Ananthnag golden jubilee ಗಂಧರ್ವ ಲೋಕದ ಸುಂದರನ ಬಣ್ಣದ ಹೆಜ್ಜೆಗಳು

ಅನಂತ್ ನಾಗ್ ಕನ್ನಡ ಚಿತ್ರ ರಂಗ ಕಂಡ ಯಾವ ಅಂದಾಜಿಗೂ ನಿಲುಕದ ಸರಳ, ನೇರ ನುಡಿಯ ಸುಂದರ ಮೇರು ನಟ.

ರಂಗಭೂಮಿಯ ಹಿನ್ನೆಲೆಯಿಂದ ಬಂದ ಅನಂತ್ ನಾಗ್
1972 ರಲ್ಲಿ “ಸಂಕಲ್ಪ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಸಿನಿ ಪಯಣಕ್ಕೆ ತಮ್ಮದೇ ಆದ ಹೊಸ ಅಧ್ಯಾಯ ತೆರೆದರು.

ಹಾಗೂ ಅದೇ ವರ್ಷ ಶ್ಯಾಮ್ ಬೆನಗಲ್ ರವರ “ಅಂಕುರ್” ಚಿತ್ರದಿಂದ ಹಿಂದಿಯಲ್ಲೂ ಬಣ್ಣದ ಹೆಜ್ಜೆಗೆ ಗೆಜ್ಜೆಕಟ್ಟಿ ಸಿನಿ ಪಯಣ ಶುರು ಮಾಡಿ ಸುಮಾರು 7 ಹಿಂದಿ ಚಿತ್ರಗಳಲ್ಲಿ ನಟಿಸಿ ಕನ್ನಡದ ಮಣ್ಣಿನ ನಟ ಹಾಲಿವುಡ್ ನಲ್ಲೂ ತಮ್ಮ ಪತಾಕೆ ಹಾರಿಸಿದರು ಅವುಗಳಲ್ಲಿ 6 ಚಿತ್ರಗಳನ್ನು ಶ್ಯಾಮ್ ಬೆನಗಲ್ ಅವರ ನಿರ್ದೆಶನದಲ್ಲಿ ನಟಿಸಿರುವುದು ಮತ್ತಷ್ಟು ವಿಶೇಷ.
ನಂತರ ಕನ್ನಡ ಸಿನಿಮಾ ಭೀಷ್ಮ ಎಂದೇ ಕರೆಯಲ್ಪಡುವ  ಜಿ.ವಿ.ಅಯ್ಯರ್ ನಿರ್ದೇಶನದ “ಹಂಸಗೀತೆ” ಚಿತ್ರದಲ್ಲಿ ಸಂಗೀತಗಾರ ವೆಂಕಟಸುಬ್ಬಯ್ಯನವರ ಪಾತ್ರ ಅನಂತನಾಗ್ ರವರ ಅಭಿನಯಕ್ಕೆ ಸಾಣೆ ಹಿಡಿದಂತಾಯಿತು.

1975 ರಲ್ಲಿ  ದೊರೈ ಭಗವಾನ್ ರವರ ಜೋಡಿ ನಿರ್ದೇಶನದಲ್ಲಿ ಮೂಡಿ ಬಂದ `ಬಯಲುದಾರಿ’ ಚಿತ್ರದಲ್ಲಿ ಅನಂತ್, ಕಲ್ಪನಾ ಜೋಡಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿತ್ತು, ಕನ್ನಡಿಗರ ಮನಸ್ಸಿಗೆ ಅನಂತ್ ಬಹಳ ಹತ್ತಿರವಾದರು, ಅದರಲ್ಲೂ ಹೆಣ್ಣು ಮಕ್ಕಳ ಎದೆಯಲ್ಲಿ
ಅವಲಕ್ಕಿ ಕುಟ್ಟಲು ಶುರು ಮಾಡಿದರು ನೀಲ ಕೇಶದ ಗಂಧರ್ವ ಲೋಕದ ಸುಂದರ.

ನಟಿ ಲಕ್ಷಿಯವರ ಜೊತೆ `ಚಂದನದ ಗೊಂಬೆ’ ಚಿತ್ರದ ಮೂಲಕ ಸುಮಾರು 25 ಚಿತ್ರಗಳಲ್ಲಿ ನಟಿಸಿ ಸರಣಿ ಯಶಸ್ವಿಯ ಉತ್ತುಂಗಕ್ಕೇರಿದರು.


ರಾಜಕೀಯ ರಂಗದಲ್ಲೂ ತಮ್ಮ ಚಾಪನ್ನು ಮೂಡಿಸುವುದರ ಜೊತೆಗೆ ನಗರಾಭಿವೃದ್ಧಿ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ
ಅನಂತ್ ನಾಗ್ ರವರು ಸುಮಾರು 7 ಭಾಷೆಗಳಲ್ಲಿ ತಮ್ಮ ಅಭಿನಯದ ಕೌಶಲ್ಯವನ್ನು ಮೆರೆದಿದ್ದಾರೆ
ಈಗ ಅವರು ಸದ್ಯದಲ್ಲೇ 75ನೇ ವಸಂತದ ಹೊಸ ಅದ್ಯಾಯ ತೆರೆಯಲು ಮುಂದಾಗಿದ್ದಾರೆ.

ಈ ಅದ್ಯಾಯದಲ್ಲಿ ಅದೇನು ಹೊಸ ಅಚ್ಚರಿಗಳು ಕಾದಿವೆಯೋ ದೇವರೇ ಬಲ್ಲ.
ಅವರ ಸಿನಿ ಪಯಣದ ಬದುಕಿಗೆ
ಇದೇ ಆಗಷ್ಟಿಗೆ 50ನೇ ಸುವರ್ಣ ಹೆಜ್ಜೆಗಳು ಸಾಕ್ಷಿಯಾಗಿವೆ.
ಈ 50ರ ಸಂಭ್ರಮಕ್ಕೆ
ತಳಿರು ತೋರಣಗಳನ್ನು ಕಟ್ಟಿ ಸಂಭ್ರಮಿಸಿದ್ದು “ಶ್ರೀರಾಘವೇಂದ್ರ ಚಿತ್ರವಾಣಿ”
70 ದಶಕದಲ್ಲಿ ಪ್ರಚಾರಕರ್ತ ಹುದ್ದೆಯನ್ನು ಸೃಷ್ಟಿಸಿ ಕನ್ನಡ ಚಿತ್ರರಂಗಕ್ಕೆ ಮೊದಲ ಪ್ರಚಾರಕರ್ತನಾಗಿ ಕೆಲಸ ಶುರುಮಾಡಿದ್ದು ದಿ|| ಡಿ.ವಿ. ಸುಧೀಂದ್ರ.


ಸುಧೀಂದ್ರ ಹುಟ್ಟುಹಾಕಿದ “ಶ್ರೀರಾಘವೇಂದ್ರ ಚಿತ್ರವಾಣಿ” ಸಂಸ್ಥೆ ಈಗಾಗಲೇ ಸುಮಾರು 47 ವರ್ಷಗಳ ಸಂಭ್ರಮದ ಆಸುಪಾಸಿನಲ್ಲಿದೆ.

ಬಹಳ ಹಿಂದಿನಿಂದ ಅನಂತ್ ನಾಗ್ ಹಾಗೂ “ಶ್ರೀರಾಘವೇಂದ್ರ ಚಿತ್ರವಾಣಿ” ಯ ನಡುವೆ ಅವಿನಾಭಾವ ಸಂಭಂದ ಹೊಂದಿದ್ದರು
ಅದಕ್ಕೆ ಸಾಕ್ಷಿಯಾಗಿ ಸುಧೀಂದ್ರ ನಿರ್ಮಾಣದ ಗಣೇಶನ ಮದುವೆ, ಗಣೇಶನ ಗಲಾಟೆ ಚಿತ್ರಗಳೇ ಸಾಕ್ಷಿ.


ಹಾಗೇ ಇನ್ನೂ ಹೇಳಬೇಕೆಂದರೆ ಅನಂತ್ ನಾಗ್ ರವರ 50ರ ಸಿನಿ ಪಯಣವನ್ನು ಮತ್ತಷ್ಟು ಸಂಭ್ರಮಗೊಳಿಸಿದ್ದು ಇದೇ ರಾಘವೇಂದ್ರ ಚಿತ್ರವಾಣಿ.
ಸುವರ್ಣ ಅನಂತ ಎಂಬ ಕಾರ್ಯಕ್ರಮದ ಅಡಿಯಲ್ಲಿ
ಅನಂತ್ ನಾಗ್ ರವರನ್ನು ಗೌರವಿಸಿ ಸನ್ಮಾನಿಸುವ ಅದೃಷ್ಟ “ಶ್ರೀರಾಘವೇಂದ್ರ ಚಿತ್ರವಾಣಿಯ ಸುಧೀಂದ್ರ ವೆಂಕಟೇಶ್ ರವರಿಗೆ ಸಿಕ್ಕಿದ್ದು ಅದೃಷ್ಟವೇ ಸರಿ.


ಯಾವ ಸನ್ಮಾನ ಗಳಿಗೂ ಒಪ್ಪದ ಅನಂತ್ ರವರು ವೆಂಕಟೇಶ್ ಹಾಗೂ ಅವರ ಸಹೋದರರ ಮೇಲಿನ ಪ್ರೀತಿ ಮತ್ತು ನಂಬಿಕೆಗೆ ಹಸಿರು ನಿಶಾನೆ ತೋರಿದರು.
ಈಕಾರ್ಯಕ್ರಮದಲ್ಲಿ ಎಲ್ಲಿಯೂ ಲೋಪವಾಗದಂತೆ ವೆಂಕಟೇಶ್ & ಬ್ರದರ್ಸ್ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ.


ಇದರಿಂದಾಗಿ ವೆಂಕಟೇಶ್, ಅನಂತ್ ನಾಗ್ ಹಾಗೂ ಅವರ ಶ್ರೀಮತಿ ಗಾಯತ್ರಿಯವರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ರಮೇಶ್ ಅರವಿಂದ್ ಕೂಡ ಈ ಕಾರ್ಯಕ್ರಮದಲ್ಲಿ ಅನಂತ್ ರವರ ಗತಕಾಲದ ವಿಷಯಗಳನ್ನು ಕೆದಕಿ ಸಂದರ್ಶನ ಮಾಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗನ್ನು ತಂದಿದ್ದರೆ.


ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರೆಲ್ಲರೂ ಒಟ್ಟಿಗೆ ಪಾಲ್ಗೊಂಡು ಅನಂತ್ ನಾಗ್ ರವರ ಸಿನಿ ಪಯಣಕ್ಕೆ ಶುಭಕೋರಿದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor