O2 Movie Review. O2 ಒಂದು ಸಿಂಪಲ್ ಥ್ರಿಲ್ಲರ್ ಕ್ಲಾಸ್ ಲವ್ ಸ್ಟೋರಿ
ಚಿತ್ರ ವಿಮರ್ಶೆ
ಚಿತ್ರ ÷ O2
ರೇಟಿಂಗ್ – 3.5/5
ನಿರ್ಮಾಣ ಸಂಸ್ಥೆ – ಪಿ.ಆರ್.ಕೆ
ನಿರ್ಮಾಪಕರು – ಅಶ್ವಿನಿ ಪುನಿತ್ ರಾಜಕುಮಾರ್
ನಿರ್ದೇಶನ – ಪ್ರಶಾಂತ್ ರಾಜ್, ರಾಘವ್ ನಾಯಕ್
ಛಾಯಾಗ್ರಹಣ – ನವೀನ್ ಕುಮಾರ್ S
ಸಂಗೀತ ಸಂಯೋಜನೆ – ವಿವಾನ್ ರಾಧಾಕೃಷ್ಣ
ಕಲಾವಿದರು – ಆಶಿಕಾ ರಂಗನಾಥ್, ಪ್ರವೀಣ್ ತೇಜ್, ಪ್ರಕಾಶ್ ಬೆಳವಾಡಿ, ರಾಘವ ನಾಯಕ್, ಸಿರಿ ರವಿಕುಮಾರ್ ಮುಂತಾದವರು
ಪಿ. ಆರ್. ಕೆ. ಸಂಸ್ಥೆಯ ಬೆಸ್ಟ್ ಸಿನಿಮಾ “ಓ2”
ಕನ್ನಡದಲ್ಲಿ ಒಳ್ಳೆ ಸಿನಿಮಾಗಳು ಬರುತ್ತಿಲ್ಲ ಅನ್ನುವವರಿಗೆ O2 ಚಿತ್ರ ತಕ್ಕ ಉತ್ತರ.
ಇತ್ತೀಚೆಗೆ ಕನ್ನಡದಲ್ಲಿ ಒಳ್ಳೆ ಸಿನಿಮಾಗಳು ಬರುತ್ತಿವೆ ಆದ್ರೆ ನೋಡುವಂತ ದೊಡ್ಡ ಮನಸ್ಸು ಕನ್ನಡದ ಪ್ರೇಕ್ಷಕರು ಮಾಡಬೇಕು.
O2 ಒಂದು ಸಿಂಪಲ್ ಥ್ರಿಲ್ಲರ್ ಲವ್ ಸ್ಟೋರಿಯ ಕ್ಲಾಸ್ ಸಿನಿಮಾ ಎನ್ನಬಹುದು.
ಪುನೀತ್ ರಾಜಕುಮಾರ್ ರವರು ಒಪ್ಪಿ ಇಷ್ಟ ಪಟ್ಟಿದ್ದ ಕೊನೆಯ ಚಿತ್ರವಾದರು ಈವರೆಗೆ ಪಿ.ಆರ್.ಕೆ. ಸಂಸ್ಥೆಯಲ್ಲಿ ಬಂದ ಚಿತ್ರಗಳಲ್ಲಿ ದಿ. ಬೆಸ್ಟ್ ಸಿನಿಮಾ O2 ಅನ್ನಬಹುದು.
ಇದು ಯವುದೇ ಅನಾವಶ್ಯಕ ಡೈಲಾಗ್ ಗಳಿಲ್ಲದ, ಮುಜುಗರ ತರುವಂತ ದೃಶ್ಯಗಳಿಲ್ಲದ ಕ್ಲಾಸ್ ಸಿನಿಮಾ ಇದಾಗಿದೆ.
ಅಶ್ವಿನಿ ಪುನೀತ್ ರಾಜಕುಮಾರ್ ರವರು ಅಳೆದು ತೂಗಿ ಒಳ್ಳೆಯ ಚಿತ್ರವನ್ನು ನಿರ್ಮಿಸಿ ಕನ್ನಡಿಗರ ಮಡಿಲಿಗಿಟ್ಟಿದ್ದಾರೆ.
ಪುನೀತ್ ರವರು ಇಷ್ಟಪಟ್ಟಿದ್ದ ಕಾರಣಕ್ಕಾಗಿ ತಾವೇ ಸ್ವತಃ ಮುತುವರ್ಜಿಯಿಂದ ಈ ಚಿತ್ರದ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿ ಒಂದಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಸಫಲರಾಗಿದ್ದಾರೆ.
ಓ2 ಚಿತ್ರ ವೈದ್ಯಕೀಯ ಲೋಕದ ಒಂದಷ್ಟು ವಿಸ್ಮಯಗಳ ಅವಿಷ್ಕಾರದ ಬುನಾದಿಯೊಂದಿಗೆ ಚಿತ್ರ ಸಾಗುತ್ತದೆ. ಮನುಷ್ಯ ಸತ್ತ ನಂತರವೂ ಕೆಲವು ಘಂಟೆಗಳ ಒಳಗೆ ಮತ್ತೆ ಬದುಕಿಸ ಬಹುದಾದ ಫಾರ್ಮುಲವೇ ಈ O2.
ಬೇರೆ ದೇಶಗಳಲ್ಲಿ ಈ ಫಾರ್ಮೂಲದ ಅವಿಷ್ಕಾರ ನಿಜಕ್ಕೂ ನಡೆಯುತ್ತಿದ್ದು. ಕೆಲವು ಪ್ರಾಣಿಗಳ ಮೇಲೆ ಪ್ರಯೋಗ ಗಳಾಗಿದ್ದು ಇನ್ನು ಮಾನವನ ಮೇಲೆ ನಡೆಯ ಬೇಕಷ್ಟೆ.
ಇದನ್ನೇ ಮೂಲವಾಗಿಟ್ಟುಕೊಂಡು ಚಿತ್ರಕ್ಕೆ ಕಥೆ ಎಣೆದಿದ್ದಾರೆ ನಿರ್ದೇಶಕದ್ವಯರಾದ ಪ್ರಶಾಂತ್ ಹಾಗೂ ರಾಘವ್. ಮೊದಲ ಬಾರಿಗೆ ಇವರಿಬ್ಬರ ಸಹಯೋಗದಲ್ಲಿ ಚಿತ್ರ ಮೂಡಿಬಂದಿದ್ದು ಸಂಭಷಣೆ ಹಾಗೂ ಚಿತ್ರಕಥೆ ಹೊಸತನದಿಂದ ಕೂಡಿದೆ, ಅಷ್ಟೇ ಅಲ್ಲದೇ ನಿರ್ದೇಶಕ ರಾಘವ್ ಮೊದಲ ಬಾರಿಗೆ ನಿರ್ದೇಶನದ ಜೊತೆಗೆ ನಾಯಕ ನಟನಾಗಿ ಬಣ್ಣ ಹಚ್ಚಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಹಾಗೂ ಪ್ರವೀಣ್ ತೇಜ್ ಮತ್ತು ಆಶಿಕಾ ರಂಗನಾಥ್ ಹಾಗೂ RJ ಸಿರಿ ರವಿಕುಮಾರ್ ಮೊದಲ ಬಾರಿಗೆ ಕಾರ್ಪೆಟ್ ಸ್ಟೈಲ್ ನಲ್ಲಿ RND ಡಾಕ್ಟರ್ ಗಳಾಗಿ ಕಾಣಿಸಿಕೊಂಡಿದ್ದಾರೆ.
ಡಾ, ವೃತ್ತಿಯ ಜೊತೆ ಜೊತೆಗೆ ಒಂದು ಸರಳ ಪ್ರೇಮ ಕಥೆ ಸದ್ದಿಲ್ಲದೆ ಎಲ್ಲರ ಗಮನ ಸೆಳೆದಿದೆ.
ಒಟ್ಟಿನಲ್ಲಿ ಮೊದಲೇ ಹೇಳಿದಂತೆ ಒಳ್ಳೆಯ ಸಿನಿಮಾ “O2” ನಿಮ್ಮ ಚಿತ್ರ ಮಂದಿರಗಳಲ್ಲಿದೆ ನೋಡಿ ಬೆನ್ತಟ್ಟಿ