಯ ಭಾವವನ್ನು ಮೂಡಿಸಿದರು.

ಹಾಗೂ ಅತಿಥಿಯಾಗಿ ಬಂದ ಪ್ರಜ್ವಲ್ ಪೋಸ್ಟರ್ ಬಿಡುಗಡೆಗೆ ಉಪ್ಪಿ ಅವರೊಂದಿಗೆ ಕೈ ಜೋಡಿಸಿ ಮಾತಾಡಿ ನಾನು ಕಾಲೇಜ್ ನಲ್ಲಿ ಓದ ಬೇಕಾದರೆ ಮೇಡಮ್ ಅವರ ಚಿತ್ರಗಳನ್ನು ನೋಡುತ್ತಿದ್ದೆ. ಈ ದಿನ ಅವರೊಂದಿಗೆ ವೇದಿಕೆಯಲ್ಲಿ ನಿಂತಿರುವುದು ಖುಷಿಯಾಗುತ್ತಿದೆ, ಉಪ್ಪಿ ಸಾರ್ ಹಾಗೂ ಪ್ರಿಯಾಂಕ ಮಠಡಮ್ ಸಿನಿಮಾ ನೋಡಲು ನಾನು ಕಾಯುತ್ತಿದ್ದೇನೆ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.