“Vishnu Priya” movie review. ವಿಷ್ಣು ಪ್ರಿಯಾ ಚಿತ್ರ ವಿಮರ್ಶೆ. ಪರಿಶುದ್ಧ ಪ್ರೇಮಕಥೆ
ಚಿತ್ರ ವಿಮರ್ಶೆ – ವಿಷ್ಣು ಪ್ರಿಯಾ
Rating – 3/5.
ಚಿತ್ರ: ವಿಷ್ಣು ಪ್ರಿಯಾ
ನಿರ್ಮಾಣ: ಕೆ. ಮಂಜು ಸಿನಿಮಾಸ್
ನಿರ್ದೇಶನ: ವಿ.ಕೆ. ಪ್ರಕಾಶ್
ಸಂಗೀತ : ಗೋಪಿ ಸುಂದರ್
ಛಾಯಾಗ್ರಹಣ : ವಿನೋದ್ ಭಾರತಿ
ಸಂಕಲನ : ಸುರೇಶ್ ಅರಸ್

ತಾರಾಗಣ : ಶ್ರೇಯಸ್ ಕೆ. ಮಂಜು, ಪ್ರಿಯಾ ವಾರಿಯರ್, ಅಚ್ಯುತ್ ಕುಮಾರ್, ಸುಚೀಂದ್ರ ಪ್ರಸಾದ್, ನಿಹಾಲ್ ರಾಜ್ ಗೌಡ, ಮುಂತಾದವರು.
ಪ್ರೀತಿ ಪ್ರೇಮ ಎಷ್ಟೇ ದಶಕಗಳು ಕಳೆದರು, ಅದಕ್ಕೆ ಅದರದ್ದೇ ಚಾರ್ಮು, ಸ್ವಂತಿಕೆ, ಭಾವನೆಗಳು ನಿರಂತರವಾಗಿ ಜೀವಂತವಾಗಿರುತ್ತದೆ. ಅದಕ್ಕೆ ಸಾಕ್ಷಿಯಾಗಿ ಆಗಾಗ ಕೆಲವು ಸಿನಿಮಾಗಳು, ಕಥೆಗಳು, ಕಾದಂಬರಿಗಳು ಹುಟ್ಟಿಕೊಳ್ಳುತ್ತಲೇ ಇವೆ.

ಇದೇ ನಿಟ್ಟಿನಲ್ಲಿ ಈ ವಾರ ತೆರೆಕಂಡ ಚಿತ್ರ “ವಿಷ್ಣುಪ್ರಿಯ”
ನಿರ್ಮಾಪಕ ಕೆ.ಮಂಜು ರವರ ಕನ್ನಡದ 48ನೇ ಚಿತ್ರ ಇದಾಗಿದೆ.
ಶ್ರೇಯಸ್ ಮಂಜು ಹಿಂದಿನ ಚಿತ್ರಗಳಿಗಿಂತ ಈ ಚಿತ್ರದಲ್ಲಿ ಬಹಳ ಚನ್ನಾಗಿ ಪಾತ್ರದೊಳಗಿಳಿದು ಜೀವ ತುಂಬಿ ಅಭಿನಯಿಸಿದ್ದಾರೆ. ಚಿತ್ರದ ಕಥೆಯು ಚನ್ನಾಗಿ ಮೂಡಿ ಬಂದಿದೆ. ಒಬ್ಬ ಸಾಮಾನ್ಯ ಹುಡುಗ ತನ್ನ ಪ್ರಾಮಾಣಿಕ ಪ್ರೀತಿಗಾಗಿ ಏನೆಲ್ಲಾ ಕಷ್ಟ ಪಡುತ್ತಾನೆ ಎನ್ನುವುದನ್ನು ಶ್ರೇಯಸ್ ಮನ ಮುಟ್ಟುವಂತೆ ಸಹಜವಾಗಿ ಅಭಿನಯಿಸಿದ್ದಾರೆ.
ಹಾಗೆಯೇ ಕಣ್ಸನ್ನೆಯ ಹುಡುಗಿ ಪ್ರಿಯಾ ವಾರಿಯರ್ ಕಥಾ ನಾಯಕಿಯಾಗಿ , ಪ್ರೀತಿಸಿದ ಮೇಲೆ ಅನುಭವಿಸಬೇಕಾದ ಕಷ್ಟಗಳಿಗೆ ತನ್ನ ಅಭಿನಯವನ್ನು ಅರ್ಪಿಸಿದರು, ಎಲ್ಲೋ ಒಂದುಕಡೆ ನಮ್ಮ ನೇಟಿವಿಟಿಯ ಭಾವನೆಗಳಿಗೆ ನಮ್ಮ ಕನ್ನಡದ ಹುಡುಗಿ ಬೇಕಿತ್ತು ಎಂದು ಪ್ರೇಕ್ಷಕನ ಮನಸ್ಸು ಬಯಸುತ್ತದೆ.
ಸುಂದರ ಪರಿಸರದಲ್ಲಿ ಅರಳಿದ ಪ್ರೇಮಕಾವ್ಯ ಇದಾಗಿದೆ.
90 ರ ದಶಕದಲ್ಲಿ ಪ್ರೀತಿಗಿದ್ದ ಮಡಿವಂತಿಕೆ ಹಾಗೂ ಪ್ರಾಮಾಣಿಕಥೆಯನ್ನು ನಿರ್ದೇಶಕ ವಿಕೆ. ಪ್ರಕಾಶ್ ಚನ್ನಾಗಿ ಕಟ್ಟಿಕೊಟ್ಟಿದ್ದಾರೆ.

ಸಂಗೀತ ನಿರ್ದೇಶಕ ಗೋಪಿ ಸುಂದರ್ ಸುಶ್ರಾವ್ಯವಾದ ಹಾಡುಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ ಹಿನ್ನೆಲೆ ಸಂಗೀತ ಕೂಡ ತಾಳಬದ್ದವಾಗಿದೆ.
ವಿನೋದ್ ಭಾರತಿ ಪ್ರಕೃತಿಯ ರಮಣೀಯತೆಯ ಸೌಂದರ್ಯವನ್ನು ಪ್ರೇಕ್ಷಕನ ಕಣ್ಣಿಗೆ ಕಟ್ಟಿಕೊಟ್ಟಿದ್ದಾರೆ.
ಅಚ್ಯತ್ ಕುಮಾರ್, ಸುಚೀಂದ್ರ ಪ್ರಸಾದ್, ಅಶ್ವಿನಿ ತಮ್ಮ ಪಾತ್ತಗಳಿಗೆ ಜೀವ ತುಂಬಿದ್ದಾರೆ.
ಒಟ್ಟಿನಲ್ಲಿ ನಿರ್ಮಾಪಕ ತಮ್ಮ ಮಗನಿಗೊಂದು ಒಳ್ಳೆಯ ಚಿತ್ರವನ್ನು ನಿರ್ಮಿಸಿದ್ದಾರೆ.