“ನೋಡದ ಪುಟಗಳು ಚಿತ್ರಕ್ಕೆ ಬಿಡುಗಡೆಯ ಭಾಗ್ಯ ಚಿತ್ರತಂಡಕ್ಕೆ ಎಲ್ಲಿಲ್ಲದ ಸಂಭ್ರಮ”
“ನೋಡದ ಪುಟಗಳು ಚಿತ್ರಕ್ಕೆ ಬಿಡುಗಡೆಯ ಭಾಗ್ಯ ಚಿತ್ರತಂಡಕ್ಕೆ ಸಂಭ್ರಮ”
ಕೌತುಕದ ನೋಡದ ಪುಟಗಳು ತಮ್ಮದೇ ಆದ ಮಹತ್ವಗಳನ್ನು ಹೊಂದಿದೆ
ಪ್ರತಿಯೊಬ್ಬರ ಬದುಕಿನಲ್ಲಿ ನೋಡದೇ ಇರುವಂತ, ನೋಡಲೇ ಬೇಕಾದಂತ ಪುಟಗಳ ಸಮ್ಮಿಶ್ರಣವಿದೆ.
ಬಾಲ್ಯ, ಯೌವನಗಳಲ್ಲಿ ನಡೆದ ಒಂದಷ್ಟು ಘಟನೆಗಳು ಕೊನೆಯವರೆಗೂ ಕಾಡುತ್ತವೆ.
ನಾವು ಅಂದುಕೊಂಡಂತೆ ಆಗದಿದ್ದಾಗ, ನಾವು ಬಯಸಿದವರು ಸಿಗದಿದ್ದಾಗ ಅದೊಂದು ಹತಾಶಭಾವ ಆಗಾಗ ಕಣ್ಣಮುಂದೆ ಆ ದಿನಗಳ ಪುಟಗಳು ತೆರೆದುಕೊಂಡು ಕಾಡುತ್ತಿರುತ್ತದೆ
ಇಂತಹ ಪುಟಗಳೇ ನೋಡದ ಪುಟಗಳ ಕಥೆಯ ಹೂರಣ.
ಎಸ್.ವಸಂತಕುಮಾರ್ ನಿರ್ದೇಶನದ ‘ನೋಡದ ಪುಟಗಳು’ ಬೇರೆಯದೇ ರೀತಿಯಲ್ಲಿ
ಸಂದರ್ಭಗಳನ್ನು ಸೃಷ್ಟಿಸಿಕೊಂಡಂತೆ ಕಾಣುತ್ತದೆ.
ಪ್ರತಿಯೊಬ್ಬ ಹುಡುಗ ಅಥವಾ ಹುಡುಗಿಗೆ ಹೈಸ್ಕೂಲ್ ಹಂತದಲ್ಲಿ ನಡೆಯುವ ಘಟನೆಗಳು ಮಹತ್ವದ್ದಾಗಿರುತ್ತವೆ ಮತ್ತು ಜೀವನದಲ್ಲಿ ಮರೆಯಲಾರದ ಸಂದರ್ಭಗಳೂ ಆಗಿರುತ್ತವೆ.
ಏನು ಅರಿಯದ ವಯಸ್ಸಿನಲ್ಲಾಗುವ ಆಕರ್ಷಣೆಯ ಗೊಂದಲಗಳನ್ನು ಕಟ್ಟಿಕೊಡಲು ನಿರ್ದೇಶಕರು ಯಶಸ್ವಿಯಾದಂತೆ ಕಂಡರು ಅಲ್ಲಲ್ಲಿ ತಡವರಿಸಿದಂತಾಗಿದೆ.
ಕೊನೆಯಲ್ಲಿ ಹೃದಯ ಭಾರವೆನಿಸುವ ಕ್ಲೈಮ್ಯಾಕ್ಸ್ ಚಿತ್ರದ ವಿಶೇಷವಾಗಿದೆ.
ಒಂದು ಸಾವು, ಸಾವಿನ ನಂತರ ನೋಡದ ಪುಟಗಳನ್ನು ನೋಡಬೇಕಾದರೆ ಚಿತ್ರ ನೋಡಬೇಕು
ಕಥಾ ನಾಯಕ ಹಾಗೂ ನಾಯಕಿಯ ಪಾತ್ರದಲ್ಲಿ ಪ್ರೀತಂ ಮಕ್ಕಿಹಳ್ಳಿ ಹಾಗೂ ಕಾವ್ಯಾ ರಮೇಶ್ ಸೇರಿದಂತೆ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ವಿಘ್ನೇಶ್ ಮೆನನ್ ಸಂಗೀತ ಹಾಗೂ ಕುಮಾರ್.ಎನ್ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.
Rating – 3/5