Bhima and Krishnam pranaya sakhi movies creating history repeat ಭೀಮಾ, ಕೃಷ್ಣಂ ಪ್ರಣಯಸಖಿ ಚಿತ್ರಗಳ ಮೂಲಕ ಮತ್ತೆ ಇತಿಹಾಸ ಮರುಕಳಿಸುತ್ತಿದೆಯಾ..?

ಮತ್ತೆ 17 ವರ್ಷಗಳ ಇತಿಹಾಸ ಮರುಕಳಿಸುತ್ತಿದೆಯಾ..?
ಹೌದು ಮುಂಗಾರು ಮಳೆ 29 December 2006ರಲ್ಲಿ
ಹಾಗೆಯೇ ಅದರ ಬೆನ್ನಲ್ಲೆ ದುನಿಯಾ 23 February 23, 2007ರಂದು ತೆರೆ ಕಂಡ ಸೂಪರ್ ಹಿಟ್ ಚಿತ್ರಗಳು ಚಿತ್ರರಂಗಕ್ಕೆ ಹೊಸಬರ ಅಲೆಗೆ ಕಾರಣವಾದ ಚಿತ್ರಗಳು ಅಂತಲೇ ಹೇಳಬಹುದು

ಅಂದು ಇಬ್ಬರು ನಿರ್ದೇಶಕರು ಒಂದು ರೀತಿಯಲ್ಲಿ ಗುರು ಶಿಷ್ಯ ಅನ್ನಬಹುದು ಅಥವಾ ಒಂದೇ ಗರಡಿಯ ತಯಾರಾದ ಸಿನಿಮಾ ಉಸ್ತಾದ್ ಗಳು ಅನ್ನಲೂ ಬಹುದಾದ ಯೋಗರಾಜ ಭಟ್ರು ಮತ್ತು ಸೂರಿ ಈ ಇಬ್ಬರು ನಿರ್ದೇಶಕರು ಬೆಳ್ಳಿತೆರೆಗೆ ಈ ಎರಡು ಬ್ಲಾಕ್ ಬಸ್ಟರ್ ಚಿತ್ರ ನೀಡಿ ಚಿತ್ರ ರಂಗಕ್ಕೆ ಒಂದಷ್ಟು ಪುಷ್ಠಿಯನ್ನು ತಂದು ಕೊಟ್ಟಿದ್ದರು.


ಈ ಚಿತ್ರಗಳ ಮೂಲಕ ಕಾಮಿಡಿ ಟೈಂ ಗಣೇಶ್, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ವಿಜಯ್ ಕುಮಾರ್ ದುನಿಯಾ ವಿಜಯ್ ಅಂತಲೇ ಮನೆ ಮಾತಾದರು, ಸಿನಿ ರಸಿಕರ ಎದೆಯಲ್ಲಿ ತಮ್ಮದೇ ಆದ ವೇದಿಕೆಯನ್ನು ಸೃಷ್ಠಿಕೊಂಡರು.
ಈ ಸಿನಿಮಾಗಳ ಮೂಲಕ ದೇವದಾಸ್ ಎಂಬ ಮೊಲ ಹಿಡಿದುಕೊಂಡು ಬಂದ ಗಣೇಶ್ ಮತ್ತು ಎರಡೇ ಎರಡು ಟೊಮೆಟೊ ಹಿಡಕೊಂಡು ಬಂದ ವಿಜಯ್ ಹೊಸ ಕಲಾವಿದರಿಗೆ ಚಿತ್ರರಂಗದ ಬಾಗಿಲು ತೆರೆಯಲು ಮುನ್ನುಡಿ ಬರೆದರು.


ನಾಯಕ ನಟರು ಹೇಗೆ ಇದ್ದರೂ ಕಥೆ ಮುಖ್ಯ ಎನ್ನುವುದಕ್ಕೆ ಈ ಎರಡು ಸಿನಿಮಾಗಳೇ ಕಾರಣ.
ಇಲ್ಲಿಂದ ಶುರುವಾದದ್ದೇ ಹೊಸಬರ ಪರ್ವ ಎನ್ನಬಹುದು. ವರ್ಷಕ್ಕೆ ನೂರು ದಾಟದಿದ್ದ ಸಿನಿಮಾಗಳು ವರ್ಷಕ್ಕೆ ಇನ್ನೂರರ ಗಡಿದಾಟಿ ಸಿನಿಮಾ ಒಂದು ಮನರಂಜನೆಯ ಜೊತೆಗೆ ಕಮರ್ಷಿಯಲ್ ಆಗಿ ಉದ್ಯಮವಾಗಿ ಬೆಳೆಯಿತು.
ಭೂ ಮಾಫಿಯಾದ ಹಣ ಹರಿದು ಬಂತು ಸಿಕ್ಕ ಸಿಕ್ಕವರೆಲ್ಲಾ ಹೀರೋಗಳಾಗಲು ವೇದಿಕೆ ಸೃಷ್ಟಿಯಾಯಿತು. ಇದರಿಂದಾಗಿ ಸಾವಿರಾರು ತಂತ್ರಜ್ಞರು, ಕಲಾವಿದರ ಬದುಕು ಹಸನಾಯ್ತು. ಈ ಸಿನಿಮಾಗಳ ಮೂಲಕ ಪೂಜಾಗಾಂಧಿ ಹಾಗೂ ರಶ್ಮಿ ಚಿತ್ರ ಜಗತ್ತಿಗೆ ಪರಿಚಯವಾದರು.


ಈಗ ಕನ್ನಡ ಚಿತ್ರರಂಗವಷ್ಟೇ ಅಲ್ಲ ಭಾರತಾದ್ಯಂತ ಎಲ್ಲಾ ಭಾಷೆಗಳ ಚಿತ್ರರಂಗ ಪ್ರೇಕ್ಷಕರ ಕೊರತೆ ಎದುರಿಸುತ್ತಿದೆ.
ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಸ್ವಲ್ಪ ಜಾಸ್ತಿನೇ ಕಾಣುತ್ತಿದೆ.
ಇಂಥಹ ಸಮಯದಲ್ಲಿ ಇದೇ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ದುನಿಯಾ ವಿಜಯ್ ಇವರಿಬ್ಬರ ಚಿತ್ರಗಳು ತೆರೆಗೆ ಬರುತ್ತಿವೆ. ಶ್ರೀನಿವಾಸ್ ರಾಜು ನಿರ್ದೇಶನದಲ್ಲಿ ಗಣೇಶ್ ಅಭಿನಯದಲ್ಲಿ “ಕೃಷ್ಣಂ ಪ್ರಣಯ ಸಖಿ”
ಹಾಗೂ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ  ಭೀಮಾ” ಚಿತ್ರಗಳು ಒಂದು ವಾರದ ಅಂತರದಲ್ಲಿ ಬಿಡುಗಡೆಯಾಗುತ್ತಿವೆ. ಪ್ರೀತಿ ಪ್ರೇಮದಲ್ಲಿ ಅರಳಿರುವ ಹೂ ಹಿಡಿದು ಬರುತ್ತಿರುವ ಕ್ಲಾಸ್ ಸಿನಿಮಾ “ಕೃಷ್ಣಂ ಪ್ರಣಯಸಖಿ” ಹಾಗೂ ಆಕ್ಷನ್ ಮೂಲಕ ಇಂದಿನ ಯುವ ಪೀಳಿಗೆಗೆ ಒಂದಷ್ಟು ತಿದ್ದಿ ಬುದ್ದಿ ಹೇಳಲು ಮಚ್ಚು ಲಾಂಗ್ ಹಿಡಿದು ಬರುತ್ತಿರುವ “ಭೀಮಾ”.


ಈ ಎರಡು ಚಿತ್ರಗಳು ಗೆಲ್ಲುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಈ ಚಿತ್ರಗಳ ಮೂಲಕ ಇಬ್ಬರೂ ನಟರ ಅಭಿಮಾನಿ ಪ್ರೇಕ್ಷಕರು ಚಿತ್ರಮಂದಿರಗಳ ಕಡೆಗೆ ಮುಖ ಮಾಡುವ ಲಕ್ಷಣಗಳು ಕಾಣುತ್ತಿವೆ. ಮತ್ತೆ ಆ ದಿನಗಳ ಸಂಭ್ರಮ ಗರಿಗೆದರಿ ಮತ್ತೆ ಚಿತ್ರ ರಂಗ ಪ್ರಕಾಶಿಸಲಿದೆ ಎನ್ನುವುದು ಸಿನಿಮಾ ರಂಗದವರ ನಂಬಿಕೆ ಹಾಗೂ ಕಾತುರ.

ಮೊದಲೇ ಹೇಳಿದಂತೆ ಈ ಇಬ್ಬರು ನಟರ ಚಿತ್ರಗಳಿಂದ ಮತ್ತೆ ಜನ ಸಿನಿಮಾ ಮಂದಿರಗಳ ಕಡೆಗೆ ಬರುವಂತಾಗಲಿ, ಮತ್ತೆ ಇತಿಹಾಸ ಮರುಕಳಿಸಲಿ ಎನ್ನುವುದು ನಮ್ಮ ಆಶಯ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor