Hostel hudugaru bekagiddare reviews “ಸಖತ್ ಕಾಮಿಡಿ, ಸಖತ್ ಎಂಟರ್ಟೇನ್ಮೆಂಟ್. ಪ್ರೇಕ್ಷಕರಿಂದ ಮೆಚ್ಚುಗೆಯ ಸುರಿಮಳೆ”
ಸಿನಿಮಾ ನೋಡಲು ಜನ ಚಿತ್ರ ಮಂದಿರಕ್ಕೆ ಬರುತ್ತಿಲ್ಲ ಎಂಬ ಕೂಗಿಗೆ ಈಗ ಸ್ವಲ್ಪ ನೆಮ್ಮದಿ ತರುವಂತಿದೆ.
ಈ ವಾರ ಸುಮಾರು 8 ಚಿತ್ರಗಳ ಬಿಡುಗಡೆಯಾಗಿವೆ ಅವುಗಳಲ್ಲಿ ಕೆಲವು ಗೆಲುವಿನ ಉತ್ಸಾಹ ತೋರಿಸಿವೆ.
ಅವುಗಳಲ್ಲಿ “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ” ಚಿತ್ರ ಬಹಳ ನಿರೀಕ್ಷೆಯನ್ನು ಮೂಡಿಸಿದೆ ಎನ್ನಬಹುದು.
ನಿತಿನ್ ಕೃಷ್ಣಮೂರ್ತಿ ನಿರ್ದೇಶನ ಮಾಡಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಶುಕ್ರವಾರ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುವಲ್ಲಿ ಯಶಸ್ವಿಯಾಗಿದೆ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಗೆ ಚಿತ್ರರಂಗವೇ ಖುಷಿಯಾಗಿದೆ. ಯಾವುದಾದರು ಚಿತ್ರ ಗೆಲ್ಲಲಿ ಎಂಬ ಮಾತಿಗೆ ಈ ವಾರ ಸ್ವಲ್ಪ ನಿರಾಳ ತಂದಿದೆ ಎನ್ನಬಹುದು.

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಇನ್ನೇನು ಬಿಡುಗಡೆಯಾಗುತ್ತದೆ ಎನ್ನುವ ಹೊತ್ತಿನಲ್ಲಿ ಮೋಹಕತಾರೆ ರಮ್ಯ ಅವರು ಕೋರ್ಟ್ ಮೂಲಕ ನೀಡಿದ ತಡೆಯಾಜ್ಞೆಯಿಂದ ಚಿತ್ರ ತಂಡಕ್ಕೆ ಆತಂಕ ಮೂಡಿತ್ತು. ನಂತರ ಸಿನಿಮಾ ನ್ಯಾಯಾಲಯದಲ್ಲಿ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿಕೊಂಡು ಜುಲೈ21 ರಂದು ರಾಜ್ಯದಾದ್ಯಂತ ಎಲ್ಲಾ ಕೇಂದ್ರಗಳಲ್ಲಿಯೂ ಉತ್ತಮವಾದ ಪ್ರದರ್ಶನ ನೀಡಿ ಪ್ರೇಕ್ಷಕರ ಮನ ಸೆಳೆದಿದೆ.
ಇದು ಔಟ್ & ಔಟ್ ಕಾಮಿಡಿ ಎಂಟರ್ಟೇನ್‌ಮೆಂಟ್ ಪ್ಯಾಕೇಜ್ ಸಿನಿಮಾ, ಕಿರಿಕ್ ಪಾರ್ಟಿಯ ನಂತರ ಸ್ಟೂಡೆಂಟ್ ಲೈಫ್ ನ ಫನ್ ಸಿನಿಮಾ ಇದಾಗಿದೆ.

ಗುಲ್‌ಮೊಹರ್ ಫಿಲ್ಮ್ಸ್, ವರುಣ್ ಸ್ಟುಡಿಯೋಸ್ ಬ್ಯಾನರ್‌ನಡಿ ವರುಣ್ ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ರಕ್ಷಿತ್ ಶೆಟ್ಟಿ ಪರಂವಃ ಸ್ಟುಡಿಯೋ ಬ್ಯಾನರ್ ಮೂಲಕ ಪ್ರೆಸೆಂಟ್ ಮಾಡಿದ್ದಾರೆ, ಈ ಸಿನಿಮಾಗೆ ಸಿಕ್ಕಿರುವ ಪ್ರತಿಕ್ರಿಯಿಂದ ಚಿತ್ರತಂಡ ಸಖತ್ ಖುಷಿಯಾಗಿದೆ.
ಇನ್ನು ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರು ಹೊಟ್ಟೆ ಹುಣ್ಣಾಗಿಸುವಷ್ಟು ನಕ್ಕು ಕೊಟ್ಟ ಹಣಕ್ಕೆ ಒಳ್ಳೆಯ ಮನರಂಜನೆ ಪಡೆದ ಖುಷಿಯಲ್ಲಿದ್ದಾರೆ
ಚಿತ್ರದಲ್ಲಿ ಸಂಪೂರ್ಣ ಹೊಸಬರೇ ಇದ್ದರೂ ಪ್ರೇಕ್ಷಕರಿಗೆ ಹೊಸ ಅನುಭವವನ್ನು ಚಿತ್ರ ನೀಡುತ್ತದೆ. ಹಾಸ್ಟೆಲ್ ನಲ್ಲಿ ನಡೆಯುವ ತರಲೆ ತಂಟೆಯನ್ನು ನಿರ್ದೇಶಕರು ಬಹಳ ಮಜವಾಗಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಚಿತ್ರದ ಛಾಯಾಗ್ರಹಣ ಹಾಗೂ ಸಂಗೀತ ಚಿತ್ರದ ಗೆಲುವಿಗೆ ಸಾಥ್ ನೀಡಿದೆ.
ಒಟ್ಟಿನಲ್ಲಿ ಹೊಸಬರಿಗೆ ಪ್ರೇಕ್ಷಕರು ರೆಡ್ ಕಾರ್ಪೆಟ್ ಸ್ವಾಗತವನ್ನು ನೀಡಿದ್ದಾರೆ ಚಿತ್ರವನ್ನು ನೋಡಿದವರು ಮೆಚ್ಚಿ ಒಳ್ಳೆಯ ಮಾತುಗಳನ್ನು ಹಾಡುತ್ತಿದ್ದಾರೆ. ಪ್ರೇಕ್ಷಕ ಪ್ರಭುಗಳು ಹೀಗೆ ಚಿತ್ರ ಮಂದಿರಗಳಿಗೆ ಬಂದು ಸಿನಿಮಾ ನೋಡಿದರೆ ಕನ್ನಡ ಚಿತ್ರಗಳು ಗೆಲ್ಲುತ್ತವೆ.
ಹಾಸದಟೆಲ್ ಹುಡುಗರು ಚಿತ್ರ ನೋಡಿ